Header Ads Widget

ಸರ್ಚ್ ಕೂರ್ಗ್ ಮೀಡಿಯ

ಅಮೃತಧಾರೆ ಯೋಜನೆ ಅನುಷ್ಠಾನ

ಅಮೃತಧಾರೆ ಯೋಜನೆ ಅನುಷ್ಠಾನ


ಮಡಿಕೇರಿ: ಅಮೃತ ಧಾರೆ ಯೋಜನೆಯಡಿ ಜಿಲ್ಲೆಯಲ್ಲಿ 12 ಜರ್ಸಿ ತಳಿಯ ಹಾಗೂ 3 ಹಳ್ಳಿಕಾರ್ ತಳಿಯ ಜಾನುವಾರುಗಳ ಗಂಡು ಕರುಗಳನ್ನು ಅವುಗಳ ವಯಸ್ಸಿನ ಆಧಾರದ ಮೇರೆಗೆ ಇಲಾಖಾ ನಿಗಧಿಪಡಿಸಿದ ಬೆಲೆಯಂತೆ ರೈತರಿಗೆ ವಿತರಿಸಲಾಗುವುದು.

1 ವರ್ಷದಿಂದ 4 ವರ್ಷ ಮೇಲ್ಪಟ್ಟ 12 ಜರ್ಸಿ ಗಂಡು ಕರುವಿಗೆ ರೂ.10,700 ರಿಂದ 16,640 ಮತ್ತು 4 ವರ್ಷ ಮೇಲ್ಪಟ್ಟು 5 1/2 ದೊಳಗಿನ 03 ಹಳ್ಳಿಕಾರ್ ಗಂಡು ಕರುಗಳಿಗೆ ರೂ. 40,000 ಆಗಿದೆ. ಆಸಕ್ತ ರೈತರು ತಮ್ಮ ತಾಲ್ಲೂಕಿನ ಪಶು ಆಸ್ಪತ್ರೆಯ ತಾಲ್ಲೂಕು ಸಹಾಯಕ ನಿರ್ದೇಶಕರನ್ನು ಭೇಟಿ ಮಾಡಿ ಇದರ ಸದುಪಯೋಗ ಪಡೆದುಕೊಳ್ಳುವಂತೆ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವೆಗಳ ಉಪ ನಿರ್ದೇಶಕರಾದ ಸುರೇಶ್ ಭಟ್ ಅವರು ತಿಳಿಸಿದ್ದಾರೆ.
Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,