Header Ads Widget

ಸರ್ಚ್ ಕೂರ್ಗ್ ಮೀಡಿಯ

ಅಪ್ಪಂಗಳದ ಐಸಿಎಆರ್-ಐಐಎಸ್‍ಆರ್ ಪ್ರಾದೇಶಿಕ ಕೇಂದ್ರದಲ್ಲಿ ಇತ್ತೀಚೆಗೆ ನಡೆದ ಏಲಕ್ಕಿಯ ಕ್ಷೇತ್ರೋತ್ಸವ

ಅಪ್ಪಂಗಳದ ಐಸಿಎಆರ್-ಐಐಎಸ್‍ಆರ್ ಪ್ರಾದೇಶಿಕ ಕೇಂದ್ರದಲ್ಲಿ ಇತ್ತೀಚೆಗೆ ನಡೆದ ಏಲಕ್ಕಿಯ ಕ್ಷೇತ್ರೋತ್ಸವ


ಮಡಿಕೇರಿ: ಭಾರತ ಸ್ವಾತಂತ್ರೋತ್ಸವದ 75 ನೇ ಸಂಭ್ರಮಾಚರಣೆಯ ಅಂಗವಾಗಿ ಅಪ್ಪಂಗಳದ ಐಸಿಎಆರ್-ಐಐಎಸ್‍ಆರ್ ಪ್ರಾದೇಶಿಕ ಕೇಂದ್ರದಲ್ಲಿ ಇತ್ತೀಚೆಗೆ ಏಲಕ್ಕಿಯ ಕ್ಷೇತ್ರೋತ್ಸವವನ್ನು ಆಯೋಜಿಸಲಾಗಿತ್ತು. 

ಕಾರ್ಯಕ್ರಮವನ್ನು ಐಸಿಎಆರ್ ಗೀತೆಯೊಂದಿಗೆ ಪ್ರಾರಂಭಿಸಲಾಯಿತು. ಐಸಿಎಆರ್-ಐಐಎಸ್‍ಆರ್ ಪ್ರಾದೇಶಿಕ ಕೇಂದ್ರದ ಮುಖ್ಯಸ್ಥರಾದ ಡಾ.ಎಸ್.ಜೆ.ಅಂಕೇಗೌಡ ಅವರು ಏಲಕ್ಕಿಯ ವೈಜ್ಞಾನಿಕ ತಂತ್ರಜ್ಞಾನಗಳ ಬಗ್ಗೆ ನೆರೆದಿದ್ದ ರೈತರಿಗೆ ಮಾಹಿತಿ ನೀಡಿದರು. 

ಎಂ.ಜಿ.ರಾಜೇಂದ್ರ ನಿರ್ದೆಶಕರು, ಯುರೋ ನ್ಯೂಟ್ರಿನಟ್ಸ್, ಚಿಕ್ಕಮಗಳೂರು ಇವರು ಕೃಷಿಯಲ್ಲಿ ಎನ್‍ಎಸ್‍ಪಿ 168 ನ ಬಳಕೆಯ ಬಗ್ಗೆ ಮಾಹಿತಿ ನೀಡಿದರು. 

ರೈತರು ಕೇಂದ್ರದ ಪ್ರಾಯೋಗಿಕ ತಾಕುಗಳಿಗೆ ಭೇಟಿ ನೀಡಿದರು ಮತ್ತು ಕೇಂದ್ರದ ವಿಜ್ಞಾನಿಗಳು ರೈತರೊಂದಿಗೆ ಏಲಕ್ಕಿಯ ವಿವಿಧ ತಳಿಗಳು ಹಾಗೂ ತಂತ್ರಜ್ಞಾನಗಳ ಬಗ್ಗೆ ಮಾಹಿತಿ ಹಂಚಿಕೊಂಡರು. ಈ ಕಾರ್ಯಕ್ರಮದಲ್ಲಿ ಸುಮಾರು 25 ಬೆಳೆಗಾರರು ಪಾಲ್ಗೊಂಡಿದ್ದರು.


Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,