Header Ads Widget

ಸರ್ಚ್ ಕೂರ್ಗ್ ಮೀಡಿಯ

2021 ರ ಅಕ್ಟೋಬರ್ 5 ರ ವರೆಗೆ ಒಟ್ಟು 2,87,552 ಮೆಟ್ರಿಕ್ ಟನ್ ಭತ್ತ ಸಂಗ್ರಹ

2021 ರ ಅಕ್ಟೋಬರ್ 5 ರ ವರೆಗೆ ಒಟ್ಟು 2,87,552 ಮೆಟ್ರಿಕ್ ಟನ್ ಭತ್ತ ಸಂಗ್ರಹ

ಮುಂಗಾರು ಮಾರುಕಟ್ಟೆ ಹಂಗಾಮಿನಡಿ [ಕೆ.ಎಂ.ಎಫ್] 2021 – 22 ರ ಸಾಲಿನಲ್ಲಿ ಕನಿಷ್ಠ ಬೆಂಬಲ ಬೆಲೆ – ಎಂ.ಎಸ್.ಪಿ ಅಡಿ ಹಿಂದಿನ ವರ್ಷದಂತೆ ಈ ಬಾರಿಯೂ ಭತ್ತ ಖರೀದಿ ಪ್ರಕ್ರಿಯೆ ಆರಂಭವಾಗಿದೆ.



ಒಟ್ಟು 2,87,552 ಮೆಟ್ರಿಕ್ ಟನ್ ಭತ್ತವನ್ನು 2021 – 22 ಕೆ.ಎಂ.ಎಸ್ ಸಂದರ್ಭದಲ್ಲಿ 05.10.2021 ರವರೆಗೆ 29,907 ರೈತರಿಂದ ಖರೀದಿಸಲಾಗಿದೆ. ಇದರ ಒಟ್ಟಾರೆ ಮೌಲ್ಯ 563.60 ಕೋಟಿ ರೂಪಾಯಿ. ಇದರಲ್ಲಿ ಒಟ್ಟು 1,46,509 ಮೆಟ್ರಿಕ್ ಟನ್ ಹರ್ಯಾಣದಿಂದ ಮತ್ತು 1,41,043 ಮೆಟ್ರಿಕ್ ಟನ್ ಪಂಜಾಬ್ ನಿಂದ ಖರೀದಿ ಮಾಡಲಾಗಿದೆ.  


2020-21 ರ ಸಾಲಿನ ಮುಂಗಾರು ಹಂಗಾಮಿನ ಭತ್ತ ಖರೀದಿ ಬಹುತೇಕ ಪೂರ್ಣಗೊಂಡಿದ್ದು, 894.24 ಲಕ್ಷ ಮೆಟ್ರಿಕ್ ಟನ್ ಖರೀದಿ ಮಾಡಲಾಗಿದೆ ಮತ್ತು ಹಿಂಗಾರು ಹಂಗಾಮಿನಲ್ಲಿ 176.15  ಲಕ್ಷ ಮೆಟ್ರಿಕ್ ಟನ್ ಭತ್ತವನ್ನು 05.10.2021 ರ ವರೆಗೆ ಖರೀದಿಸಲಾಗಿದೆ. ಇದಕ್ಕೂ  ಹಿಂದಿನ ವರ್ಷ 768.70 ಲಕ್ಷ ಮೆಟ್ರಿಕ್ ಟನ್ ಭತ್ತ ಖರೀದಿಮಾಡಲಾಗಿತ್ತು.

2020 – 21 ರ ಸಾಲಿನಲ್ಲಿ ಕೆ.ಎಂ.ಎಸ್ ನಡಿ 131.14 ಲಕ್ಷ ರೈತರಿಂದ  1,68,832.78 ಕೋಟಿ ರೂಪಾಯಿ ಮೌಲ್ಯದ ಭತ್ತ ಖರೀದಿ ಮಾಡಲಾಗಿದೆ. ಇದು ಭತ್ತ ಖರೀದಿಯಲ್ಲಿ ಸರ್ವಕಾಲಿಕ ದಾಖಲೆಯಾಗಿದ್ದು, 2019 – 20 ರ ಸಾಲಿಗೆ ಹೋಲಿಸಿದರೆ 770.93 ಲಕ್ಷ ಮೆಟ್ರಿಕ್ ಟನ್ ನಷ್ಟು ಹೆಚ್ಚಾಗಿದೆ. 

Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,