Header Ads Widget

ಸರ್ಚ್ ಕೂರ್ಗ್ ಮೀಡಿಯ

ರಾಷ್ಟ್ರೀಯ ಭಾರತ್ ಸೇವಕ್ ಸಮಾಜ ಕೊಡಗು ಜಿಲ್ಲಾಅಧ್ಯಕ್ಷರಾಗಿ ಪತ್ರಕರ್ತ ಟಿ.ಎಲ್.ಶ್ರೀನಿವಾಸ್ ನೇಮಕ

ರಾಷ್ಟ್ರೀಯ ಭಾರತ್ ಸೇವಕ್ ಸಮಾಜ ಕೊಡಗು ಜಿಲ್ಲಾಅಧ್ಯಕ್ಷರಾಗಿ ಪತ್ರಕರ್ತ ಟಿ.ಎಲ್.ಶ್ರೀನಿವಾಸ್ ನೇಮಕ


ಗೋಣಿಕೊಪ್ಪಲು: ಕಳೆದ 33 ವರ್ಷಗಳಿಂದ ಪತ್ರಕರ್ತರಾಗಿ,ಸಮಾಜ ಸೇವಕರಾಗಿ ಕಾರ್ಯನಿರ್ವಹಿಸಿದ್ದ ಗೋಣಿಕೊಪ್ಪಲಿನ ಹಿರಿಯ ಪತ್ರಕರ್ತ ಟಿ.ಎಲ್. ಶ್ರೀನಿವಾಸ್ ಅವರು ಪ್ರತಿಷ್ಠಿತ ನ್ಯಾಷನಲ್ ಭಾರತ್ ಸೇವಕ್ ಸಮಾಜದ ಕೊಡಗು ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾಗಿದ್ದು ಅಧಿಕೃತ ಆದೇಶ ಪತ್ರ, ಗೌರವ ದೃಢೀಕರಣ ಹಾಗೂ ಗುರುತಿನ ಕಾರ್ಡನ್ನು ತಾ.20 ರಂದು ಬೆಂಗಳೂರು ಕುಮಾರ ಕೃಪಾದಲ್ಲಿ ರಾಜ್ಯಾಧ್ಯಕ್ಷ ಎಂ. ಗಜೇಂದ್ರ ಅವರಿಂದ ಸ್ವೀಕರಿಸಿದರು.

ರಾಜಕೀಯ ರಹಿತವಾಗಿ ಜಾತ್ಯಾತೀತವಾಗಿ ಸಮಾಜಮುಖಿಯಾಗಿ ಇನ್ನು ಮುಂದೆ ಕೇಂದ್ರ ಸರ್ಕಾರದ ಯೋಜನೆಗಳನ್ನು ಜನತೆಗೆ ತಲುಪಿಸುವ ನಿಟ್ಟಿನಲ್ಲಿ, ವಿವಿಧ ಸೇವಾ ಯೋಜನೆಗಳ ಅನುಷ್ಠಾನದ ನಿಟ್ಟಿನಲ್ಲಿ ಪ್ರಸ್ತುತ ಸೇವಕ್ ಸಮಾಜ ಕಾರ್ಯನಿರ್ವಹಿಸಲಿದ್ದು, ಶೀಘ್ರದಲ್ಲಿಯೇ ವಿವಿಧ ಜಾತಿ ಜನಾಂಗಗಳಿಗೆ ಆದ್ಯತೆ ನೀಡಿ ಸಮಿತಿಯೊಂದನ್ನು ರಚನೆ ಮಾಡಲಾಗುವದು ಎಂದು ಶ್ರೀನಿವಾಸ್ ತಿಳಿಸಿದ್ದಾರೆ.

ಗೋಣಿಕೊಪ್ಪಲಿನಲ್ಲಿ ಮುಂದಿನ ತಿಂಗಳು ಜಿಲ್ಲಾ ಕೇಂದ್ರ ಕಚೇರಿ ಆರಂಭಿಸಲಿದ್ದು ರಾಜ್ಯಾಧ್ಯಕ್ಷರ ತಂಡ ಕಚೇರಿ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದು, ಜನತೆಗೆ ಸಿಗುವ ವಿವಿಧ ಸೇವೆಗಳ ಬಗ್ಗೆ ಅಗತ್ಯ ಮಾಹಿತಿ ನೀಡಲಿದ್ದಾರೆ. ಭ್ರಷ್ಟಾಚಾರದ ವಿರುದ್ಧವೂ ಹೋರಾಟ ಮಾಡಲು ಸಮಿತಿಗೆ ಅಧಿಕಾರ ನೀಡಲಾಗಿದೆ. ಕೇಂದ್ರ ಸರ್ಕಾರದ ಯೋಜನೆಗಳು ಅರ್ಹರಿಗೆ ತಲುಪುವ ನಿಟ್ಟಿನಲ್ಲಿ ಜಿಲ್ಲಾ ಸಮಿತಿಯು ಕೊಂಡಿಯಾಗಿ ಕಾರ್ಯನಿರ್ವಹಿಸಲಿದೆ. ಬೆಂಗಳೂರು ರಾಜ್ಯ ಕಚೇರಿ ಉದ್ಘಾಟನಾ ಸಮಾರಂಭದಲ್ಲಿ ಕೇಂದ್ರ ವಾಣಿಜ್ಯ ಸಚಿವ ಪಿಯೂಸ್ ಘೋಯಲ್ ಪಾಲ್ಗೊಳ್ಳಲಿದ್ದು, ಕೇಂದ್ರ ಗ್ರಾಹಕರ ಪರಿಹಾರಗಳ ಸಚಿವಾಲಯವೂ ಕೇಂದ್ರ ವಾಣಿಜ್ಯ ಸಚಿವರ ಅಧೀನದಲ್ಲಿಯೇ ಬರಲಿದ್ದು ಭಾರತ್ ಸೇವಕ್ ಸಮಾಜ್ ರಾಜಕೀಯ ರಹಿತ ಸಂಘಟನೆಯಾಗಿದ್ದು ಕೇಂದ್ರ ಗ್ರಾಹಕರ ಪರಿಹಾರಗಳ ಸಚಿವಾಲಯದ ಒಂದು ಅಂಗ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಟಿ.ಎಲ್.ಶ್ರೀನಿವಾಸ್ ತಿಳಿಸಿದ್ದಾರೆ.

ತಾ. 20 ರಂದು ಸಂಜೆ ಬೆಂಗಳೂರು ಕುಮಾರ ಕೃಪದಲ್ಲಿ ನ್ಯಾಷನಲ್ ಭಾರತ್ ಸಮಾಜ ಸೇವಕ್ ಸಂಸ್ಥೆಯ ರಾಜ್ಯಾಧ್ಯಕ್ಷ ಎಂ.ಗಜೇಂದ್ರ ಹಾಗೂ ಉಪಾಧ್ಯಕ್ಷ ದೇವದಾಸ್ ಕೊಡಗು ಜಿಲ್ಲಾಧ್ಯಕ್ಷ ಸ್ಥಾನದ ಅಧಿಕಾರ ಪತ್ರ ನೀಡಿ ಶುಭ ಹಾರೈಸಿದರು.

ಗೋಣಿಕೊಪ್ಪಲು ಸುದ್ದಿಸಂಸ್ಥೆಯ ಮುಖ್ಯಸ್ಥರಾಗಿರುವ ಟಿ.ಎಲ್.ಶ್ರೀನಿವಾಸ್, ಕೊಡಗು ಬಲಿಜ ಸಮಾಜ ಹಾಗೂ ಕಾಯಕ ಸಮಾಜಗಳ ಒಕ್ಕೂಟದ ಜಿಲ್ಲಾಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.

Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,