■ಮಾಸ್ಕ್ ಇಲ್ಲ, ಸಾಮಾಜಿಕ ಅಂತರವಿಲ್ಲ, ನೆಗೆಟಿವ್ ಟೆಸ್ಟ್ ರಿಪೋರ್ಟ್ ಮೊದಲೇ ಇಲ್ಲಾ. ಕೊಡಗು ಆಗಲಿದೆಯಾ ಮತ್ತೊಂದು ಲಾಕ್ ಡೌನ್.?!!
●ಕೊರೋನ ಟೆಸ್ಟಿಂಗ್ ಮಾಡಲಾಗುತ್ತಿದೆ ಎಂದು ಸುಳ್ಳು ವರದಿ ಬಿತ್ತರಿಸುವ ಕೆಲವೊಂದು ಮಾಧ್ಯಮಗಳು ಮಾಫಿಯಾ ಹಿಂದೆ ಕೈ ಜೋಡಿಸಿದೆಯಾ.?!!
ಮೋಜುಮಸ್ತಿಗೆಂದೇ ಪ್ರತಿನಿತ್ಯ ಸಾವಿರಾರು ಪ್ರವಾಸಿಗರು ದಂಡೂ ದಂಡಾಗಿ ಬರುತ್ತಿದ್ದು, ಇದಕ್ಕೆ ಪೂರಕವಾಗಿ ಯಾವುದೇ ಮುಂಜಾಗ್ರತಾ ಕ್ರಮವನ್ನು ಅನುಸರಿಸದೆ ಕೆಲವೊಂದು ಹೋಂಸ್ಟೇ ರೆಸಾರ್ಟ್'ಗಳು ಇವರಿಗೆ ರತ್ನಕಂಬಳಿಯನ್ನು ಹಾಸಿ ಬರ ಮಾಡಿಕೊಳ್ಳುತ್ತಿದೆ. ಈ ಹಿಂದೆ ವಿಕೆಂಡ್ ಕರ್ಫ್ಯೂ ಸಮಯದಲ್ಲಿ ಕೂಡ ಸ್ಥಳೀಯ ವ್ಯಾಪಾರಿಗಳನ್ನು ಹಾಗೂ ಜನರನ್ನು ಮನೆಯಲ್ಲಿಯೇ ಕೂಡಿ ಹಾಕಿ ಪ್ರವಾಸಿಗರಿಗೆ ಎಲ್ಲೆಂದರಲ್ಲಿ ಸ್ವಚ್ಛಂದವಾಗಿ ಓಡಾಡಲು ಅವಕಾಶ ಮಾಡಿಕೊಡಲಾಗಿತ್ತು ಎಂಬ ವಿಷಯವನ್ನು ಯಾರು ಮರೆಯುವಂತಿಲ್ಲ. ಇದೀಗ ವಿಕೆಂಡ್ ಕರ್ಫ್ಯೂ ತೆರವುಗೊಳ್ಳುವವರೆಗೂ ಕೆಲವು ದಿವಸ ಶೇಕಡಾ 0.05% ಇದ್ದ ಪಾಸಿಟಿವಿಟಿ ದರ ವಿಕೆಂಡ್ ಕರ್ಫ್ಯೂ ತೆರವುಗೊಂಡ ಬೆನ್ನಲ್ಲೇ ಶೇಕಡಾ 2.85%, 1.45% 1.85%, 1.95%, 0.95% ಹೀಗೆ ಏರಿಳಿತ ಕಾಣುತಲಿದೆ. ವಿಕೆಂಡ್ ಕರ್ಫ್ಯೂ ತೆರವುಗೊಳ್ಳುವ ಹಿಂದಿನ ಒಂದು ವಾರ ಸರಾಸರಿ 0.05% ಪಾಸಿಟಿವಿಟಿ ದರ ಎಲ್ಲಿಗೆ ಹೋಯಿತು ಹಾಗೂ ಇದು ಹೇಗಾಯಿತು ಎನ್ನುವುದೆ ಆಶ್ಚರ್ಯವಾಗಿದೆ. ಒಂದೆಡೆ ಜಿಲ್ಲೆಯಲ್ಲಿ ಹಾವು ಏಣಿಯಂತೆ ಏರಿಳಿತ ಕಾಣುತ್ತಿರುವ ಕೊರೋನ ಪಾಸಿಟಿವಿಟಿ ದರ ಜಿಲ್ಲೆಯ ಜನರನ್ನು ಚಿಂತೆಗೀಡು ಮಾಡಿದೆ. ಕಳೆದ ಒಂದೆರಡು ತಿಂಗಳ ಹಿಂದೆ ನಾವು ಸಾಕಷ್ಟು ಸಂಖ್ಯೆಯಲ್ಲಿ ನಮ್ಮವರನ್ನು ಕಳೆದುಕೊಂಡಿದ್ದು, ಅದೆಷ್ಟೋ ಮಕ್ಕಳು ತಬ್ಬಲಿಯಾಗಿದ್ದಾರೆ, ಅದೆಷ್ಟೋ ತಾಯಂದಿಯರು ವಿಧವೆಯಾಗಿದ್ದಾರೆ, ಗಂಡಂದಿಯರು ಹೆಂಡತಿಯನ್ನು ಹಾಗೂ ಪೋಷಕರು ಮಕ್ಕಳನ್ನು ಕಳೆದುಕೊಂಡಿದ್ದಾರೆ. ಇದೀಗ ಮೂರನೇ ಅಲೆಯ ಆತಂಕ ಜನರ ಮನಸ್ಸಿನಲ್ಲಿದೆ. ಕಾರಣ ಇದು ಮಕ್ಕಳ ಮೇಲೆ ಹೆಚ್ಚಿನ ಪ್ರಭಾವ ಬೀರುತ್ತದೆ ಎಂಬ ತಜ್ಞರ ವರದಿ ಜನರನ್ನು ಇನ್ನಷ್ಟು ಚಿಂತೆಗೀಡು ಮಾಡಿದೆ ಎಂದರೆ ತಪ್ಪಲ್ಲ. ಈಗಾಗಲೇ ಮಕ್ಕಳಿಗೆ ತರಗತಿ ಆರಂಭಗೊಂಡಿದ್ದು, ಜಿಲ್ಲೆಗೆ ವಿವಿಧ ಜಿಲ್ಲೆಯಿಂದ ಆಗಮಿಸುತ್ತಿರುವ ಪ್ರವಾಸಿಗರಿಂದ ನಮ್ಮ ಮಕ್ಕಳ ರಕ್ಷಣೆ ಹೇಗೆ ಎಂಬುದು ಪೋಷಕರಿಗೆ ತಲೆ ನೋವಾಗಿದೆ.
ಇದರ ಜೊತೆಗೆ ಮೂಲ ನಿವಾಸಿಗಳು ಹಾಗೂ ಸ್ಥಳೀಯವಾಗಿ ನೂರಾರು ವರ್ಷಗಳಿಂದ ಇಲ್ಲಿಯೇ ಬದುಕು ಕಟ್ಟಿಕೊಂಡಿರುವ ಜನರ ಧಾರ್ಮಿಕ ಭಾವನೆಯ ಹಿತದೃಷ್ಟಿಯಿಂದ ಕಾವೇರಿ ಮಾತೆಯನ್ನು ಹೆತ್ತಮ್ಮನಂತೆ ಆರಾದಿಸುವ ಜನಾಂಗದ ಭಾವನೆಗೆ ಬೆಲೆಕೊಟ್ಟು ಕಾವೇರಿ ತಿರ್ಥೋದ್ಬವದವರೆಗಾದರು ತಾತ್ಕಾಲಿಕವಾಗಿ ಪ್ರವಾಸೋದ್ಯಮಕ್ಕೆ ಬ್ರೇಕ್ ಹಾಕದಿದ್ದಲ್ಲಿ ಸ್ಥಳೀಯರಿಗೆ ತಿರ್ಥೋದ್ಬವದಲ್ಲಿ ಭಾಗಿಯಾಗಲು ತೊಂದರೆಯಾಗಲಿದೆ. ಈ ನಿಟ್ಟಿನಲ್ಲಿ ಕನಿಷ್ಟ ಒಂದು ತಿಂಗಳ ಕಾಲ ಸ್ಥಳೀಯ ಅಂಗಡಿ ಮುಗ್ಗಟ್ಟುಗಳಿಗೆ ಹಾಗೂ ಸ್ಥಳೀಯ ವ್ಯಾಪಾರ ವ್ಯವಹಾರಕ್ಕೆ ಅವಕಾಶ ಮಾಡಿಕೊಟ್ಟು ಪ್ರವಾಸೋದ್ಯಮ ಚಟುವಟಿಕೆ ಹಾಗೂ ಪ್ರವಾಸಿಗರಿಗೆ ಕಟ್ಟುನಿಟ್ಟಿನ ಕ್ರಮವನ್ನು ಅನುಸರಿಸುವುದು ಸೂಕ್ತ ಎನ್ನುವುದು ಸ್ಥಳೀಯರ ಒತ್ತಾಯದ ಬೆನ್ನಲ್ಲೆ, ಇದೀಗ ಜಿಲ್ಲೆಯಲ್ಲಿ ಒಂದಷ್ಟು ನಾಟಕೀಯ ಬೆಳವಣಿಗೆ ಕೂಡ ನಡೆಯುತ್ತಿದ್ದು, ಕೆಲವೊಂದು ಮಾಧ್ಯಮಗಳು ಸ್ಥಳೀಯರ ಕಣ್ಣಿಗೆ ಮಣ್ಣು ಎರಚುತಿದೆಯಾ ಎಂಬ ಸಂಶಯ ಮೂಡುತ್ತಿದೆ. ಜಿಲ್ಲೆಯ ಪ್ರಮುಖ ದೃಶ್ಯ ಮಾಧ್ಯಮವೊಂದು ಶನಿವಾರ ಮಡಿಕೇರಿಯ ರಾಜಸೀಟ್'ನಲ್ಲಿ ಪ್ರವಾಸಿಗರಿಗೆ ಕೊರೋನ ಟೆಸ್ಟ್ ಸ್ಥಳದಲ್ಲಿಯೇ ಮಾಡಲಾಗುತ್ತಿದೆ ಹಾಗೂ ಪವಾಸಿಗರಿಗೆ ರಿಪೋರ್ಟ್ ಖಡ್ಡಾಯ ಎಂಬ ವರದಿಯನ್ನು ಶನಿವಾರ ಬಿತ್ತರಿಸುತ್ತಿದಂತೆ, ಜಿಲ್ಲೆಯಲ್ಲಿ ಇಷ್ಟೊಂದು ಬದಲಾವಣೆ ಆಯಿತೇ ಎಂದು ನಮ್ಮ ತಂಡ ಖುದ್ದಾಗಿ ರಾಜ ಸೀಟ್ ಹೋಗಿ ನೋಡಿದ್ದಾಗ ನಮಗೆ ಕಂಡುಬಂದ ದೃಶ್ಯ ಎಲ್ಲಾವು ಉಲ್ಟಾ ಆಗಿತ್ತು, ಮಾಧ್ಯಮಗಳು ತಮ್ಮನ್ನು ಮಾರಿಕೊಂಡವೇ ಎಂಬ ಸಂಶಯ ಮೂಡಿದಂತು ಸತ್ಯ. ವಿಷಯ ಏನೇ ಇರಲಿ ಕೊಡಗನ್ನು ಕೊಡಗಾಗಿಯೇ ಉಳಿಸಲು ಹಾಗೂ ಸ್ಥಳೀಯರ ಧಾರ್ಮಿಕ ಭಾವನೆಗೆ ಮಾಧ್ಯಮ ಹಾಗೂ ಜಿಲ್ಲಾಡಳಿತ ಬೆಲೆ ಕೊಡಬೇಕಿದೆ ಕನಿಷ್ಟ ಕಾವೇರಿ ತಿರ್ಥೋದ್ಬವವರೆಗಾದರು ಕಟ್ಟುನಿಟ್ಟಿನ ಕ್ರಮಕೈಗೊಂಡು ಪ್ರವಾಸಿಗರಿಗೆ ಕಡಿವಾಣ ಹಾಕಿ ಸ್ಥಳೀಯರಿಗೆ ತುಲಾಸಂಕ್ರಮಣದಲ್ಲಿ ಪಾಲ್ಗೊಳ್ಳಲು ಅವಕಾಶ ಮಾಡಿ ಕೊಡಬೇಕಾಗಿದೆ.
✍️....ಚಮ್ಮಟೀರ ಪ್ರವೀಣ್ ಉತ್ತಪ್ಪ
( ಪತ್ರಕರ್ತರು )
ಸಂಪಾದಕರು: ಕೊಡಗು ವಾರ್ತೆ
ಮೊ: 9880967573
( ಚಮ್ಮಟೀರ ಪ್ರವೀಣ್ ಉತ್ತಪ್ಪ
ನಮ್ಮ ಪತ್ರಿಕೋದ್ಯಮವನ್ನು ಬೆಂಬಲಿಸಿ
"ಸರ್ಚ್ ಕೂರ್ಗ್ ಮೀಡಿಯಾ"ದ ಜೀವನಾಡಿಯಾಗಿರುವ ಪ್ರತಿಯೊಬ್ಬ ಓದುಗರಿಗೆ ಪ್ರೀತಿಯ ಧನ್ಯವಾದಗಳು. ನಿಮ್ಮಂತಹ ಓದುಗರಿಂದಲೇ ಗ್ರಾಮೀಣ ಮತ್ತು ಕೃಷಿ ಪತ್ರಿಕೋದ್ಯಮವನ್ನು ಮುಂದೆ ಸಾಗಿಸಲು ನಮಗೆ ಸ್ಫೂರ್ತಿ ಸಿಗುತ್ತದೆ. ಗುಣಮಟ್ಟದ ಗ್ರಾಮೀಣ ಮತ್ತು ಕೃಷಿ ಪತ್ರಿಕೋದ್ಯಮವನ್ನು ಬೆಳೆಸಲು ಮತ್ತು ಗ್ರಾಮೀಣ ಕೊಡಗಿನ ಪ್ರತಿಯೊಂದು ಮೂಲೆಯ ರೈತರು ಮತ್ತು ಜನರಲ್ಲಿಗೆ ತಲುಪಿಸಲು ನಿಮ್ಮಂತಹ ಓದುಗರ ಬೆಂಬಲ ನಮಗೆ ಸದಾ ಬೇಕು. ನಿಮ್ಮ ಪ್ರತಿಯೊಂದು ಕೊಡುಗೆಯೂ ದೊಡ್ಡದಾದರೂ ಸಣ್ಣದಾದರೂ ನಮ್ಮ ಭವಿಷ್ಯಕ್ಕಾಗಿ ಮೌಲ್ಯಯುತವಾಗಿರುತ್ತದೆ.
ನಿಮ್ಮ ಉದಾರ ಕೊಡುಗೆಯನ್ನು ಈ ಸಂಖ್ಯೆಗೆ Google Pay ಮಾಡಿ: 98440 95648https://play.google.com/store/apps/details?id=com.searchcoorg.user.searchcoorg&hl=en_IN&gl=US
Search Coorg Media
Coorg's Largest Online Media Network