Header Ads Widget

ಸರ್ಚ್ ಕೂರ್ಗ್ ಮೀಡಿಯ

ರಾಷ್ಟ್ರೀಯ ಸ್ವಯಂಸೇವಕ ಸಂಘ ಅಖಿಲ ಭಾರತ ಕಾರ್ಯಕಾರಿ ಮಂಡಳಿ ಬೈಠಕ್, 2021- ಧಾರವಾಡದಲ್ಲಿ ಪ್ರಾರಂಭ

ರಾಷ್ಟ್ರೀಯ ಸ್ವಯಂಸೇವಕ ಸಂಘ ಅಖಿಲ ಭಾರತ ಕಾರ್ಯಕಾರಿ ಮಂಡಳಿ ಬೈಠಕ್, 2021- ಧಾರವಾಡದಲ್ಲಿ ಪ್ರಾರಂಭ


ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತ ಕಾರ್ಯಕಾರಿ ಮಂಡಳಿಯ ಸಭೆಯು ಇಂದು ಧಾರವಾಡದಲ್ಲಿ (ಕರ್ನಾಟಕ) ಪೂಜ್ಯ ಸರಸಂಘಚಾಲಕ ಡಾ. ಮೋಹನ್ ಭಾಗವತ್ ಜೀ ಮತ್ತು ಮಾನ್ಯ ಸರಕಾರ್ಯವಾಹರಾದ ಶ್ರೀ ದತ್ತಾತ್ರೇಯ ಹೊಸಬಾಳೆ ಅವರು ಭಾರತಮಾತೆಯ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಪ್ರಾರಂಭವಾಯಿತು. 

ದೇಶದಾದ್ಯಂತದಿಂದ ಆಗಮಿಸಿರುವ ಎಲ್ಲ ಪ್ರಾಂತಗಳ ಹಾಗೂ ಕ್ಷೇತ್ರಗಳ ಸಂಘಚಾಲಕ, ಕಾರ್ಯವಾಹ, ಪ್ರಚಾರಕ, ಅಖಿಲ ಭಾರತ ಕಾರ್ಯಕಾರಿಣಿ ಸದಸ್ಯರು ಮತ್ತು ಕೆಲ ಆಯ್ದ ಸಂಘಟನೆಗಳ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಗಳು ಸೇರಿದಂತೆ ಸುಮಾರು 350 ಕಾರ್ಯಕರ್ತರು ಈ ಸಭೆಯಲ್ಲಿ ಭಾಗವಹಿಸುತ್ತಿದ್ದಾರೆ.

ಸಭೆಯಲ್ಲಿ ಸಂಘದ ಕಾರ್ಯದ ಪ್ರಸ್ತುತ ಸ್ಥಿತಿಗತಿ, ಕಾರ್ಯ ವಿಸ್ತಾರ ಹಾಗೂ ಕಾರ್ಯಕರ್ತರ ವಿಕಾಸದ ಯೋಜನೆಗಳ ಕುರಿತು ಚರ್ಚೆ ನಡೆಯಲಿದೆ. ಬಾಂಗ್ಲಾದೇಶದಲ್ಲಿ ಇತ್ತೀಚಿಗೆ ನಡೆದ ಹಿಂದೂಗಳ ಮೇಲಿನ ಹಿಂಸಾಚಾರದ ಬಗ್ಗೆ ನಿರ್ಣಯವನ್ನು ಅಂಗೀಕರಿಸಲಾಗುವುದು.

ಸಭೆಯ ಆರಂಭದಲ್ಲಿ ಇತ್ತೀಚಿಗೆ ನಿಧನರಾದ ಗಣ್ಯರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಇದರಲ್ಲಿ ಸಂಸ್ಕಾರ ಭಾರತಿಯ ಅಖಿಲ ಭಾರತ ಪ್ರಧಾನ ಕಾರ್ಯದರ್ಶಿ ಶ್ರೀ ಅಮೀರ್ ಚಂದ್, ಕನ್ನಡ ಲೇಖಕರಾದ ಶ್ರೀ ಜಿ. ವೆಂಕಟಸುಬ್ಬಯ್ಯ,  ಸ್ವಾತಂತ್ರ್ಯ ಹೋರಾಟಗಾರ ಮತ್ತು ಪತ್ರಕರ್ತ ಶ್ರೀ ಎಚ್.ಎಸ್. ದೊರೆಸ್ವಾಮಿ, ಖ್ಯಾತ ಕವಿ ಡಾ. ಎಚ್. ಸಿದ್ದಲಿಂಗಯ್ಯ, ರಾಜಕಾರಣಿ ಶ್ರೀ ಆಸ್ಕರ್ ಫೆರ್ನಾಂಡೀಸ್, ಸ್ವಾಮಿ ಅಧ್ಯಾತ್ಮಾನಂದ ಜಿ, ಸ್ವಾಮಿ ಓಂಕಾರಾನಂದ್ ಜಿ, ಸ್ವಾಮಿ ಅರುಣಗಿರಿ ಜಿ, ಹಿರಿಯ ಪತ್ರಕರ್ತ ಶ್ರೀ ಶ್ಯಾಮ್ ಖೋಸ್ಲಾ, ದೈನಿಕ್ ಜಾಗರಣ್ ಮಾಲೀಕ ಶ್ರೀ ಯೋಗೇಂದ್ರ ಮೋಹನ್ ಗುಪ್ತಾ, ಗೀತಾ ಪ್ರೆಸ್ ಗೋರಖ್ಪುರ ಅಧ್ಯಕ್ಷ ಶ್ರೀ ರಾಧೇಶ್ಯಾಮ್ ಖೆಮ್ಕಾ,  ಲೇಖಕರು ಶ್ರೀ ನರೇಂದ್ರ ಕೊಹ್ಲಿ, ಶ್ರೀ ರಾಜೇಶ್ ಸತವ್, ರಾಜ್ಯಸಭಾ ಸಂಸದ (ಕಾಂಗ್ರೆಸ್), ಅಟಾರ್ನಿ ಜನರಲ್ ಶ್ರೀ ಸೋಲಿ ಸೊರಾಬ್ಜಿ, ಮಾಜಿ  ರಾಜ್ಯಪಾಲ ಶ್ರೀ ಜಗಮೋಹನ್, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಶ್ರೀ ಕಲ್ಯಾಣ್ ಸಿಂಗ್, ಪತ್ರಕರ್ತ ಶ್ರೀ ರೋಹಿತ್ ಸರ್ದಾನ, ಶ್ರೀ ಸುಂದರ್ ಲಾಲ್ ಬಹುಗುಣ (ಚಿಪ್ಕೋ ಚಳವಳಿ) ), ಅಖಾಡಾ ಪರಿಷತ್ತಿನ ಅಧ್ಯಕ್ಷರು ಮಹಂತ್ ನರೇಂದ್ರ ಗಿರಿ ಜಿ ಮಹಾರಾಜ್, ಹಿಮಾಚಲ ಪ್ರದೇಶದ ಮಾಜಿ ಮುಖ್ಯಮಂತ್ರಿ ಶ್ರೀ ವೀರಭದ್ರ ಸಿಂಗ್ ಪ್ರಮುಖರಾಗಿದ್ದಾರೆ.

ಸಭೆಯು ಅಕ್ಟೋಬರ್ 30 ರಂದು ಸಂಜೆ ಮುಕ್ತಾಯಗೊಳ್ಳಲಿದೆ.



Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,