ಕಾವೇರಿ ತಿರ್ಥೋದ್ಬವಕ್ಕೆ ಏರಿಕೆಯಾಗಲಿದೆಯಾ ಪಾಸಿಟಿವಿಟಿ ದರ
ಯಾವುದೇ ಮಾಸ್ಕ್ ಅಥವಾ ಮುಂಜಾಗ್ರತಾ ಕ್ರಮವನ್ನು ಅನುಸರಿಸದೆ ಜೈ ಗಣೇಶ ಎಂದು ಅಲ್ಲಲ್ಲಿ ಮೈಮರೆತಾಗಿದೆ. ಇದರ ಜೊತೆಗೆ ಪ್ರವಾಸಿಗರು ದಂಡೂ ಕೊಡಗಿಗೆ ಲಗ್ಗೆ ಇಡುತ್ತಿದೆ. ಹೋಂಸ್ಟೇ ರೆಸಾರ್ಟ್ ಸೇರಿದಂತೆ ಎಲ್ಲಾ ಪ್ರವಾಸಿ ಅತಿಥಿ ಗೃಹಗಳು ಭರ್ತಿಯಾಗಿದೆ ಎಂದು ಸಂಬಂಧಪಟ್ಟವರೇ ಹೇಳಿಕೊಳ್ಳುತ್ತಿದ್ದಾರೆ. ಕರ್ಫ್ಯೂ ತೆರೆವುಗೊಳಿಸಿ ಪ್ರವಾಸೋದ್ಯಮ ಗೆದ್ದಿದೆ ಎಂಬ ಸಂತೋಷದಲ್ಲಿ ಕೆಲವರು ಚೀಯರ್ಸ್ ಎನ್ನುತ್ತಿದ್ದಾರೆ. ಕೇವಲ ವ್ಯಾಪಾರ ಹಾಗೂ ವ್ಯವಹಾರದ ದೃಷ್ಟಿಯಿಂದಲೇ ಕೊಡಗಿನ ಮೇಲೆ ಕಣಿಟ್ಟು ಜಿಲ್ಲೆಗೆ ಕಾಲಿಟ್ಟವರು ತಾನು ಗೆದ್ದೆ ಎಂದು ಕೇಕೆ ಹಾಕಿ ನಗುತ್ತಿದ್ದಾರೆ ಹಾಗೇ ಸ್ವರ್ಗ ಸುಖವನ್ನು ಅನುಭವಿಸುತ್ತಿದ್ದಾರೆ. ಆದರೆ ಈ ನೆಲದಲ್ಲಿ ಹುಟ್ಟಿ ಬೆಳೆದ ಮೂಲ ನಿವಾಸಿಗಳು ಸೇರಿದಂತೆ, ಅನಾದಿಕಾಲದಿಂದಲೂ ಈ ನೆಲದಲ್ಲಿ ಬದುಕು ಕಟ್ಟಿಕೊಂಡು, ಈ ನೆಲವನ್ನು ಹೆತ್ತ ತಾಯಿಯಂತೆ ಪ್ರೀತಿಸುವ ಹಲವಾರು ಮಂದಿ ಹಾಗೂ ಕಾವೇರಿ ಮಾತೆಯನ್ನು ಹೆತ್ತಮ್ಮನಂತೆ ಆರಾಧಿಸುವ ಮಂದಿ ಕಾವೇರಿಯ ತಿರ್ಥೋದ್ಬವವನ್ನು ಕಣ್ತುಂಬಿಕೊಳ್ಳಲು ಇದಿರು ನೋಡುತ್ತಿದ್ದಾರೆ.
ಇನ್ನು ನಾನೂ ವ್ಯಾಕ್ಸಿನ್ ಪಡೆದಿದ್ದೇನೆ, ನನ್ನದು ಎರಡು ಡೋಸ್ ಆಯಿತು ನನಗೇನು ಆಗುವುದಿಲ್ಲವೆಂದು ಬೀಗುತ್ತಿರುವ ಜನರ ನಡುವೆ ಇದೀಗ ಜಿಲ್ಲೆಯಲ್ಲಿ 954 ಮಂದಿ ವ್ಯಾಕ್ಸಿನ್ ಪಡೆದವರಿಗೆ ಕೊರೋನ ಸೋಂಕು ದೃಢಪಟ್ಟಿದೆ. ವ್ಯಾಕ್ಸಿನ್ ಪಡೆದವರಲ್ಲಿ ಸಾವಿನ ಸಂಖ್ಯೆ ಕಡಿಮೆ ಇರಬಹುದು, ಆದರೆ ಸಾವೇ ಬರುವುದಿಲ್ಲ ಎನ್ನುವುದಕ್ಕೆ ಸೋಂಕು ನಮ್ಮ ಚಿಕ್ಕಪ್ಪನೂ ಅಲ್ಲಾ ದೊಡ್ಡಪ್ಪನು ಅಲ್ಲಾ. ಒಂದಿಷ್ಟು ಮರೆಮರೆತರು ಯಾವಾಗ ಹೇಗೆ ಸ್ಮಶಾನದಲ್ಲಿ ಮತ್ತೆ ಬೆಂಕಿ ಕಾಣಿಸಿಕೊಳ್ಳಲಿದೆಯೋ ಎಂದು ಯಾರಿಗೂ ಗೊತ್ತಿಲ್ಲ. ಇನ್ನೇನು ಒಂದೇ ತಿಂಗಳಲ್ಲಿ ಕೊಡಗಿನ ಪ್ರಮುಖ ಹಬ್ಬಗಳಲ್ಲಿ ಒಂದಾದ ಕಾವೇರಿ ತುಲಾ ಸಂಕ್ರಮಣಕ್ಕೆ ಜಿಲ್ಲೆ ಸಜ್ಜಾಗುತ್ತಿದೆ. ಆದರೆ ಪರಿಸ್ಥಿತಿ ಹೀಗೆ ಮುಂದುವರಿದರೆ ಕೊಡಗಿನ ಪ್ರಮುಖ ಹಬ್ಬಗಳಲ್ಲಿ ಒಂದಾದ ಮಾತೆ ಕಾವೇರಿಯ ಪವಿತ್ರ ತಿರ್ಥೋದ್ಬವಕ್ಕೆ ಮತ್ತೊಂದು ಲಾಕ್ ಡೌನ್ ಅಥವಾ ಕರ್ಫ್ಯೂ ಇಲ್ಲವೇ ತಲಕಾವೇರಿ ತಿರ್ಥೋದ್ಬವಕ್ಕೆ ಸ್ಥಳೀಯ ಭಕ್ತರಿಗೆ ಬೇಲಿ ನಿರ್ಮಾಣವಾಗುವ ಸಾದ್ಯತೆ ಹೆಚ್ಚಾಗಿ ಕಾಣುತ್ತಿದೆ. ಜಿಲ್ಲೆಯ ಮೂಲನಿವಾಸಿಗಳು ಸೇರಿದಂತೆ ನೂರಾರು ವರ್ಷಗಳಿಂದ ಸ್ಥಳೀಯವಾಗಿ ಬದುಕುಕಟ್ಟಿಕೊಂಡು ಆ ತಾಯಿಯನ್ನು ಮೈಮನಗಳಲ್ಲಿ ಆರಾಧಿಸುತ್ತಿರುವ ಮಂದಿಗೆ ಈ ವರ್ಷದ ಕಾವೇರಿ ತಿರ್ಥೋದ್ಬವವನ್ನು ಕಣ್ತುಂಬಿಕೊಳ್ಳವಾಸೆಯನ್ನು ಮರೆತುಬಿಡುವುದು ಒಳ್ಳೆಯದು ಎಂದು ಕಾಣುತ್ತೆ. ಇಲ್ಲವೆಂದರೆ ಇದೀಗಲೇ ಪ್ರವಾಸೋದ್ಯಮಕ್ಕೆ ತಾತ್ಕಾಲಿಕವಾಗಿ ಬ್ರೇಕ್ ಹಾಕಿಸುವ ಬಗ್ಗೆ ಚಿಂತನೆ ನಡೆಸುವುದು ಉತ್ತಮ. ಹೌದು ಶೇಕಡಾ 0.05% ಇದ್ದ ಪಾಸಿಟಿವಿಟಿ ದರ ಶುಕ್ರವಾರ (11/09/2021) ಶೇಕಡಾ 2.84% ತಲುಪಿದೆ, ಹಾಗೇ ಗುರುವಾರ ಕೊಡಗಿನಲ್ಲಿ ಎರಡು ಕೊರೋನ ಸಾವು ಸಂಬವಿಸಿದೆ, ಇನ್ನು ಮುಂದಿನ ದಿನಗಳಲ್ಲಿ ಹೇಗೆ ಎಂದು ಇದೀಗಲೆ ಚಿಂತಿಸಬೇಕಿದೆ.
ಮಾನ್ಯ ಜಿಲ್ಲಾಧಿಕಾರಿಗಳು ಹಾಗೂ ಜನಪ್ರತಿನಿಧಿಗಳಲ್ಲಿ ಒಂದು ಮನವಿ ಕನಿಷ್ಟ ಕಾವೇರಿ ತುಲಾ ಸಂಕ್ರಮಣದವರೆಗಾದರೂ ಕೊಡಗಿನಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತಾಗಲಿ, ಮುಂದೆ ಬರುತ್ತಿರುವುದು ಜಿಲ್ಲೆಯ ಜನರ ಮನೆ ಮನಗಳಲ್ಲಿ ಹಾಸುಹೊಕ್ಕಾಗಿರುವ ಕಾವೇರಿ ಮಾತೆಯ ತಿರ್ಥೋದ್ಬವ ಕ್ಷಣ ಹಾಗೂ ಸ್ಥಳೀಯ ಮೂಲ ನಿವಾಸಿಗಳಿಗೆ ಪ್ರಮುಖ ಹಬ್ಬಗಳಲ್ಲಿ ಒಂದಾದ ಕಾವೇರಿ ಚಂಗ್ರಾಂದಿ, ಈ ಹಬ್ಬವನ್ನು ಕೇವಲ ಮೂಲ ನಿವಾಸಿಗಳು ಮಾತ್ರ ಆಚರಿಸುತ್ತಿಲ್ಲ, ಕೊಡಗಿನಲ್ಲಿ ಬದುಕು ಕಟ್ಟಿಕೊಂಡ ಎಲ್ಲಾ ಜನಾಂಗ ಕೂಡ ಶ್ರದ್ಧಾಭಕ್ತಿಯಿಂದ ಆಚರಿಸುತ್ತಾರೆ. ದೂರದೂರಿನಲ್ಲಿರುವ ಕೊಡಗಿನ ಮಂದಿ ಈ ಸಮಯದಲ್ಲಿ ಕೊಡಗಿಗೆ ಬರಲು ಚಿಂತನೆ ನಡೆಸುತ್ತಿದ್ದಾರೆ. ಇದರ ನಡುವೆ ದೇಶ ವಿದೇಶಗಳಲ್ಲಿ ಅಸಂಖ್ಯಾತ ಭಕ್ತರನ್ನು ಹೊಂದಿರುವ ಮಾತೆ ಕಾವೇರಿಯ ತಿರ್ಥೋದ್ಬವ ಕ್ಷಣವನ್ನು ಕಣ್ತುಂಬಿಕೊಳ್ಳಲು ಲಕ್ಷಾಂತರ ಭಕ್ತರ ತಂಡವೇ ತುದಿಗಾಲಿನಲ್ಲಿ ನಿಂತಿದೆ ಎಂದರೆ ತಪ್ಪಲ್ಲ. ಕೊರೋನ ಸೋಂಕು ಹೀಗೆ ಮುಂದುವರಿದರೆ ಕನಿಷ್ಟ ಸ್ಥಳೀಯ ಭಕ್ತರಿಗಾದರು ತಮ್ಮನ್ನು ಅಗಲಿದ ಹಿರಿಯರಿಗೆ ಪಿಂಡ ಪ್ರಧಾನ ಮಾಡಿ ತೀರ್ಥ ಸ್ಥಾನ ಮಾಡಲು ಹಾಗೂ ಪವಿತ್ರ ತಿರ್ಥೋದ್ಬವವನ್ನು ಕಣ್ತುಂಬಿಕೊಳ್ಳಲು ಅವಕಾಶಕ್ಕೆ ಇದೀಗಲೇ ಜಿಲ್ಲೆಯಲ್ಲಿ ಕಟ್ಟುನಿಟ್ಟಿನ ಕ್ರಮವನ್ನು ಕೈಗೊಳ್ಳಬೇಕಿದೆ. ಕನಿಷ್ಟ ಕಾವೇರಿ ತುಲಾ ಸಂಕ್ರಮಣದವರೆಗೆ ಆದರೂ ಕೊಡಗಿನಲ್ಲಿ ಪ್ರವಾಸೋದ್ಯಮಕ್ಕೆ ಕಡಿವಾಣ ಹಾಕಿ ಹಬ್ಬವನ್ನು ಆಚರಿಸಲು ಹಾಗೂ ಸ್ಥಳೀಯರು ತಿರ್ಥೋದ್ಬವದಲ್ಲಿ ಪಾಲ್ಗೊಳ್ಳಲು ಅವಕಾಶ ಮಾಡಿ ಕೊಡಿ ಎನ್ನುವುದು ಸ್ಥಳೀಯರ ಪರವಾಗಿ ಮನವಿ.
✍️....ಚಮ್ಮಟೀರ ಪ್ರವೀಣ್ ಉತ್ತಪ್ಪ
( ಪತ್ರಕರ್ತರು )
ಮೊ: 9880967573
( ಚಮ್ಮಟೀರ ಪ್ರವೀಣ್ ಉತ್ತಪ್ಪ
ನಮ್ಮ ಪತ್ರಿಕೋದ್ಯಮವನ್ನು ಬೆಂಬಲಿಸಿ
"ಸರ್ಚ್ ಕೂರ್ಗ್ ಮೀಡಿಯಾ"ದ ಜೀವನಾಡಿಯಾಗಿರುವ ಪ್ರತಿಯೊಬ್ಬ ಓದುಗರಿಗೆ ಪ್ರೀತಿಯ ಧನ್ಯವಾದಗಳು. ನಿಮ್ಮಂತಹ ಓದುಗರಿಂದಲೇ ಗ್ರಾಮೀಣ ಮತ್ತು ಕೃಷಿ ಪತ್ರಿಕೋದ್ಯಮವನ್ನು ಮುಂದೆ ಸಾಗಿಸಲು ನಮಗೆ ಸ್ಫೂರ್ತಿ ಸಿಗುತ್ತದೆ. ಗುಣಮಟ್ಟದ ಗ್ರಾಮೀಣ ಮತ್ತು ಕೃಷಿ ಪತ್ರಿಕೋದ್ಯಮವನ್ನು ಬೆಳೆಸಲು ಮತ್ತು ಗ್ರಾಮೀಣ ಕೊಡಗಿನ ಪ್ರತಿಯೊಂದು ಮೂಲೆಯ ರೈತರು ಮತ್ತು ಜನರಲ್ಲಿಗೆ ತಲುಪಿಸಲು ನಿಮ್ಮಂತಹ ಓದುಗರ ಬೆಂಬಲ ನಮಗೆ ಸದಾ ಬೇಕು. ನಿಮ್ಮ ಪ್ರತಿಯೊಂದು ಕೊಡುಗೆಯೂ ದೊಡ್ಡದಾದರೂ ಸಣ್ಣದಾದರೂ ನಮ್ಮ ಭವಿಷ್ಯಕ್ಕಾಗಿ ಮೌಲ್ಯಯುತವಾಗಿರುತ್ತದೆ.
ನಿಮ್ಮ ಉದಾರ ಕೊಡುಗೆಯನ್ನು ಈ ಸಂಖ್ಯೆಗೆ Google Pay ಮಾಡಿ: 98440 95648https://play.google.com/store/apps/details?id=com.searchcoorg.user.searchcoorg&hl=en_IN&gl=US
Search Coorg Media
Coorg's Largest Online Media Network