Header Ads Widget

ಸರ್ಚ್ ಕೂರ್ಗ್ ಮೀಡಿಯ

ಚಲನಚಿತ್ರೋದ್ಯಮದ ವ್ಯವಹಾರಗಳಿಗೆ ಪೂರಕ ವಾತಾವರಣ ಸೃಷ್ಟಿಸಲು ಕೇಂದ್ರ ಸರ್ಕಾರ ಬದ್ಧ: ಕೇಂದ್ರ ಸಹಾಯಕ ಸಚಿವ ಡಾ.ಎಲ್. ಮುರುಗನ್

ಚಲನಚಿತ್ರೋದ್ಯಮದ ವ್ಯವಹಾರಗಳಿಗೆ ಪೂರಕ ವಾತಾವರಣ ಸೃಷ್ಟಿಸಲು ಕೇಂದ್ರ ಸರ್ಕಾರ ಬದ್ಧ: ಕೇಂದ್ರ ಸಹಾಯಕ ಸಚಿವ ಡಾ.ಎಲ್. ಮುರುಗನ್

ಸದ್ಯದಲ್ಲೇ ಅನಿಮೇಷನ್ ಮತ್ತು ವಿಎಫ್ ಎಕ್ಸ್ ಗೆ ವಿಶ್ವದರ್ಜೆಯ ಶಿಕ್ಷಣ ಕೇಂದ್ರ ಸ್ಥಾಪನೆ- ಸಚಿವರ ಹೇಳಿಕೆ


ಚಲನಚಿತ್ರೋದ್ಯಮದ ವ್ಯವಹಾರಗಳಿಗೆ ಪೂರಕ ವಾತಾವರಣ ಸೃಷ್ಟಿಸಲು ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಹಾಯಕ ಸಚಿವ ಡಾ.ಎಲ್. ಮುರುಗನ್  ಹೇಳಿದ್ದಾರೆ. ಅವರು ಚೆನ್ನೈನಲ್ಲಿಂದು ದಕ್ಷಿಣ ಭಾರತ ಫಿಲಂ ಚೇಂಬರ್ ಅಧಿಕಾರಿಗಳು ಮತ್ತು ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದ ವೇಳೆ ಈ ವಿಷಯ ತಿಳಿಸಿದರು.

ವಾರ್ತಾ ಮತ್ತು ಪ್ರಸಾರ ಸಚಿವಾಲಯ ವೆಬ್ ಪೋರ್ಟಲ್ ಆರಂಭಿಸಿದ್ದು, ಅಲ್ಲಿಯೇ ಶೂಟಿಂಗ್ ಗೆ ನಾನಾ ಇಲಾಖೆಗಳ ಅನುಮತಿ ಪಡೆಯಲು ಅರ್ಜಿ ಸಲ್ಲಿಸಬಹುದಾಗಿದೆ. ಇದರಿಂದಾಗಿ ನಿರ್ಮಾಪಕರು ಭಾರತದ ಯಾವುದೇ ಕಡೆ ಶೂಟಿಂಗ್ ಮಾಡಲು ಆನ್ ಲೈನ್ ನಲ್ಲಿಯೇ ಅನುಮತಿ ಪಡೆಯಬಹುದಾಗಿದ್ದು, ಇದರಿಂದಾಗಿ ವ್ಯವಹಾರಕ್ಕೆ ಪೂರಕ ವಾತಾವರಣ ಖಾತ್ರಿಯಾಗಿದೆ ಎಂದು ಅವರು ಹೇಳಿದರು.

ಅನಿಮೇಷನ್ ಮತ್ತು ವಿಎಫ್ ಎಕ್ಸ್ ಗಾಗಿ ವಿಶ್ವದರ್ಜೆಯ ಶಿಕ್ಷಣ ಕೇಂದ್ರವನ್ನು ಸ್ಥಾಪಿಸಲು ಐಐಟಿ ಮುಂಬೈ ಜೊತೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಚಲನಚಿತ್ರ ಉದ್ಯಮದ ನಾನಾ ಸಂಘಟನೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು ಮತ್ತು ಅವರು ಚಿತ್ರೋದ್ಯಮಕ್ಕೆ ಸಂಬಂಧಿಸಿದ ಬೇಡಿಕೆಗಳು ಮತ್ತು ಮನವಿಗಳನ್ನು ಒಳಗೊಂಡ  ಜ್ಞಾಪನಾಪತ್ರಗಳನ್ನು ಸಚಿವರಿಗೆ ನೀಡಿದರು.

ಕೋವಿಡ್, ಪ್ರಾಣಿ ಕಲ್ಯಾಣ ಮಂಡಳಿ ಪ್ರಮಾಣೀಕರಣ, ಗೋಪ್ಯತೆ ವಿಷಯಗಳು, ಚಲನಚಿತ್ರ ಶೂಟಿಂಗ್ ಗೆ ಏಕಗವಾಕ್ಷಿ ಅನುಮತಿ ವ್ಯವಸ್ಥೆ, ದುಪ್ಪಟ್ಟು ತೆರಿಗೆ ಸೇರಿದಂತೆ ಚಿತ್ರೋದ್ಯಮ ಹಲವು ವಿಷಯಗಳು ಮನವಿಪತ್ರದಲ್ಲಿ ಉಲ್ಲೇಖಿಸಲಾಗಿತ್ತು. ಅಲ್ಲದೆ, ಅವರು, ಪ್ರಾಣಿ ಕಲ್ಯಾಣ ಮಂಡಳಿಯ ಒಂದು ಘಟಕಗಳನ್ನು ಪ್ರಾದೇಶಿಕ ಸೆನ್ಸಾರ್ ಮಂಡಳಿಗಳ ಕಚೇರಿಯಲ್ಲಿ ಇರುವಂತೆ ಮಾಡಬೇಕೆಂದು ಮನವಿ ಮಾಡಿದರು.

ಸೆನ್ಸಾರ್ ಮಂಡಳಿಯಲ್ಲಿ ಹೆಚ್ಚು ಚಿತ್ರೋದ್ಯಮದ ಸದಸ್ಯರನ್ನು ಸೇರ್ಪಡೆ ಮಾಡುವುದು, ಸೆನ್ಸಾರ್ ಬೋರ್ಡ್ ನ್ಯಾಯಮಂಡಳಿ ರಚಿಸುವುದು ಮತ್ತು ದೂರದರ್ಶನದ ಪ್ರಶಸ್ತಿಗೆ ಆಯ್ಕೆಯಾದವು ಸೇರಿದಂತೆ ಜನಪ್ರಿಯ ಚಿತ್ರಗಳನ್ನು ಪ್ರಸಾರ ಮಾಡುವುದು ಸೇರಿದಂತೆ ಅನೇಕ ಮನವಿಗಳನ್ನು ಸಚಿವರಿಗೆ ನೀಡಲಾಯಿತು.

ನಾನಾ ಸಂಘಟನೆಗಳ ಪ್ರತಿನಿಧಿಗಳಿಂದ ಜ್ಞಾಪನಾ ಪತ್ರ ಮತ್ತು ಮನವಿಗಳನ್ನು ಸ್ವೀಕರಿಸಿದ ನಂತರ ಮಾತನಾಡಿದ ಸಚಿವರು, ಚಿತ್ರೋದ್ಯಮದ ಎಲ್ಲ ಸಮಸ್ಯೆಗಳನ್ನು ಬಗೆಹರಿಸಲು ಸರ್ಕಾರ ಎಲ್ಲ ಪ್ರಯತ್ನಗಳನ್ನು ನಡೆಸಲಿದೆ ಎಂದು ಭರವಸೆ ನೀಡಿದರು.

ದಕ್ಷಿಣ ಭಾರತದ ಚಿತ್ರೋದ್ಯಮವನ್ನು ಮೆಕ್ಕಾ ಎಂದು ಪರಿಗಣಿಸಲಾಗಿದ್ದು, ಎಸ್ ಐಎಫ್ ಸಿಸಿಯಲ್ಲಿ ನಾನಾ ಸಂಘಟನೆಗಳ ಪ್ರತಿನಿಧಿಗಳನ್ನು ಭೇಟಿ ಮಾಡಿದ್ದು ತಮಗೆ ಹೆಮ್ಮೆ ಎನಿಸಿದೆ ಎಂದರು. ವಿಚಾರ ವಿನಿಮಯಕ್ಕಾಗಿ ಮುಂಬರುವ ಗೋವಾ ಚಲನಚಿತ್ರೋತ್ಸವದಲ್ಲಿ ಭಾಗವಹಿಸುವಂತೆ ಸಚಿವರು ಎಲ್ಲ ಸದಸ್ಯರಿಗೆ ಮನವಿ ಮಾಡಿದರು. 

Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,