ಮೇಕೇರಿ - ಹಾಕತ್ತೂರುವಿನಲ್ಲಿ ಗಣೇಶೋತ್ಸವ ಆಚರಣೆ. ಆರ್.ಎಸ್.ಎಸ್. ಪ್ರಮುಖರಿಂದ ಧಾರ್ಮಿಕ ಉಪನ್ಯಾಸ
ಬ್ರಿಟೀಷರ ವಿರುದ್ಧ ಇಡೀ ಸಮಾಜವನ್ನು ಒಟ್ಟುಗೂಡಿಸಿ ಹೋರಾಡುವ ಮೂಲಕ ಸ್ವಾತಂತ್ರ್ಯ ಭಾರತದ ನಿರ್ಮಾಣಕ್ಕೆ ಪ್ರಯತ್ನ ನಡೆಸಿದ ಭಾಲಗಂಗಾದರನಾಥ್ ತಿಲಕ್‌ರ ಮಹತ್ವಾಕಾಂಕ್ಷೆಯ ಗೌರಿಗಣೇಶೋತ್ಸವವು ಇಂದು ದೇಶದ ಗ್ರಾಮ ಗ್ರಾಮಗಳಲ್ಲೂ ನಡೆದು ಸಮಾಜವನ್ನು ಮತ್ತೆ ಒಗ್ಗೂಡಿಸುವ ಕೆಲಸ ಮಾಡುತ್ತಿದೆಯೆಂದು ಆರ್.ಎಸ್.ಎಸ್. ನ ಕೊಡಗು ಜಿಲ್ಲಾ ಕಾರ್ಯವಾಹರಾದ ಶ್ರೀಯುತ ಡಾಲಿಯವರು ಅಭಿಪ್ರಾಯ ವ್ಯಕ್ತಪಡಿಸಿದರು.
ಮಡಿಕೇರಿ ಸಮೀಪದ ಮೇಕೇರಿಯ ಶ್ರಿ ಗೌರಿಶಂಕರ ದೇವಾಲಯದ ಶ್ರಿಗಣೇಶ ಸೇವಾ ಸಮಿತಿ ಹಾಗೂ ಹಾಕತ್ತೂರು ತೊಂಬತ್ತುಮನೆಯ ಶ್ರಿ ವಿನಾಯಕ ದೇವಾಲಯ ಸಮಿತಿಯ ಆಶ್ರಯದಲ್ಲಿ ನಡೆದ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಧಾರ್ಮಿಕ ಉಪನ್ಯಾಸ ಮಾಡಿದ ಆರ್.ಎಸ್.ಎಸ್. ಮುಂಖಡರಾದ ಡಾಲಿಯವರು ಗ್ರಾಮದ ಪ್ರತೀ ಮನೆಗಳಲ್ಲಿ ಹಿರಿಯರು ತಮ್ಮ ತಮ್ಮ ಮಕ್ಕಳಿಗೆ ಮೌಲ್ಯಯುತ ಹಾಗೂ ಸಂಸ್ಕಾರಯುತ ಬದುಕನ್ನು ರೂಢಿಸಿದ್ದೇ ಆದಲ್ಲಿ ಉತ್ತಮ ಸಮಾಜ ನಿರ್ಮಾಣಗೊಂಡು ಇಡೀ ದೇಶವೇ ಸುಭೀಕ್ಷವಾಗುತ್ತದೆಯೆಂದು ತಿಳಿಸಿದರು.
ವ್ಯಸನಮುಕ್ತ ಸಮಾಜ ನಿರ್ಮಾಣ ಮಾಡುವುದರೊಂದಿಗೆ ಮತಾಂತರ ಲವ್ ಜಿಹಾದ್ ಗಳನ್ನು ತಡೆಗಟ್ಟಲು ಸಮಾಜದ ಪ್ರತೀಯೊಬ್ಬರ ಕಾಳಜಿ ಅಗತ್ಯವಿದೆಯೆಂದರು. ಮಿಷಿನರಿ ಶಿಕ್ಷಣ ವ್ಯವಸ್ಥೆ ಹಾಗೂ ಮತಾಂಧರ ಶಿಕ್ಷಣ ವ್ಯವಸ್ಥೆಗಳು ಸಮಾಜದ ಅಧಿಪತ್ಯಕ್ಕಾಗಿ ಸಂಘರ್ಷಗಳನ್ನು ಸೃಷ್ಟಿಸುತ್ತಿರುವುದು ಆತಂಕದ ವಿಷಯವಾಗಿದ್ದು ದೇಶದಲ್ಲಿ ಮತ್ತೆ ಗುರುಕುಲಗಳು ಆರಂಭಗೊಳ್ಳಬೇಕಾದ ಅಗತ್ಯವಿದೆಯೆಂದರು. ದೇಶದಲ್ಲಿ ಆರ್.ಎಸ್.ಎಸ್. ವ್ಯಕ್ತಿ ನಿರ್ಮಾಣದ ಮೂಲಕ ದೇಶ ನಿರ್ಮಾಣ ಕಾರ್ಯವನ್ನು ಕಳೆದ 96 ವರ್ಷಗಳಿಂದ ಮಾಡುತ್ತಿದೆಯೆಂದರು. ಸನಾತನ ಹಿಂದೂ ಧಾರ್ಮಿಕ ಪದ್ಧತಿಗಳನ್ನು ಹಬ್ಬಗಳ ಸಂದರ್ಭ ಮತ್ತು ಪ್ರತೀ ಮನೆಗಳಲ್ಲೂ ಕಟ್ಟುನಿಟ್ಟಾಗಿ ನಿತ್ಯಪಾಲನೆ ಮಾಡುವಂತಾಗಲು ಪೋಷಕರು ಮುತುವರ್ಜಿ ವಹಿಸಬೇಕೇಂದರು.
ನಮ್ಮ ಪತ್ರಿಕೋದ್ಯಮವನ್ನು ಬೆಂಬಲಿಸಿ
"ಸರ್ಚ್ ಕೂರ್ಗ್ ಮೀಡಿಯಾ"ದ ಜೀವನಾಡಿಯಾಗಿರುವ ಪ್ರತಿಯೊಬ್ಬ ಓದುಗರಿಗೆ ಪ್ರೀತಿಯ ಧನ್ಯವಾದಗಳು. ನಿಮ್ಮಂತಹ ಓದುಗರಿಂದಲೇ ಗ್ರಾಮೀಣ ಮತ್ತು ಕೃಷಿ ಪತ್ರಿಕೋದ್ಯಮವನ್ನು ಮುಂದೆ ಸಾಗಿಸಲು ನಮಗೆ ಸ್ಫೂರ್ತಿ ಸಿಗುತ್ತದೆ. ಗುಣಮಟ್ಟದ ಗ್ರಾಮೀಣ ಮತ್ತು ಕೃಷಿ ಪತ್ರಿಕೋದ್ಯಮವನ್ನು ಬೆಳೆಸಲು ಮತ್ತು ಗ್ರಾಮೀಣ ಕೊಡಗಿನ ಪ್ರತಿಯೊಂದು ಮೂಲೆಯ ರೈತರು ಮತ್ತು ಜನರಲ್ಲಿಗೆ ತಲುಪಿಸಲು ನಿಮ್ಮಂತಹ ಓದುಗರ ಬೆಂಬಲ ನಮಗೆ ಸದಾ ಬೇಕು. ನಿಮ್ಮ ಪ್ರತಿಯೊಂದು ಕೊಡುಗೆಯೂ ದೊಡ್ಡದಾದರೂ ಸಣ್ಣದಾದರೂ ನಮ್ಮ ಭವಿಷ್ಯಕ್ಕಾಗಿ ಮೌಲ್ಯಯುತವಾಗಿರುತ್ತದೆ.
ನಿಮ್ಮ ಉದಾರ ಕೊಡುಗೆಯನ್ನು ಈ ಸಂಖ್ಯೆಗೆ Google Pay ಮಾಡಿ: 98440 95648https://play.google.com/store/apps/details?id=com.searchcoorg.user.searchcoorg&hl=en_IN&gl=US
Search Coorg Media
Coorg's Largest Online Media Network