Header Ads Widget

ಸರ್ಚ್ ಕೂರ್ಗ್ ಮೀಡಿಯ

ಅಂತಾರಾಷ್ಟ್ರೀಯ ಬೆಲೆ ಏರಿಕೆಯನ್ನು ಸರಿದೂಗಿಸಲು ಪ್ರತಿ ಚೀಲಕ್ಕೆ ಒಂದು ಬಾರಿಗೆ ಅನ್ವಯವಾಗುವ ಪ್ಯಾಕೇಜ್ ನಡಿ ಡಿಎಪಿಗೆ ಸಬ್ಸಿಡಿ ದರ 438 ರೂಪಾಯಿಗೆ ಏರಿಕೆ

ಅಂತಾರಾಷ್ಟ್ರೀಯ ಬೆಲೆ ಏರಿಕೆಯನ್ನು ಸರಿದೂಗಿಸಲು ಪ್ರತಿ ಚೀಲಕ್ಕೆ ಒಂದು ಬಾರಿಗೆ ಅನ್ವಯವಾಗುವ ಪ್ಯಾಕೇಜ್ ನಡಿ ಡಿಎಪಿಗೆ ಸಬ್ಸಿಡಿ ದರ 438 ರೂಪಾಯಿಗೆ ಏರಿಕೆ


ಫಾಸ್ಪೆಟಿಕ್ ಮತ್ತು ಪೊಟಾಸಿಕ್ [ಪಿ ಅಂಡ್ ಕೆ] ರಸಗೊಬ್ಬರಗಳ ಬೆಲೆ ಕುರಿತ 20.5.2021 ರ ಅಧಿಸೂಚನೆಯನ್ನು ಪ್ರಧಾನಮಂತ್ರಿ  ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಕುರಿತ ಸಂಪುಟ ಸಮಿತಿ 1.10.2021 ರಿಂದ 31.3.2022 ರ ವರೆಗೆ ಇಡೀ ವರ್ಷ್ಕಕ್ಕೆ ವಿಸ್ತರಿಸಲು ಅನುಮೋದನೆ ನೀಡಿದೆ.

ಡೈಮೋನಿಯಂ ಫಾಸ್ಪೆಟ್  [ಡಿ.ಎ.ಪಿ]ನ ಹೆಚ್ಚುತ್ತಿರುವ ಅಂತಾರಾಷ್ಟ್ರೀಯ ಬೆಲೆಗಳನ್ನು ಕೇಂದ್ರ ಸರ್ಕಾರ ಸರಿದೂಗಿಸಲು ನಿರ್ಧರಿಸಿದೆ. ಅಂತಾರಾಷ್ಟ್ರೀಯ ಬೆಲೆ ಏರಿಕೆಯನ್ನು ಸರಿಗಟ್ಟಲು ಪ್ರತಿ ಚೀಲಕ್ಕೆ ಒಂದು ಬಾರಿಗೆ ಅನ್ವಯವಾಗುವ ಪ್ಯಾಕೇಜ್ ನಡಿ ಡಿಎಪಿಗೆ ಸಬ್ಸಿಡಿ ದರವನ್ನು 438 ರೂಪಾಯಿಗೆ ಏರಿಕೆ ಮಾಡಲು ನಿರ್ಧರಿಸಿದೆ.

ಎನ್.ಪಿ.ಕೆಯ ಹೆಚ್ಚು ಬಳಕೆಯಲ್ಲಿರುವ ಮೂರು (10:26:26, 20:20:0:13 ಮತ್ತು 12:32:16) ಶ್ರೇಣಿಗಳಿಗೆ ಪ್ರತಿ  ಚೀಲಕ್ಕೆ 100 ರೂಪಾಯಿ ಮೊತ್ತವನ್ನು ಒಂದು ಬಾರಿಗೆ ಅನ್ವವಾಗುವಂತೆ ಹೆಚ್ಚಳ ಮಾಡುತ್ತಿದ್ದು,  ಎನ್.ಪಿ.ಕೆ. ಶ್ರೇಣಿಯ ಈ ರಸಗೊಬ್ಬರ ಈ ಮೂಲಕ ರೈತರಿಗೆ ಕೈಗಟುವ ದರದಲ್ಲಿ ದೊರೆಯಲಿದೆ.

ಮೊದಲ ಬಾರಿಗೆ ಪೌಷ್ಟಿಕ ಆಧಾರಿತ ಸಬ್ಸಿಡಿ [ಎನ್.ಬಿ.ಎಸ್] ಯೋಜನೆಯಡಿ ಮೊಲಾಸಿಸ್ ನಿಂದ ಪಡೆದ ಪೊಟ್ಯಾಶ್ [ಪಿ.ಡಿ.ಎಂ] ಅನ್ನು ಸೇರ್ಪಡೆ ಮಾಡಲಾಗಿದೆ. 2010 ರಲ್ಲಿ ಆರಂಭವಾದ ಎನ್.ಬಿ.ಎಸ್ ಯೋಜನೆಯಡಿ ಮೊದಲ ಬಾರಿಗೆ ಸಕ್ಕರೆ ಕಾರ್ಖಾನೆಗಳ ಉತ್ಪಾದನೆಯನ್ನು ಉಪ ಉತ್ಪನ್ನವಾಗಿ ನೀಡಲಾಗುತ್ತಿದೆ. ಈ ಗೊಬ್ಬರವನ್ನು ಪಿಡಿಎಂ-0:0; 14.5:0 ಎಂದು ಕರೆಯಲಾಗುತ್ತದೆ.

ಈ ತೀರ್ಮಾನದಿಂದ ಖನಿಜ ಆಧಾರಿತ ಪೊಟ್ಯಾಶ್ [ಎಂ.ಒ.ಪಿ] ನಲ್ಲಿ 42 ಲಕ್ಷ ಮೆಟ್ರಿಕ್ ಟನ್ -ಎಲ್.ಎಂ.ಟಿ ಗಿಂತ ಹೆಚ್ಚಿನ ಅಥವಾ ಶೇ 100 ರಷ್ಟು ಪ್ರಮಾಣದ ಆಮದು ಅವಲಂಬನೆ ತಗ್ಗಲಿದೆ. ವಾರ್ಷಿಕ ಎಂ.ಒ.ಪಿ ವೆಚ್ಚ  7,160 ರಷ್ಟಿದೆ. ಈ ತೀರ್ಮಾನದಿಂದ ಸಕ್ಕರೆ ಕಾರ್ಖಾನೆಗಳು ಮತ್ತು ಕಬ್ಬು ಬೆಳೆಗಾರರ ಆದಾಯ ವೃದ್ಧಿಯಾಗುವುದಷ್ಟೇ ಅಲ್ಲದೇ 50 ಕೆ.ಜಿ. ಚೀಲದ ಮೇಲೆ 73 ರೂಪಾಯಿ ಸಬ್ಸಿಡಿ ದೊರೆಯಲಿದೆ. ರಸಗೊಬ್ಬರ ಕಂಪೆನಿಗಳು ಗೊಬ್ಬರವನ್ನು 600-800 ರೂಪಾಯಿ ದರದಲ್ಲಿ ಮಾರಾಟ ಮಾಡಲಿವೆ.

ಪಿ.ಡಿ.ಎಂ ಮೇಲೆ ಕೇಂದ್ರ ಸರ್ಕಾರ ವಾರ್ಷಿಕ 156 ಕೋಟಿ ರೂಪಾಯಿ [ಅಂದಾಜು] ವೆಚ್ಚ ಮಾಡುವ ನಿರೀಕ್ಷೆಯಿದೆ ಮತ್ತು ಇದರಿಂದ 562 ಕೋಟಿ ರೂಪಾಯಿ ವಿದೇಶಿ ವಿನಿಯಮವನ್ನು ಉಳಿತಾಯ ಮಾಡಬಹುದಾಗಿದೆ.

Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,