Header Ads Widget

ಸರ್ಚ್ ಕೂರ್ಗ್ ಮೀಡಿಯ

ಕೊಡಗಿನ ಮೊದಲ ಬೇಡು ಹಬ್ಬಕ್ಕೆ ಚಾಲನೆ

ಕೊಡಗಿನ ಮೊದಲ ಬೇಡು ಹಬ್ಬಕ್ಕೆ ಚಾಲನೆ


ಕುಂದಾತ್  ಬೊಟ್ಟ್'ಲ್ ನೇಂದಾ ಕುದುರೆ... ಪಾರಣೆ ಮಾನಿಲ್ ಅಳ್ಂಜ ಕುದುರೆ, ಎಂಬ ಬೋಡ್ ನಮ್ಮೆ (ಬೇಡು ಹಬ್ಬ) ಹಾಡಿನ ತುಣುಕುವಿನಲ್ಲಿ ಬರುವ ಸನ್ನಿವೇಶದಂತೆ 2021 ಹಾಗೂ 2022ನೇ ಸಾಲಿನ ಮೊದಲ ಬೇಡು ಹಬ್ಬಕ್ಕೆ ಸೋಮವಾರ ಪೊನ್ನಂಪೇಟೆ ತಾಲೂಕಿನ ಬೊಟ್ಟಿಯತ್ ನಾಡ್'ನಲ್ಲಿರುವ ಕುಂದಾಬೆಟ್ಟದ ಬೊಟ್'ಲಪ್ಪ ದೇವಸ್ಥಾನದಲ್ಲಿ ಚಾಲನೆ ದೊರೆಯಿತು.

ವಾಯುಭಾರ ಕುಸಿತದಿಂದ ಎಡೆಬಿಡದೆ ಸುರಿಯುತ್ತಿದ್ದ ಮಳೆಯ ನಡುವೆ ಬೆಟ್ಟದ ತಪ್ಪಲಿನ ಅಂಬಲದಲ್ಲಿ ವಿವಿಧ ಪೂಜಾ ವಿಧಿವಿಧಾನಗಳನ್ನು ನಡೆಸಿ, ಸಂಪ್ರದಾಯಿಕ ವಾಲಗದೊಂದಿಗೆ ಬೆಟ್ಟವೇರಿದ ಭಕ್ತರು ಹಾಗೂ ಎರಡು ಕೃತಕ ಕುದುರೆಗಳನ್ನು ಹೊತ್ತ ವ್ರತದಾರಿಗಳು ಮಳೆಯ ನಡುವೆ ಜಾರುತ್ತಾ ಪ್ರಯಾಸದ ನಡುವೆ ಹಾಗೂ ಮಳೆಯನ್ನು ಲೆಕ್ಕಿಸದೆ ಬೆಟ್ಟವನ್ನು ಏರಿ ಹರಕೆ ತೀರಿಸಿ ಕೊಡಗಿನ ಸಂಪ್ರದಾಯಿಕ ಬೇಡುಹಬ್ಬಕ್ಕೆ ಚಾಲನೆ ನೀಡಿದ್ದರು. 

ಪ್ರತಿವರ್ಷ ಕಾವೇರಿ ತುಲಾಸಂಕ್ರಮಣದ ತಿರ್ಥೋದ್ಬವದಂದು ಹಾಗೂ ಮರುದಿನ ಇಲ್ಲಿ ಬೇಡು ಹಬ್ಬ ನಡೆಯುತ್ತದೆ‌. ತಲಕಾವೇರಿಯಿಂದ ತೀರ್ಥವನ್ನು ತಂದು ಪೂಜಿಸಿ ಈ ಬೇಡು ಹಬ್ಬವನ್ನು ಆಚರಿಸಲಾಗುತ್ತದೆ. ಪ್ರಸ್ತುತ ವರ್ಷ ಮಳೆ ಅಧಿಕವಾಗಿದ್ದ ಕಾರಣ ಬೆಟ್ಟವೇರಲು ಭಕ್ತರು ಪ್ರಯಾಸ ಪಡಬೇಕಾಯಿತು. ಜಾರುತ್ತಾ ಸಾಗಿ ಜಾರುತ್ತಾ ಕೆಳಗಿಳಿದರಲ್ಲದೆ, ರಕ್ತ ಹೀರುತ್ತಿದ್ದ ಜಿಗಣೆಗಳ ಕಾಟ ಭಕ್ತರಿಗೆ ಪ್ರಯಾಸವನ್ನುಂಟುಮಾಡಿತು. ಬೆಟ್ಟವೇರಿ ಒಂದಷ್ಟು ಸಮಯದ ನಂತರ ಬಿದ್ದ ಬಾರಿ ಮಳೆಗೆ ಸೇರಿದ್ದ ಜನರು ಮರಗಿಡಗಳ ಆಶ್ರಯ ಪಡೆದುಕೊಂಡರು. 


ಬೆಟ್ಟದ ಮೇಲಿನ ದೇವಸ್ಥಾನಕ್ಕೆ ಮಹಾಭಾರತದ ಕಾಲದ ಇತಿಹಾಸವಿದ್ದು, ಈ ಹಿಂದೆ ಅಜ್ಞಾತ ವಾಸದಲ್ಲಿದ್ದ ಪಾಂಡವರು ಬೆಟ್ಟದ ಮೇಲಿನ ಕಲ್ಲಿನ ದೇವಾಲಯವನ್ನು ನಿರ್ಮಿಸಿದರು ಎನ್ನಲಾಗಿದ್ದು, ಇಲ್ಲಿ ವರ್ಷದ ಮೊದಲ ಬೇಡು ಹಬ್ಬ ನಡೆಯಲಿದ್ದು ಬೇರಳಿನಾಡುವಿನ ಪಾರಣ ಬೇಡು ಹಬ್ಬ ಕೊನೆಯ ಬೇಡು ಹಬ್ಬವಾಗಿದೆ. ಹಬ್ಬಗಳಿಂದ ಹಿಡಿದು, ಆಚಾರ ವಿಚಾರ, ಪದ್ದತಿ ಸಂಸ್ಕೃತಿ ಸೇರಿದಂತೆ ಎಲ್ಲಾ ರೀತಿಯಿಂದಲೂ ವಿಭಿನ್ನತೆಯನ್ನು ಹೊಂದಿರುವ ಕೊಡಗು ಜಿಲ್ಲೆಯ ಇಂತಹ ಆಚರಣೆಗಳು ಮುಂದಿನ ತಲೆಮಾರಿಗೂ ಇರಲಿ ಎಂದು ಆಶಿಸೋಣ.

✍️....ಚಮ್ಮಟೀರ ಪ್ರವೀಣ್ ಉತ್ತಪ್ಪ

             ( ಪತ್ರಕರ್ತರು )

ಸಂಪಾದಕರು: ಕೊಡಗು ವಾರ್ತೆ  

ಮೊ: 9880967573

Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,