Header Ads Widget

ಸರ್ಚ್ ಕೂರ್ಗ್ ಮೀಡಿಯ

ಐರನ್ ಸೈಟ್ ‌ ಶೂಟರ್ಸ್ ಸಾರಥ್ಯದಲ್ಲಿ ಮಾಯಮುಡಿಯಲ್ಲಿ ತೋಕ್ ನಮ್ಮೆ

ಐರನ್ ಸೈಟ್ ಶೂಟರ್ಸ್ ಸಾರಥ್ಯದಲ್ಲಿ ಮಾಯಮುಡಿಯಲ್ಲಿ ತೋಕ್ ನಮ್ಮೆ




ಗೋಣಿಕೊಪ್ಪಲು,ಸೆ.24: ಮಾಯಮುಡಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ತಾ.26, ಭಾನುವಾರ ರಾಜ್ಯ ಮಟ್ಟದ ಮುಕ್ತ ತೆಂಗಿನಕಾಯಿಗೆ ಹಾಗೂ ಕೋಳಿಮೊಟ್ಟೆಗೆ ಗುಂಡು ಹೊಡೆಯುವ ಸ್ಪರ್ಧೆ ಮತ್ತು ತೋಕ್ ನಮ್ಮೆ( ಕೋವಿ ಹಬ್ಬ) ನಡೆಯಲಿರುವದಾಗಿ ಐರನ್ ಸೈಟ್ ಶೂಟರ್ಸ್ ಕ್ರೀಡಾಕೂಟದ ಯೋಜನಾ ನಿರ್ದೇಶಕರಾದ ಆಪಟ್ಟಿರ ಆರ್.ಅಯ್ಯಪ್ಪ ತಿಳಿಸಿದ್ದಾರೆ.

ಮಾಯಮುಡಿಯಲ್ಲಿ ಮಾಹಿತಿ ನೀಡಿದ ಅವರು, ದ್ವಿತೀಯ ವರ್ಷದ ಕೈಲ್ ಮುಹೂರ್ತ ಕ್ರೀಡೊತ್ಸವ ಅಂಗವಾಗಿ ಸುಮಾರು 50 ಮೀಟರ್ ಅಂತರದಿಂದ ತೆಂಗಿನ ಕಾಯಿಗೆ ಗುಂಡು ಹೊಡೆಯುವದು ಹಾಗೂ ಸುಮಾರು 25 ಮೀಟರ್ ಅಂತರದಿಂದ ಕೋಳಿ ಮೊಟ್ಟೆಗೆ ಗುಂಡುಹೊಡೆಯುವ ಸ್ಪರ್ಧೆ ಇದ್ದು ಪ್ರಥಮ ಬಹುಮಾನವನ್ನು ದಿ.ಸಣ್ಣುವಂಡ ಬಿ.ಅಚ್ಚಯ್ಯ(ರಘು) ಜ್ಞಾಪಕಾರ್ಥ ರೂ.15 ಸಾವಿರ ನಗದು, ದ್ವಿತೀಯ ಬಹುಮಾನ ದಿ.ಕಾಳಪಂಡ ಸ್ವರಾಜ್ ಚಂಗಪ್ಪ ಸ್ಮರಣಾರ್ಥ ರೂ.10 ಸಾವಿರ ನಗದು ಮತ್ತು ತೃತೀಯ ಬಹುಮಾನವನ್ನು ಬೆಂಗಳೂರು ಹುಲಿಮಂಗಲ ಗ್ರಾ.ಪಂ. ಮಾಜಿ ಅಧ್ಯಕ್ಷರಾದ ಅರಮಣಮಾಡ ಇಂದಿರಾ ಮೋಹನ್ ಅವರುಗಳು ರೂ.7000 ನಗದನ್ನು ಪ್ರಾಯೋಜಿಸಿದ್ದಾರೆ. ವಿಜೇತರಿಗೆ ಆಕರ್ಷಕ ಪಾರಿತೋಷಕ ನೀಡಲಾಗುವದು.ಪಾರಿತೋಷಕವನ್ನು ಕರ್ನಲ್ ಬಾಳೆಯಡ ಕೆ. ಸುಬ್ರಮಣಿ ಪ್ರಾಯೋಜಿದ್ದಾರೆ.

ಕೋಳಿಮೊಟ್ಟೆಗೆ ಗುಂಡು ಹೊಡೆಯುವ ಸ್ಪರ್ಧಾ ವಿಜೇತರಿಗೆ ಪ್ರಥಮ ಬಹುಮಾನವನ್ನು ಬಿ.ಪ್ರಭಾಕರ್ ಭಂಡಾರಿ, ದ್ವಿತೀಯ ಬಹುಮಾನವನ್ನು ಮಚ್ಚಾಮಾಡ ಅನೀಸ್ ಮಾದಪ್ಪ ಹಾಗು ತೃತೀಯ ಬಹುಮಾನವನ್ನು ಆಪಟ್ಟೀರ ಬಿ.ಸುಬ್ಬಯ್ಯ (ಮಣಿ) ಪ್ರಾಯೋಜಿಸಿದ್ದಾರೆ. ಕ್ರಮವಾಗಿ ರೂ.7000, ರೂ.5000 ಹಾಗೂ ರೂ.3000 ಬಹುಮಾನ ನೀಡಲಾಗುವದು.

ಕೋಳಿಮೊಟ್ಟೆಗೆ ಗುಂಡು ಹೊಡೆಯುವ ಸ್ಪರ್ಧಾ ವಿಜೇತರಿಗೆ ನೆಲ್ಲಮಕ್ಕಡ ಶರತ್ ಸೋಮಣ್ಣ ಪಾರಿತೋಷಕವನ್ನು ಪ್ರಾಯೋಜಿಸಿದ್ದಾರೆ.

ಉದ್ಘಾಟನಾ ಸಮಾರಂಭ: ಮಾಜಿ ಹೆಚ್ಚುವರಿ ಅಡ್ವೋಕೇಟ್ ಜನರಲ್ ಹಾಗೂ ಹಿರಿಯ ವಕೀಲರಾದ ಅಜ್ಜಿಕುಟ್ಟೀರ ಎಸ್.ಪೊನ್ನಣ್ಣ ‘ತೋಕ್ ನಮ್ಮೆ’ಯನ್ನು ಉದ್ಘಾಟಿಸಲಿದ್ದಾರೆ. ಸಮಯ ಬೆಳಿಗ್ಗೆ 10.00 ಗಂಟೆಗೆ.

ಮುಖ್ಯ ಅತಿಥಿಗಳಾಗಿ ಅಂತರಾಷ್ಟ್ರೀಯ ರಗ್ಬಿ ಆಟಗಾರ ಮಾದಂಡ ಪಿ.ತಿಮ್ಮಯ್ಯ, ಒಲಂಪಿಯನ್ ಹಾಕಿ ಆಟಗಾರ ಕರ್ನಲ್ ಬಿ.ಕೆ.ಸುಬ್ರಮಣಿ, ಕಾಳಪಂಡ ಸಿ.ಸುಧೀರ್, ಕಾಳಪಂಡ ಟಿಪುö್ಪ ಬಿದ್ದಪ್ಪ, ಬಲ್ಲಣಮಾಡ ರೀಟಾ ಅಪ್ಪಯ್ಯ, ಚೆಪ್ಪುಡಿರ ಕಿಟ್ಟು ಅಯ್ಯಪ್ಪ ಹಾಗೂ ಬಹುಮಾನ ವಿತರಣಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಚೆಪುö್ಪಡಿರ ಕಿರಣ್ ಅಪ್ಪಯ್ಯ, ಬಾನಂಡ ಎನ್.ಪ್ರಥ್ಯು, ಮಚ್ಚಾಮಾಡ ಅನೀಸ್ ಮಾದಪ್ಪ,ಅರಮಣಮಾಡ ಇಂದಿರಾ ಮೋಹನ್ ಹಾಗೂ ಸಣ್ಣುವಂಡ ಪ್ರಸಾದ್ ಅಚ್ಚಯ್ಯ ಭಾಗವಹಿಸಲಿದ್ದಾರೆ. ಮಧ್ಯಾಹ್ನ ಭಾಗವಹಿಸಿದ ಎಲ್ಲ ಸ್ಪರ್ಧಿಗಳಿಗೆ ಭೋಜನ ವ್ಯವಸ್ಥೆ ಇರುತ್ತದೆ. ಹೆಚ್ಚಿನ ವಿವರಗಳಿಗೆ: 9611870813,9449255081ಗೆ ಸಂಪರ್ಕಿಸಬಹುದು.

ಗೋಷ್ಠಿಯಲ್ಲಿ ಕ್ರೀಡಾಕೂಟ ಸಂಚಾಲಕ ಕಂಜಿತಂಡ ಪೊನ್ನಪ್ಪ ಹಾಗೂ ಆಪಟ್ಟೀರ ಟಾಟು ಮೊಣ್ಣಪ್ಪ ಉಪಸ್ಥಿತರಿದ್ದರು. 

Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,