Header Ads Widget

Responsive Advertisement

ಡಿಡಿ ಚಂದನಕ್ಕೆ ದಶಲಕ್ಷ+ ಚಂದಾದಾರರು, ಡಿಜಿಟಲ್ ಪ್ರಸಾರ ಭಾರತಿಗೆ ದಕ್ಷಿಣದ ಉತ್ತೇಜನ

ಡಿಡಿ ಚಂದನಕ್ಕೆ ದಶಲಕ್ಷ+ ಚಂದಾದಾರರು, ಡಿಜಿಟಲ್ ಪ್ರಸಾರ ಭಾರತಿಗೆ ದಕ್ಷಿಣದ ಉತ್ತೇಜನ


ಗುಣಮಟ್ಟದ ಕಾರ್ಯಕ್ರಮಗಳು ಮತ್ತು ಡಿಜಿಟಲ್‌ಗೆ ಮೊದಲ ಆದ್ಯತೆಯನ್ನು ಅನುಸರಿಸುತ್ತಿರುವ ಪ್ರಸಾರ ಭಾರತಿಯ ಡಿಜಿಟಲ್ ವೇದಿಕೆಗಳು ದಕ್ಷಿಣ ಭಾರತದಲ್ಲಿ ಕೇವಲ ಒಂದೆರಡು ವರ್ಷಗಳಲ್ಲೇ ಬಹಳ ದೂರ ಸಾಗಿವೆ.

ಈ ಪ್ರದೇಶದಲ್ಲಿ ʻಡಿಡಿ ಚಂದನʼ (ಕರ್ನಾಟಕ) ಯೂಟ್ಯೂಬ್‌ನಲ್ಲಿ 1 ದಶಲಕ್ಷ ಚಂದಾದಾರರ ಮೈಲಿಗಲ್ಲನ್ನು ಸಾಧಿಸಿದ ಮೊದಲ ವಾಹಿನಿಯಾಗಿ ಹೊರಹೊಮ್ಮಿದೆ. ಇದೇ ವೇಳೆ ʻಡಿಡಿ ಸಪ್ತಗಿರಿʼ (ಆಂಧ್ರಪ್ರದೇಶ) ಮತ್ತು ʻಡಿಡಿ ಯಾದಗಿರಿʼ (ತೆಲಂಗಾಣ) ತ್ವರಿತ ಗತಿಯಲ್ಲಿ ಅರ್ಧ ದಶಲಕ್ಷ ಹೆಗ್ಗುರುತಿಗೆ ಹತ್ತಿರವಾಗುತ್ತಿವೆ.

ತಲಾ 1 ಲಕ್ಷಕ್ಕೂ ಹೆಚ್ಚು ಯೂಟ್ಯೂಬ್ ಚಂದಾದಾರರನ್ನು ಹೊಂದಿರುವ ತಮಿಳು ಮತ್ತು ಮಲಯಾಳಂ ಸುದ್ದಿ ಘಟಕಗಳು ಮತ್ತು ದೂರದರ್ಶನದ ಕೇಂದ್ರಗಳು ಪರಸ್ಪರ ಮತ್ತು ಸ್ಥಳೀಯ ಭಾಷಾ ಮಾಧ್ಯಮ ಉದ್ಯಮದೊಂದಿಗೆ ಆರೋಗ್ಯಕರ ಸ್ಪರ್ಧೆಯಲ್ಲಿವೆ.

ಈ ಯೂಟ್ಯೂಬ್ ಚಾನೆಲ್‌ಗಳಲ್ಲಿ ಹೆಚ್ಚು ವೀಕ್ಷಣೆ ಕಂಡ ವೀಡಿಯೊಗಳಲ್ಲಿ ಹಾಸ್ಯ ಮತ್ತು ಟೆಲಿಫೀಲಂಗಳು, ಸೆಲೆಬ್ರಿಟಿ ಸಂದರ್ಶನಗಳು ಮತ್ತು ಶೈಕ್ಷಣಿಕ ಕಾರ್ಯಕ್ರಮಗಳು ಸೇರಿವೆ.

ದೂರದರ್ಶನದ ರಾಷ್ಟ್ರೀಯ ಚಾನೆಲ್ ಗಳಲ್ಲಿ, ಅಂತರರಾಷ್ಟ್ರೀಯ ಇಂಗ್ಲಿಷ್ ಸುದ್ದಿ ವಾಹಿನಿ 'ಡಿಡಿ ಇಂಡಿಯಾ' ಇತ್ತೀಚೆಗೆ ಯೂಟ್ಯೂಬ್‌ನಲ್ಲಿ 1 ಲಕ್ಷ ಚಂದಾದಾರರ ಹೆಗ್ಗುರುತನ್ನು ದಾಟಿದೆ.  ಯುವಜನರು ಮತ್ತು ಜಾಗತಿಕ ಪ್ರೇಕ್ಷಕರಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾದ ಭಾರತದ ವರ್ತಮಾನಗಳನ್ನು ವಿವರಿಸುವ ವಿಶಿಷ್ಟ ಕಾರ್ಯಕ್ರಮಗಳು/ವಿಷಯವಸ್ತುವಿನಿಂದ ಇದು ಸಾಧ್ಯವಾಗಿದೆ.

Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,