Header Ads Widget

ಸರ್ಚ್ ಕೂರ್ಗ್ ಮೀಡಿಯ

ಕೋವಿ ಹಕ್ಕು; ಜನಾಂಗ ಜನಾಂಗದ ನಡುವೆ ವಿಷಬೀಜ ಬಿತ್ತುವುದು ಬಿಟ್ಟು ಅರ್ಜಿದಾರರು ಬದಲಾಗುವುದು ಒಳಿತು; ಅಖಿಲ ಕೊಡವ ಸಮಾಜ ಹೇಳಿಕೆ

ಕೋವಿ ಹಕ್ಕು; ಜನಾಂಗ ಜನಾಂಗದ ನಡುವೆ ವಿಷಬೀಜ ಬಿತ್ತುವುದು ಬಿಟ್ಟು ಅರ್ಜಿದಾರರು ಬದಲಾಗುವುದು ಒಳಿತು; ಅಖಿಲ ಕೊಡವ ಸಮಾಜ ಹೇಳಿಕೆ


ಕೊಡವರು ಹಾಗೂ ಜಮ್ಮ ಹಿಡುಳಿದಾರರ ಕೋವಿ ಹಕ್ಕನ್ನು ಪ್ರಶ್ನಿಸಿ ಕ್ಯಾಫ್ಟನ್ ಚೇತನ್ ಹೈಕೋರ್ಟ್'ನಲ್ಲಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯನ್ನು ಮಾನ್ಯ ನ್ಯಾಯಾಧೀಶರು ವಜಾಗೊಳಿಸಿ  ಕೋವಿ ಹಕ್ಕನ್ನು ಯಥಾಸ್ಥಿತಿಯಲ್ಲಿ ಕಾಯ್ದಿರಿಸುವಂತೆ ಆದೇಶ ನೀಡಿರುವುದು  ನ್ಯಾಯಯುತವಾಗಿದೆ ಎಂದು ಅಖಿಲ ಕೊಡವ ಸಮಾಜ ಹಾಗೂ ಅದರ ಅಂಗ ಸಂಸ್ಥೆಗಳು ಸಂತೋಷ ವ್ಯಕ್ತಪಡಿಸಿದೆ.

ಈ ಕುರಿತು ಸಾಮೂಹಿಕ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅಖಿಲ ಕೊಡವ ಸಮಾಜ ಅಧ್ಯಕ್ಷ ಮಾತಂಡ ಮೊಣ್ಣಪ್ಪ, ಅಖಿಲ ಕೊಡವ ಸಮಾಜ ಪೊಮ್ಮಕ್ಕಡ ಪರಿಷತ್ ಅಧ್ಯಕ್ಷೆ ಬಾಚರಣಿಯಂಡ ರಾಣು ಅಪ್ಪಣ್ಣ ಹಾಗೂ ಅಖಿಲ ಕೊಡವ ಸಮಾಜ ಯೂತ್ ವಿಂಗ್ ಅಧ್ಯಕ್ಷ ಚಮ್ಮಟೀರ ಪ್ರವೀಣ್ ಹೈಕೋರ್ಟ್ ಆದೇಶವನ್ನು ಸ್ವಾಗತಿಸಿದ್ದು, ಸಾಂವಿಧಾನಿಕ ಹಾಗೂ ಸೈನಿಕ ಪರಂಪರೆಯ ಮಹತ್ವ ಉಳ್ಳ ಈ ಕಾನೂನು ಹೋರಾಟದಲ್ಲಿ ಭಾಗಿಯಾದ ಎಲ್ಲಾ ವಕೀಲ ಮಿತ್ರರನ್ನು ಹಾಗೂ ಸಂಘ ಸಂಸ್ಥೆಗಳನ್ನು ಅಭಿನಂದಿಸಿದೆ.

ಈ ಕುರಿತು ಹೇಳಿಕೆ ನೀಡಿರುವ ಮೂರು ಸಂಸ್ಥೆಗಳು ಅರ್ಜಿದಾರರು ಇನ್ನಾದರೂ ಇಂತಹ ವಿಷಯದಲ್ಲಿ ತಗಾದೆ ತೆಗೆದು ಇಲ್ಲಿನ ಜನರ ಭಾವನೆಯೊಂದಿಗೆ ಆಟವಾಡದಿರುವುದು ಉತ್ತಮ ಎಂಬುದನ್ನು ತಿಳಿದುಕೊಳ್ಳಬೇಕಿದೆ. ಅರ್ಜಿದಾರರಿಗೆ ಈಗಾಗಲೇ ಎರಡು ಬಾರಿಯೂ ಮುಖಭಂಗವಾಗಿದೆ, ಕೊಡವರ ಹಾಗೂ ಜಮ್ಮ ಹಿಡುವಳಿದಾರರ ಕೋವಿ ಹಕ್ಕು ಇಂದು ನಿನ್ನೆಯದಲ್ಲಾ ಇದು ಸ್ವಾತಂತ್ರ್ಯ ಪೂರ್ವದ್ದಾಗಿದೆ ಮತ್ತು ಇದು ಸಾಂವಿಧಾನಿಕವಾಗಿದೆ. ಹಾಗೇ ಈ ಹಕ್ಕನ್ನು ಎಲ್ಲಿಯೂ ದುರ್ಬಳಕೆ ಮಾಡಿಕೊಂಡ ಪ್ರಕರಣಗಳೇ ಇಲ್ಲ, ದೇಶದಲ್ಲಿ ತುರ್ತು ಪರಿಸ್ಥಿತಿಯಂತಹ ಸಂದರ್ಭದಲ್ಲಿ ಕೂಡ ಕೊಡವರ ಕೋವಿಗಳು ದೇವರ ಸ್ಥಾನದಲ್ಲಿಯೇ ಪೂಜಿಸಲ್ಪಡುತಿತ್ತು ಹೊರತು ಬೀದಿಗೆ ಇಳಿದಿಲ್ಲ. ಆದರೆ ಇದನ್ನು ಸಾರ್ವಜನಿಕವಾಗಿ ಬೀದಿಗೆ ತರುವಂತಹ ಹಾಗೂ ಕೋರ್ಟ್ ಮೆಟ್ಟಿಲು ಹತ್ತುವಂತಹ ಕೆಲಸ ಮಾಡಿರುವುದು ಖಂಡನೀಯ. 

ಇಲ್ಲಿನ ಜನರ ಮನೆಯ ಒಬ್ಬ ಸದಸ್ಯನ ಸ್ಥಾನ ಪಡೆದಿರುವ ಕೋವಿ ನೆಲ್ಲಕ್ಕಿ ನಡುಬಾಡೆಯಲ್ಲಿ ಪೂಜಿಸಲ್ಪಡುತ್ತದೆ. ಕೋವಿಯ ಮಹತ್ವವನ್ನು ಅರಿತ್ತಿರುವ ವ್ಯಕ್ತಿಯೇ ತಗಾದೆ ತೆಗೆದಿರುವುದು ಸರಿಯಲ್ಲ, ನಿಮಗೆ ಏನೂ ಬೇಕು ಅದನ್ನು ನೀವು ಕೇಳುವ ಹಕ್ಕು ನಿಮಗಿದೆ, ಆದರೆ ಇನ್ನೊಬ್ಬರ ಹಕ್ಕನ್ನು ಕಸಿದುಕೊಳ್ಳಲು ನೋಡುವುದು ಹೊಟ್ಟೆಕಿಚ್ಚು ಅಲ್ಲದೆ ಬೇರೇನೂ. ಇನ್ನಾದರೂ ಜನರ ಭಾವನೆಯೊಂದಿಗೆ ಆಟವಾಡುವುದು ಬಿಟ್ಟು ಹಾಗೂ ಜನಾಂಗ ಜನಾಂಗದ ನಡುವೆ ವಿಷಬೀಜ ಬಿತ್ತುವುದು ಬಿಟ್ಟು ಅರ್ಜಿದಾರರು ಬದಲಾಗುವುದು ಒಳಿತು ಎಂದು ಅಖಿಲ ಕೊಡವ ಸಮಾಜ ಹಾಗೂ ಅಂಗಸಂಸ್ಥೆಗಳ ಪ್ರಮುಖರು ಕಿಡಿಕಾರಿದ್ದಾರೆ.

Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,