Header Ads Widget

ಸರ್ಚ್ ಕೂರ್ಗ್ ಮೀಡಿಯ

ನಿಟ್ಟೂರಿನಲ್ಲಿ ಕಸ ವಿಲೇವಾರಿ ಘಟಕಕ್ಕೆ ಭೂಮಿಪೂಜೆ

ನಿಟ್ಟೂರಿನಲ್ಲಿ ಕಸ ವಿಲೇವಾರಿ ಘಟಕಕ್ಕೆ ಭೂಮಿಪೂಜೆ


ಮಡಿಕೇರಿ ಅ.28: ನಿಟ್ಟೂರು ಗ್ರಾಮದಲ್ಲಿ ಸ್ವಚ್ಛ ಗ್ರಾಮ ಅನುದಾನದಲ್ಲಿ ನೂತನವಾಗಿ 5 ಲಕ್ಷ ರೂ ವೆಚ್ಚದಲ್ಲಿ  ನಿರ್ಮಾಣವಾಗಲಿರುವ  ಕಸ ವಿಲೇವಾರಿ ಘಟಕದ ಕಾಮಗಾರಿಗೆ ಗುರುವಾರ ನಿಟ್ಟೂರು ಗ್ರಾಮ ಪಂಚಾಯಿತಿ ಅದ್ಯಕ್ಷರಾದ  ಚಕ್ಕೇರ ಅಯ್ಯಪ್ಪ ಮತ್ತು ಉಪಾಧ್ಯಕ್ಷರಾದ ಪಡಿಞರಂಡ ಕವಿತಾಪ್ರಭು ಚಾಲನೆ ನೀಡಿದರು. 


ಚಕ್ಕೇರ ಅಯ್ಯಪ್ಪವರು ಮಾತನಾಡಿ ಇಂದು ಭೂಮಂಡಳವನ್ನು ಕಾಡುತ್ತಿರುವ ಮಹಾ ಮಾರಿ ಪ್ಲಾಸ್ಟಿಕ್ ತ್ಯಾಜ್ಯ ವಸ್ತುಗಳಾಗಿದ್ದು ಜನ ಈಗಿನಿಂದಲೇ ಎಚ್ಚೆತ್ತುಕೊಂಡು ಈ ಪ್ಲಾಸ್ಟಿಕ್ ತ್ಯಾಜ್ಯ ವಸ್ತುಗಳ ಬಗ್ಗೆ ಕಾಳಜಿ ವಹಿಸದಿದ್ದರೆ. ಮುಂಬರುವ ವರ್ಷಗಳಲ್ಲಿ ಮನುಕುಲವನ್ನು ಸೇರಿದಂತೆ ಎಲ್ಲಾ ಜೀವ ಜಂತುಗಳನ್ನು  ಬೆಂಬಿಡದೆ ಕಾಡಲಿದೆಯೆಂದು ಎಚ್ಚರಿಕೆಯ ಮಾತನಾಡಿದರು, ಗ್ರಾಮ ಪಂಚಾಯಿತಿ ಸದಸ್ಯರಾದ ಕಾಟಿಮಾಡ ಶರೀನ್ ಮುತ್ತಣ್ಣ, ಅಳಮೇಂಗಡ ಪವಿತಾ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮನಮೋಹನ್, ಗ್ರಾಮದ ಪ್ರಮುಖರು ಹಾಜರಿದ್ದರು.

Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,