Header Ads Widget

ಸರ್ಚ್ ಕೂರ್ಗ್ ಮೀಡಿಯ

ಗೋಣಿಕೊಪ್ಪಲು ಕಾವೇರಿ ಕಾಲೇಜು ಹಾಗೂ ರೋಟರಿ ಕ್ಲಬ್ ಜಂಟಿ ಆಶ್ರಯದಲ್ಲಿ 75ನೇ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ

ಗೋಣಿಕೊಪ್ಪಲು ಕಾವೇರಿ ಕಾಲೇಜು ಹಾಗೂ ರೋಟರಿ ಕ್ಲಬ್ ಜಂಟಿ ಆಶ್ರಯದಲ್ಲಿ 75ನೇ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ


ಗೋಣಿಕೊಪ್ಪಲು: ಇಲ್ಲಿನ ಕಾವೇರಿ ಕಾಲೇಜು ಮತ್ತು ಗೋಣಿಕೊಪ್ಪಲು ರೋಟರಿ ಕ್ಲಬ್ ಜಂಟಿ ಆಶ್ರಯದಲ್ಲಿ 75ನೇ ಸ್ವಾತಂತ್ರ್ಯ ದಿನಾಚರಣೆ ಆಚರಣೆ ಮಾಡಲಾಯಿತು. 

ಪ್ರಾಧ್ಯಾಪಕ ಎಂ. ಬಿ. ಕಾವೇರಪ್ಪರವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಗೋಣಿಕೊಪ್ಪಲು ರೋಟರಿ ಕ್ಲಬ್ ಅಧ್ಯಕ್ಷೆ ಟಿ ಎಂ ಕಾವೇರಮ್ಮ  ಭಾಗವಹಿಸಿದರು.

ನಂತರ ರೋಟರಿ ಕ್ಲಬ್ ವತಿಯಿಂದ ವಿದ್ಯಾರ್ಥಿಗಳಿಗೆ ಭಾಷಣ  ಸ್ಪರ್ಧೆ ಮತ್ತು ದೇಶ ಭಕ್ತಿ ಗೀತೆಯ ಸ್ಪರ್ಧೆಯನ್ನು ರೋಟರಿ ಕ್ಲಬ್ ವತಿಯಿಂದ ಅಯೋಜಿಸಲಾಗಿತ್ತು. 

ಸಭೆಯನ್ನು ಉದ್ದೇಶಿಸಿ ಮಾತನಾಡಿದ ರೋಟರಿ ಕ್ಲಬ್ ಅಧ್ಯಕ್ಷೆ ಟಿ.ಎಂ. ಕಾವೇರಮ್ಮ ವಿದ್ಯಾರ್ಥಿಗಳು ದೇಶದ ಮುಂದಿನ ನಾಯಕರುಗಳು  "ಹರ್ ಕಾಮ್ ದೇಶ್ ಕೆ ನಾಮ್" ಎಂಭ ಸಂದೇಶವನ್ನು ವಿದ್ಯಾರ್ಥಿಗಳಿಗೆ ಮನ ಮುಟ್ಟುವಂತೆ ಪ್ರಧಾನಿ ಮೋದಿ ಅವರ ಮೇಲೆ ಪ್ರಮಾಣ ವಚನ ಮಾಡಿದರು. ಪ್ರತೀ ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನದಲ್ಲೇ ದೇಶ ಪ್ರೇಮವನ್ನು ಹುಟ್ಟಿಸಕೊಳ್ಳಬೇಕೆಂದು ಟಿ. ಎಂ. ಕಾವೇರಮ್ಮ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಕಾವೇರಿ ಕಾಲೇಜು ಪ್ರಾಂಶುಪಾಲ ಮಾಲೇಟಿರ ಕಾವೇರಪ್ಪ ಮಾತನಾಡಿ ಯುವಕರು ನಾಳೆಯ ದೇಶದ ಪ್ರಜೆಗಳು ಶಿಸ್ತು ಮತ್ತು ಒಳ್ಳೆಯ ಗುಣಗಳು ಒಂದಿಕೊಂಡು ಬಾಳಬೇಕು ದೇಶಕ್ಕೆ ನಮ್ಮಿಂದ ಆಗುವ ಕೊಡುಗೆ ನೀಡಬೇಕು ಎಂದು ವಿದ್ಯಾರ್ಥಿಗಳಿಗೆ ಸಂದೇಶ ನೀಡಿದ್ದರು


ರೋಟರಿ ಕ್ಲಬ್ ವತಿಯಿಂದ ಸನ್ಮಾನ

ಕೈಕೇರಿಯಲ್ಲಿ ಕೋವಿಡ್ ವಾರಿಯರ್ ಆಗಿ ಸೇವೆ ಸಲ್ಲಿಸಿದ ಅಚ್ಚಪಂಡ ಸಂಜನಾ ರವರಿಗೆ ರೋಟರಿ ಕ್ಲಬ್ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಕಾರ್ಯದರ್ಶಿ ಸುಭಾಷಿಣಿ ಮತ್ತು ಸಮಾಜ ಸೇವಕಿ ಸುಮಿ ಸುಬ್ಬಯ್ಯ ಹಾಗೂ ಎನ್ ಸಿಸಿ ಪದಾಧಿಕಾರಿಗಳು ಕಾಲೇಜು ಶಿಕ್ಷಕರುಗಳು ಉಪಸ್ಥಿತರಿದ್ದರು.

✍️ವರದಿ: ಶರಫುದ್ದೀನ್ ಗೋಣಿಕೊಪ್ಪ.

( ಶರಫುದ್ದೀನ್ ಗೋಣಿಕೊಪ್ಪ)
Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,