Header Ads Widget

Responsive Advertisement

ಕಠಿಣ ಮತಾಂತರ ನಿಷೇಧ ಕಾನೂನು ಶೀಘ್ರವೇ ಜಾರಿಗೆ ತರಬೇಕು. ಹಿಂ.ಜಾ.ವೇ. ಮಾತೃ ಸುರಕ್ಷಾ ಪ್ರಮುಖ್ ಗಣರಾಜ್ ಭಟ್ ಆಗ್ರಹ

ಕಠಿಣ ಮತಾಂತರ ನಿಷೇಧ  ಕಾನೂನು  ಶೀಘ್ರವೇ ಜಾರಿಗೆ ತರಬೇಕು. ಹಿಂ.ಜಾ.ವೇ. ಮಾತೃ ಸುರಕ್ಷಾ ಪ್ರಮುಖ್ ಗಣರಾಜ್ ಭಟ್  ಆಗ್ರಹ                              


ದೇಶದ ಹಲವು ಭಾಗಗಳಲ್ಲಿ ಸನಾತನ ಹಿಂದು ಧರ್ಮದ ಮೇಲೆ ಮತಾಂತರದ ಆಕ್ರಮಣಗಳು ನಡೆಯುತ್ತಿದ್ದು ಜಾಗೃತ ಹಿಂದು ಸಮಾಜ ಅದಕ್ಕೆ ತಕ್ಕ ಪ್ರತ್ಯುತ್ತರ ನೀಡುವ ಅನಿವಾರ್ಯತೆಯಿದೆ ಎಂದು ಹಿಂದು ಜಾಗರಣ ವೇದಿಕೆಯ ಮಂಗಳೂರು ವಿಭಾಗ ಮಾತೃ ಸುರಕ್ಷಾ ಪ್ರಮುಖರಾದ ಗಣರಾಜ್ ಭಟ್ ಅಭಿಪ್ರಾಯ ವ್ಯಕ್ತಪಡಿಸಿದರು.

ಕೊಡಗು ಜಿಲ್ಲೆಯ ಶನಿವಾರಸಂತೆಯ ಮನೆಯೊಂದರಲ್ಲಿ ಆರ್ಥಿಕವಾಗಿ ಸಬಲರಲ್ಲದ ಅಮಾಯಕ ಹಿಂದುಗಳನ್ನು ಸೇರಿಸಿಕೊಂಡು ಗೌಪ್ಯವಾಗಿ ಮತಾಂತರ ನಡೆಸುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿ ಈ ದಿನ ಕೊಡಗು ಜಿಲ್ಲೆ ಸೋಮವಾರಪೇಟೆ ತಾಲ್ಲೂಕಿನ ಶನಿವಾರಸಂತೆಯ ಕಿತ್ತೂರು ರಾಣಿ ಚೆನ್ನಮ್ಮ  ವೃತ್ತದಲ್ಲಿ ಹಿಂದು ಜಾಗರಣ ವೇದಿಕೆಯ ನೇತತ್ವದಲ್ಲಿ  ನಡೆದ ಹಿಂದು ಜನಜಾಗೃತಿ ಸಭೆಯನ್ನುದ್ದೇಶಿಸಿ ಮಾತನಾಡಿದ ಗಣರಾಜ್ ಭಟ್ ದೇಶದಲ್ಲಿ ಯಾವುದೇ ಮತದವರು ತಮ್ಮ ತಮ್ಮ ಮತವನ್ನು  ಪಾಲನೆ ಮಾಡುವುದಕ್ಕೆ ನಮ್ಮದೇನೂ ಅಭ್ಯಂತರವಿಲ್ಲ.ಆದರೆ ಹಿಂದುಗಳನ್ನು  ಮತಾಂತರಕ್ಕೆ  ಪ್ರೇರೆಪಿಸಿದರೆ ತಕ್ಕ ಪ್ರತಿಕ್ರಿಯೆ ನೀಡಲಾಗುವುದೆಂದರು. ಹಿಂದುಗಳ ಸಹನೆಯನ್ನು ದೌರ್ಬಲ್ಯವೆಂದು ಅನ್ಯ ಮತದವರು ಎಂದಿಗೂ ಪರಿಗಣಿಸಬಾರದು ಶಸ್ತ್ರ ಮತ್ತು ಶಾಸ್ತ್ರ ಇವೆರಡನ್ನೂ ಚೆನ್ನಾಗಿ ಬಲ್ಲ ಹಿಂದು ಸಮಾಜದ ಮೇಲೆ ಮತಾಂತರದ ಧಾಳಿ ನಡೆದರೆ ಜಾಗೃತ ಹಿಂದು ಸಮಾಜ ಸಹಿಸುವುದಿಲ್ಲ ಎಂದು ಈ ಸಂದರ್ಭ ಎಚ್ಚರಿಕೆ ನೀಡಿದರು.

ಹಿಂ.ಜಾ.ವೇ.  ನಡೆಸಿದ ಧಾಳಿಯ ವೇಳೆ ಸಿಕ್ಕಿಬಿದ್ದ ಮತಾಂತರಕ್ಕೆ ಪ್ರೇರೆಪಿಸುತ್ತಿದ್ದ ಸ್ಥಳೀಯ  ಗ್ರಾಮ ಪಂಚಾಯಿತಿಯ ವಾಟರ್ ಮೆನ್ ನನ್ನು ಕೆಲಸದಿಂದ ವಜಾ ಪಡಿಸಬೇಕೆಂದು ಆಗ್ರಹಿಸಲಾಯಿತು. ಮತಾಂತರದ  ವಿರುದ್ಧ ಕಠಿಣ ಕಾನೂನು ಜಾರಿಗೊಳಿಸುವಂತೆ ಆಗ್ರಹಿಸಿ ಸ್ಥಳಿಯಾಡಳಿತದ ಮೂಲಕ ರಾಜ್ಯಪಾಲರಿಗೆ  ಮನವಿ ಪತ್ರ ಕಳುಹಿಸಿ ಕೊಡಲಾಯಿತು. 

ಹಿಂದು ಜನಜಾಗೃತಿ   ಕಾರ್ಯಕ್ರಮದಲ್ಲಿ ಹಿಂ.ಜಾ.ವೇ. ಯ ಜಿಲ್ಲಾ ಉಪಾಧ್ಯಕ್ಷರಾದ ಸುಭಾಷ್ ತಿಮ್ಮಯ್ಯ , ಸಹ ಸಂಪರ್ಕ್ ಪ್ರಮುಖ್ ಉಮೇಶ್ , ಸೋಮವಾರಪೇಟೆ ತಾಲ್ಲೂಕು ಅಧ್ಯಕ್ಷರಾದ ಮಾದಪುರ ಸುನಿಲ್ ,ಪ್ರಧಾನ ಕಾರ್ಯದರ್ಶಿ ರಂಜನ್ ಗೌಡ ಸೇರಿದಂತೆ ವಿವಿಧ ಹಿಂದುಪರ ಸಂಘಟನೆಗಳ ಪ್ರಮುಖರು ಹಾಗು ನೂರಾರು ಕಾರ್ಯಕರ್ತರು  ಉಪಸ್ಥಿತರಿದ್ದರು.

Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,