Header Ads Widget

Responsive Advertisement

ಚಹಾ ಮತ್ತು ಬಾಳೆಹಣ್ಣಿನ ತ್ಯಾಜ್ಯವನ್ನು ಬಳಸಿ ವಿಷಕಾರಿಯಲ್ಲದ ಸಕ್ರಿಯ ಇಂಗಾಲದ ಅಭಿವೃದ್ಧಿ

ಚಹಾ ಮತ್ತು ಬಾಳೆಹಣ್ಣಿನ ತ್ಯಾಜ್ಯವನ್ನು ಬಳಸಿ ವಿಷಕಾರಿಯಲ್ಲದ ಸಕ್ರಿಯ ಇಂಗಾಲದ ಅಭಿವೃದ್ಧಿ


(ಎಡದಿಂದ) ಡಾ.ಮನಶ್ ಜ್ಯೋತಿ ದೇಕಾ, ಡಾ.ದೇವಶಿಶ್ ಚೌಧುರಿ, ಡಾ.ಎನ್.ಸಿ. ತಾಲೂಕುದಾರ್

ಚಹಾ ತ್ಯಾಜ್ಯ ಮತ್ತು ಬಾಳೆಹಣ್ಣಿನ ತ್ಯಾಜ್ಯವನ್ನು ಬಳಸಿ ವಿಷಕಾರಿಯಲ್ಲದ ಸಕ್ರಿಯ ಇಂಗಾಲವನ್ನು ತಯಾರಿಸುವಲ್ಲಿ ವಿಜ್ಞಾನಿಗಳ ತಂಡವೊಂದು ಯಶಸ್ವಿಯಾಗಿದೆ. ಹೀಗೆ ತಯಾರಿಸಿದ ಸಕ್ರಿಯ ಇಂಗಾಲವು ಕೈಗಾರಿಕಾ ಮಾಲಿನ್ಯ ನಿಯಂತ್ರಣ, ನೀರಿನ ಶುದ್ಧೀಕರಣ, ಆಹಾರ ಮತ್ತು ಪಾನೀಯ ಸಂಸ್ಕರಣೆ ಮತ್ತು ವಾಸನೆ ನಿರ್ಮೂಲನೆಯಂತಹ ಹಲವಾರು ಉದ್ದೇಶಗಳಿಗೆ ಉಪಯುಕ್ತವಾಗಿದೆ. ಹೊಸದಾಗಿ ಅಭಿವೃದ್ಧಿಪಡಿಸಿದ ಈ ಪ್ರಕ್ರಿಯೆಯಲ್ಲಿ ಸಕ್ರಿಯ ಇಂಗಾಲವನ್ನು ಸಂಶ್ಲೇಷಿಸಲು ಯಾವುದೇ ವಿಷಕಾರಿ ಏಜೆಂಟ್ ಬಳಕೆ ಮಾಡದಿರುವುದು ವಿಶೇಷ. ಇದರಿಂದಾಗಿ ಉತ್ಪನ್ನವು ಕಡಿಮೆ ತಯಾರಾಗುವುದಲ್ಲದೆ, ಅದು ವಿಷಯುಕ್ತವಾಗುವುದನ್ನು ತಪ್ಪಿಸಬಹುದು. 

ಚಹಾದ ಸಂಸ್ಕರಣೆ ವೇಳೆ ಸಾಮಾನ್ಯವಾಗಿ ಚಹಾ ಧೂಳಿನ ರೂಪದಲ್ಲಿ ಸಾಕಷ್ಟು ತ್ಯಾಜ್ಯ ಉತ್ಪಾದನೆಯಾಗುತ್ತದೆ. ಇದನ್ನು ಉಪಯುಕ್ತ ಪದಾರ್ಥಗಳಾಗಿ ಪರಿವರ್ತಿಸಬಹುದು. ಚಹಾ ಎಲೆಯ ರಚನೆಯು ಉತ್ತಮ ಗುಣಮಟ್ಟದ ಸಕ್ರಿಯ ಇಂಗಾಲಕ್ಕೆ ಪರಿವರ್ತನೆಗೊಳ್ಳಲು ಅನುಕೂಲಕರವಾಗಿರುತ್ತದೆ. ಆದಾಗ್ಯೂ, ಅದನ್ನು ಸಕ್ರಿಯ ಇಂಗಾಲವಾಗಿ ಪರಿವರ್ತಿಸಲು ಬಲವಾದ ಆಮ್ಲ ಮತ್ತು ಧಾತುಗಳನ್ನು ಬಳಸಲಾಗುತ್ತದೆ. ಇದು ಉತ್ಪನ್ನವನ್ನು ವಿಷಕಾರಿಯನ್ನಾಗಿ ಮಾಡುತ್ತದೆ ಹೀಗಾಗಿ ಇಂತಹ ಉತ್ಪನ್ನವು ಬಹುತೇಕ ಬಳಕೆಗಳಿಗೆ ಸೂಕ್ತವಾಗಿರುವುದಿಲ್ಲ. ಆದ್ದರಿಂದ ಈ ಸವಾಲನ್ನು ಎದುರಿಸಲು ವಿಷಕಾರಿಯಲ್ಲದ ಪರಿವರ್ತನೆಯ ವಿಧಾನವೊಂದರ ಅಗತ್ಯವಿತ್ತು.

ಭಾರತ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸ್ವಾಯತ್ತ ಸಂಸ್ಥೆಯಾದ ಗುವಾಹಟಿಯ ʻವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಸುಧಾರಿತ ಅಧ್ಯಯನ ಸಂಸ್ಥೆʼಯ (ಐಎಎಸ್‌ಎಸ್‌ಟಿ) ಮಾಜಿ ನಿರ್ದೇಶಕ ಡಾ. ಎನ್.ಸಿ. ತಾಲೂಕುದಾರ್ ಮತ್ತು ಸಹ ಪ್ರಾಧ್ಯಾಪಕ ಡಾ. ದೇವಶಿಶ್ ಚೌಧರಿ ಅವರು ಚಹಾ ತ್ಯಾಜ್ಯಗಳಿಂದ ಸಕ್ರಿಯ ಇಂಗಾಲವನ್ನು ತಯಾರಿಸಲು ಪರ್ಯಾಯ ಸಕ್ರಿಯ ಏಜೆಂಟ್ ಆಗಿ ಬಾಳೆ ಗಿಡದ ಸಾರವನ್ನು ಬಳಸಿದ್ದಾರೆ.

ಬಾಳೆ ಗಿಡದ ಸಾರದಲ್ಲಿರುವ ಆಮ್ಲಜನಕೀಕೃತ ಪೊಟ್ಯಾಸಿಯಮ್ ಸಂಯುಕ್ತಗಳು ಚಹಾ ತ್ಯಾಜ್ಯದಿಂದ ತಯಾರಿಸಿದ ಇಂಗಾಲವನ್ನು ಸಕ್ರಿಯಗೊಳಿಸಲು ಸಹಾಯ ಮಾಡುತ್ತವೆ. ಈ ವಿಧಾನಕ್ಕೆ ಇತ್ತೀಚೆಗೆ ಭಾರತೀಯ ಪೇಟೆಂಟ್ ಸಹ ಪಡೆಯಲಾಗಿದೆ. 

ಈ ಪ್ರಕ್ರಿಯೆಯಲ್ಲಿ ಬಳಸಲಾದ ಬಾಳೆ ಗಿಡದ ಸಾರವನ್ನು ಸಾಂಪ್ರದಾಯಿಕ ರೀತಿಯಲ್ಲಿ ತಯಾರಿಸಲಾಗಿದೆ. ಒಣಗಿದ ಬಾಳೆಹಣ್ಣಿನ ಸಿಪ್ಪೆಗಳನ್ನು ಸುಟ್ಟಾಗ ಅದರಿಂದ ಬಂದ ಬೂದಿಯ ಕ್ಷಾರೀಯ ಸಾರ ಇದಾಗಿದ್ದು, ಇದನ್ನು ʻಖಾರ್ʼ ಎಂದು ಕರೆಯಲಾಗುತ್ತದೆ. ಈ ಉದ್ದೇಶಕ್ಕಾಗಿ ಬಳಸಲು ಅಸ್ಸಾಮಿ ಭಾಷೆಯಲ್ಲಿ 'ಭೀಮ್ ಕೋಲ್' ಎಂದು ಕರೆಯಲಾಗುವ ಆದ್ಯತೆ ನೀಡುವ ಬಾಳೆಹಣ್ಣಿಗೆ ಆದ್ಯತೆ ನೀಡಲಾಗುತ್ತದೆ. ʻಭೀಮ್ ಕೋಲ್ʼ ಎಂಬುದು ಅಸ್ಸಾಂ ಮತ್ತು ಈಶಾನ್ಯ ಭಾರತದ ಕೆಲವು ಭಾಗಗಳಲ್ಲಿ ಮಾತ್ರ ಕಂಡುಬರುವ ಸ್ಥಳೀಯ ಬಾಳೆಹಣ್ಣಿನ ತಳಿಯಾಗಿದೆ. ʻಖಾರ್‌ʼ ತಯಾರಿಸುವ ಮೊದಲು ಬಾಳೆಯ ಸಿಪ್ಪೆಯನ್ನು ಒಣಗಿಸಿ, ನಂತರ ಸುಟ್ಟು, ಅದರಿಂದ ಬೂದಿ ಯನ್ನು ತಯಾರಿಸುತ್ತಾರೆ. ನಂತರ ಬೂದಿಯನ್ನು ಪುಡಿ ಮಾಡಿ ನುಣ್ಣಗೆ ಅರೆಯಲಾಗುತ್ತದೆ. ನಂತರ ಸ್ವಚ್ಛವಾದ ಹತ್ತಿ ಬಟ್ಟೆಯನ್ನು ಬಳಸಿ, ಬೂದಿ ಪುಡಿಯ ಮೂಲಕ ನೀರನ್ನು ಫಿಲ್ಟರ್ ಮಾಡಲಾಗುತ್ತದೆ. ಅದರಿಂದ ನಮಗೆ ಸಿಗುವ ಅಂತಿಮ ಉತ್ಪನ್ನವನ್ನು ʻಖಾರ್ʼ ಎಂದು ಕರೆಯಲಾಗುತ್ತದೆ. ಈ ಬಾಳೆಯಿಂದ ಹೊರತೆಗೆಯಲಾದ ನೈಸರ್ಗಿಕ ʻಖಾರʼ ವನ್ನು 'ಕೋಲ್ ಖಾರ್' ಅಥವಾ 'ಕೋಲಾ ಖಾರ್' ಎಂದು ಕರೆಯಲಾಗುತ್ತದೆ. ಈ ಸಾರವನ್ನು ಇಂಗಾಲವನ್ನು ಸಕ್ರಿಯಗೊಳಿಸುವ ಏಜೆಂಟ್ ಆಗಿ ಬಳಸಲಾಯಿತು.

ಐಎಎಸ್ ಎಸ್ಟಿ ತಂಡವು ವಿವರಿಸುತ್ತದೆ, "ಸಕ್ರಿಯ ಇಂಗಾಲದ ಸಂಶ್ಲೇಷಣೆಗೆ ಪೂರ್ವವರ್ತಿಯಾಗಿ ಚಹಾವನ್ನು ಬಳಸಲು ಕಾರಣವೆಂದರೆ, ಚಹಾ ರಚನೆಯಲ್ಲಿ, ಇಂಗಾಲದ ಪರಮಾಣುಗಳು ಸಂಯೋಜಿತಗೊಂಡಿರುತ್ತವೆ ಮತ್ತು ʻಪಾಲಿಫಿನಾಲ್‌ʼಗಳ ಬಂಧವನ್ನು ಹೊಂದಿರುತ್ತದೆ. ಇದರ ಬಳಕೆಯಿಂದ ಇತರ ಇಂಗಾಲದ ಪೂರ್ವವರ್ತಿಗಳಿಗೆ ಹೋಲಿಸಿದರೆ ಸಕ್ರಿಯ ಇಂಗಾಲದ ಗುಣಮಟ್ಟವನ್ನು ಉತ್ತಮಗೊಳಿಸುತ್ತದೆ."

ಈ ಪ್ರಕ್ರಿಯೆಯ ಮುಖ್ಯ ಪ್ರಯೋಜನವೆಂದರೆ, ಮೂಲ ವಸ್ತುಗಳು ಮತ್ತು ಸಕ್ರಿಯಗೊಳಿಸುವ ಏಜೆಂಟ್‌ಗಳು ಎರಡೂ ತ್ಯಾಜ್ಯ ವಸ್ತುಗಳೇ. ಹೊಸದಾಗಿ ಅಭಿವೃದ್ಧಿಪಡಿಸಿದ ಪ್ರಕ್ರಿಯೆಯಲ್ಲಿ ಸಕ್ರಿಯ ಇಂಗಾಲವನ್ನು ಸಂಶ್ಲೇಷಿಸಲು ಯಾವುದೇ ವಿಷಕಾರಿ ಏಜೆಂಟ್ಗಳ  (ಉದಾಹರಣೆಗೆ, ವಿಷಕಾರಿ ಆಮ್ಲಗಳು ಮತ್ತು ಧಾತುಗಳು) ಬಳಕೆಯನ್ನು ತಪ್ಪಿಸಲಾಗುತ್ತದೆ. ಹೀಗಾಗಿ, ಈ ಪ್ರಕ್ರಿಯೆಯಲ್ಲಿ ಮೊದಲ ಬಾರಿಗೆ ಸಸ್ಯಜನ್ಯ ವಸ್ತುಗಳನ್ನು ಸಕ್ರಿಯಗೊಳಿಸುವ ಏಜೆಂಟ್ ಆಗಿ ಬಳಸಲಾಗಿದೆ. ಸಕ್ರಿಯ ಇಂಗಾಲವನ್ನು ಸಂಶ್ಲೇಷಿಸುವ ಈ ವಿನೂತನ ಪ್ರಕ್ರಿಯೆಯು ವೆಚ್ಚ ಮತ್ತು ವಿಷಯುಕ್ತತೆ ಎರಡನ್ನೂ ಕಡಿಮೆ ಮಾಡುತ್ತದೆ.

ಪೇಟೆಂಟ್ ವಿವರಗಳು: ಚಹಾ ತ್ಯಾಜ್ಯದಿಂದ ಸಕ್ರಿಯ ಇಂಗಾಲದ ತಯಾರಿಕೆಯ ಪ್ರಕ್ರಿಯೆ, ಪೇಟೆಂಟ್ ಸಂಖ್ಯೆ 377645

ಎ. ಚಹಾ ತ್ಯಾಜ್ಯದಿಂದ ಸಕ್ರಿಯ ಇಂಗಾಲದ ತಯಾರಿಕೆ ಸಂಶ್ಲೇಷಣೆ


ಬಿ. ಬಾಳೆ ಸಸ್ಯದಿಂದ ಸಕ್ರಿಯಗೊಳಿಸುವ ಏಜೆಂಟ್‌ ತಯಾರಿಕೆ ಸಂಶ್ಲೇಷಣೆ 

Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,