Header Ads Widget

ಸರ್ಚ್ ಕೂರ್ಗ್ ಮೀಡಿಯ

ಭತ್ತದಲ್ಲಿ ಬೆಂಕಿ ರೋಗದ ಹತೋಟಿಗೆ ಗೋಣಿಕೊಪ್ಪಲು ಕೃಷಿ ವಿಜ್ಞಾನ ಕೇಂದ್ರ ಸಲಹೆ

ಭತ್ತದಲ್ಲಿ ಬೆಂಕಿ ರೋಗದ ಹತೋಟಿಗೆ ಗೋಣಿಕೊಪ್ಪಲು ಕೃಷಿ ವಿಜ್ಞಾನ ಕೇಂದ್ರ ಸಲಹೆ 


ಕೊಡಗು ಜಿಲ್ಲೆಯಾದ್ಯಂತ ಭತ್ತ ಬೆಳೆಯುತ್ತೀರುವ ಪ್ರದೇಶದಲ್ಲಿ ಬೆಂಕಿ ರೋಗವು ತೀವ್ರಗತಿಯಲ್ಲಿ ಕಂಡು ಬಂದಿದ್ದು ಇದರ ಹತೋಟಿಗೆ ಭಾ.ಕೃ.ಅ.ಪ- ಕೃಷಿ ವಿಜ್ಞಾನ ಕೇಂದ್ರ, ಗೋಣಿಕೊಪ್ಪಲು ಸಲಹೆಯನ್ನು ನೀಡಿದೆ.

ರೋಗದ ಲಕ್ಷಣಗಳು:

ಪ್ರಾರಂಭದಲ್ಲಿ ಎಲೆಗಳ ಮೇಲೆ ಕಂದು ಬಣ್ಣದ ಚುಕ್ಕೆಗಳು ಕಂಡು ಬರುತ್ತವೆ. ನಂತರ ಇಂತಹ ಚುಕ್ಕೆಗಳ ಗಾತ್ರ ಹೆಚ್ಚಾಗಿ ಗರಿಗಳ ಮೇಲೆ ಕದಿರಿನಾಕಾರದ ಮೊನಚಾದ ತುದಿಗಳುಳ್ಳ ಚುಕ್ಕೆಗಳು ಕಾಣಿಸಿಕೊಳ್ಳುತ್ತವೆ. ಚುಕ್ಕೆಗಳ ಮಧ್ಯಭಾಗವು ಬೂದಿ ಬಣ್ಣಕ್ಕೆ ತಿರುಗಿ ಸುತ್ತಲು ಕಂದು ಬಣ್ಣದ್ದಾಗಿರುತ್ತದೆ. ಇಂತಹ ಚುಕ್ಕೆಗಳು ಒಂದಕ್ಕೊAದು ಕೂಡಿಕೊಂಡು ಎಲೆಯು ಸುಟ್ಟು ಹೋದಂತೆ ಕಂಡುಬರುತ್ತದೆ..

ಹತೋಟಿ ವಿಧಾನಗಳು: 

• ಗದ್ದೆಗಳಿಗೆ ಹೆಚ್ಚಿನ ಪ್ರಮಾಣದ ಯೂರಿಯವನ್ನು ಕೊಡಬಾರದು

• ರೋಗದ ಬಾಧೆ ಶೇ. 5 ಕ್ಕಿಂತ ಜಾಸ್ತಿ ಇದ್ದಲ್ಲಿ ಶಿಲೀಂಧ್ರನಾಶಕಗಳಾದ ಟ್ರೈಪ್ಲೋಕ್ಸಿಸ್ಟ್ರೋಬಿನ್ + ಟೆಬುಕೋನೊಜೋಲ್ (ನೆಟಿವೊ) 0.5 ಗ್ರಾಂ ಅಥವಾ ಟ್ರೈಸೈಕ್ಲಜೋಲ್ 0.6 ಗ್ರಾಂ  ಪ್ರತಿ ಲೀಟರ್ ನೀರಿಗೆ ಬೆರಸಿ ಸಿಂಪರಣೆ ಮಾಡಬೇಕು. 

• ಸಿಂಪರಣೆ ಮಾಡುವಾಗ ಶಿಲೀಂಧ್ರನಾಶಕಕ್ಕೆ ಅಂಟು ದ್ರಾವಣವನ್ನು ಸೇರಿಸಿ ಸಿಂಪಡಿಸುವುದು ಉತ್ತಮ. 

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:

ಪ್ರಧಾನ ವಿಜ್ಞಾನಿ ಮತ್ತು ಮುಖ್ಯಸ್ಥರು

ಭಾ.ಕೃ.ಅ.ಪ- ಕೃಷಿ ವಿಜ್ಞಾನ ಕೇಂದ್ರ

ಗೋಣಿಕೊಪ್ಪಲು, ಕೊಡಗು ಜಿಲ್ಲೆ,   ದೂರವಾಣಿ: 08274-295274

Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,