Header Ads Widget

ಸರ್ಚ್ ಕೂರ್ಗ್ ಮೀಡಿಯ

ಪ್ರವಾಸೋದ್ಯಮ ಚಟುವಟಿಕೆ ಎರಡು ತಿಂಗಳು ಕೊಡಗಿನಲ್ಲಿ ಸ್ಥಗಿತ ಮಾಡಲು ಒತ್ತಾಯ

ಪ್ರವಾಸೋದ್ಯಮ ಚಟುವಟಿಕೆ ಎರಡು ತಿಂಗಳು ಕೊಡಗಿನಲ್ಲಿ ಸ್ಥಗಿತ ಮಾಡಲು ಒತ್ತಾಯ


ಮಡಿಕೇರಿ ಸೆ.24 : ಮುಂಬರುವ ಅಕ್ಟೋಬರ್ ಮತ್ತು ನವೆಂಬರ್ ತಿಂಗಳಿನಲ್ಲಿ ಕೊಡಗು ಜಿಲ್ಲೆಯಾದ್ಯಂತ ಪ್ರವಾಸೋದ್ಯಮವನ್ನು ಸಂಪೂರ್ಣ ಸ್ಥಗಿತಗೊಳಿಸುವಂತೆ ಒತ್ತಾಯಿಸಿ “ಸೇವ್ ಕೊಡಗು ಫ್ರಮ್ ಟೂರಿಸ್ಟ್” ತಂಡ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದೆ.

ಅಕ್ಟೋಬರ್ ತಿಂಗಳಿನಲ್ಲಿ ನಡೆಯಲಿರುವ ಕಾವೇರಿ ತೀರ್ಥೋದ್ಭವದ ತುಲಾ ಸಂಕ್ರಮಣ ಆಚರಣೆಯ ಹಿತದೃಷ್ಟಿಯಿಂದ ಮತ್ತು ಶಾಲಾ-ಕಾಲೇಜುಗಳ ಪುನರಾರಂಭದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಹಿತ ದೃಷ್ಟಿಯಿಂದ ಈ ಕಠಿಣ ನಿಯಮವನ್ನು ಜಾರಿಗೊಳಿಸಬೇಕು ಎಂದು ಆಗ್ರಹಿಸಿದೆ.

ಕಳೆದ ಬಾರಿ ಜಿಲ್ಲಾಡಳಿತದ ವೈಫಲ್ಯದಿಂದ ತುಲಾ ಸಂಕ್ರಮಣದ ಸಂದರ್ಭ ಗೊಂದಲ ಉಂಟಾಗಿತ್ತು. ಈ ಬಾರಿ ಆ ರೀತಿ ಆಗದಂತೆ ಜಿಲ್ಲಾಡಳಿತ ಮುನ್ನೆಚ್ಚರಿಕೆ ವಹಿಸಿಬೇಕು ಎಂದು ತಂಡ ಮನವಿ ಮಾಡಿದೆ.

ಕೊಡಗಿನ ಮೂಲ ನಿವಾಸಿಗಳಿಗೆ ಈ ಬಾರಿಯ ಹಬ್ಬದಲ್ಲಿ ಭಾಗಿಯಾಗಲು ಮುಕ್ತ ಅವಕಾಶ ನೀಡಬೇಕು. ಹೊರಗಿನಿಂದ ಜಾತ್ರೆಗೆ ಆಗಮಿಸುವ ಭಕ್ತರು ಖಡ್ಡಾಯವಾಗಿ ಮುಂಗಡ ಹೆಸರು ನೊಂದಾಯಿಸಿಕೊAಡು ಕೋವಿಡ್ ನೆಗೆಟಿವ್ ರಿಪೋರ್ಟ್ನೊಂದಿಗೆ ಭಾಗವಹಿಸಲು ಮಾತ್ರ ಅವಕಾಶ ನೀಡಬೇಕು ಎಂದು ತಂಡ ಮನವಿ ಮಾಡಿದೆ. ಕೋವಿಡ್ ಮುನ್ನೆಚ್ಚರಿಕಾ ಕ್ರಮವಾಗಿ ಕೊಡಗಿನಲ್ಲಿ 2 ತಿಂಗಳು ಸಂಪೂರ್ಣವಾಗಿ ಪ್ರವಾಸೋದ್ಯಮ ಚಟುವಟಿಕೆಗಳನ್ನು ಸ್ಥಗಿತಗೊಳಿಸಬೇಕೆಂದು ಪ್ರಮುಖರು ಒತ್ತಾಯಿಸಿದರು.

“ಸೇವ್ ಕೊಡಗು ಫ್ರಮ್ ಟೂರಿಸ್ಟ್” ತಂಡದ ಜಿಲ್ಲಾ ಸಂಚಾಲಕ ಚಿಮ್ಮಟೀರ ಪ್ರವೀಣ್ ಉತ್ತಪ್ಪ, ಚೀರಂಡ ಕಂದಾ ಸುಬ್ಬಯ್ಯ, ಶ್ರೀನಿವಾಸ್ ರೈ, ಉಮೇಶ್ ಕುಮಾರ್, ಅಜಿತ್ ಕೊಟ್ಟಕೇರಿಯನ, ಕಡೇಮಾಡ ವಿನೋದ್, ಅಪ್ಪಚ್ಚೀರ ಕಮಲ, ಅಜ್ಜಿಕುಟ್ಟೀರ ಪೃಥ್ವಿ ಸುಬ್ಬಯ್ಯ, ಸಣ್ಣುಂಡ ದರ್ಶನ್ ಕಾವೇರಪ್ಪ, ಪುಲಿಯಂಡ ರೋಶನ್, ಅಪಾಡಂಡ ಧನು ದೇವಯ್ಯ, ಪ್ರದೀಪ್, ಮಿದೇರೀರ ಕವಿತಾ ರಾಮು, ಕಟ್ಟೇಂಗಡ ಸುನಿಲ್ ಸೋಮಣ್ಣ, ಬಿದ್ದಂಡ ನಾಣಿ ದೇವಯ್ಯ, ಮೂಕಳೇರ ಕಾವ್ಯ ಮಧು, ಮಲ್ಲಮಾಡ ಶ್ಯಾಮಲಾ, ಆಚೇಯಡ ಗಗನ್ ಗಣಪತಿ, ಕೊಟೇರ ಉದಯ ಪೂಣಚ್ಚ, ಅಪ್ಪಚ್ಚೀರ ಕಮಲ, ಅರುಣ್ ಕೂರ್ಗ್, ಹಾ.ತಿ ಜಯಪ್ರಕಾಶ್, ಕವಿತಾ ವಿ.ರಾವ್, ಮಾತಂಡ ದೇಚಮ್ಮ, ಮುಕ್ಕಾಟೀರ ಮೌನಿ, ಶ್ರೀಧರ್ ನೆಲ್ಲಿತಾಯ, ಚೀರಂಡ ಚಂಗಪ್ಪ, ಮಲಚಿರ ಲೊಕೇಶ್, ಮುದ್ದಿಯಡ ನಿತಿನ್, ಮುದ್ದಿಯಡ ಕಿರಣ್ ಜೋಯಪ್ಪ, ಬಲ್ಯಾಟಂಡ ಪದ್ಮ ಗಣಪತಿ, ಕುಶಾಲಪ್ಪ, ಸತೀಶ್, ಮಂಡoಗಡ ಆಶೋಕ್, ಕಾವಡಿಚಂಡ ಶರತ್ ಹಾಜರಿದ್ದರು.

Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,