Header Ads Widget

ಸರ್ಚ್ ಕೂರ್ಗ್ ಮೀಡಿಯ

ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದುಗಳ ಮೇಲಿನ ದೌರ್ಜನ್ಯ ಖಂಡಿಸಿ ಮಡಿಕೇರಿಯಲ್ಲಿ ಪ್ರತಿಭಟನೆ

ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದುಗಳ ಮೇಲಿನ ದೌರ್ಜನ್ಯ ಖಂಡಿಸಿ  ಮಡಿಕೇರಿಯಲ್ಲಿ ಪ್ರತಿಭಟನೆ        


ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರಾಗಿರುವ ಹಿಂದುಗಳನ್ನು ಗುರಿಯಾಗಿಸಿಗೊಂಡು  ಮತಾಂಧ ಜಿಹಾದಿಗಳು ನಡೆಸುತ್ತಿರುವ ಆಕ್ರಮಣಗಳನ್ನು ಖಂಡಿಸಿ ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಹಿಂದು ಜಾಗರಣ ವೇದಿಕೆ ಹಾಗೂ ವಿಶ್ವಹಿಂದು ಪರಿಷದ್ ಬಜರಂಗದಳಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. 

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಹಿಂದು ಜಾಗರಣ ವೇದಿಕೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕುಕ್ಕೇರ ಅಜಿತ್, ಬಾಂಗ್ಲಾದೇಶದಲ್ಲಿನ ಹಿಂದುಗಳ ರಕ್ಷಣೆಗೆ ಕೇಂದ್ರ ಸರಕಾರ ಅಗತ್ಯ ಕ್ರಮಕೈಗೊಳ್ಳುವುದರ ಜೊತೆಗೆ ಅಲ್ಲಿನ ಸರಕಾರಕ್ಕೆ ಎಚ್ಚರಿಕೆ ನೀಡಬೇಕಾದ ಅನಿವಾರ್ಯತೆಯಿದೆಯೆಂದರು. 

ಬಾಂಗ್ಲಾದೇಶದಲ್ಲಿನ  ಬಹುಸಂಖ್ಯಾತರು ಅಲ್ಲಿನ ಹಿಂದುಗಳನ್ನು  ಕಾಣುವ  ದೃಷ್ಟಿ ಕೋನ ಬದಲಾಗಬೇಕಿದ್ದು, ಪ್ರಸ್ತುತ ಮತಾಂಧತೆಯೆನ್ನುವುದು ಇಡೀ ವಿಶ್ವಕ್ಕೇ ಸವಾಲಾಗಿದೆಯೆಂದರು. ಬಾಂಗ್ಲಾದೇಶದಲ್ಲಿನ ಹಿಂದುಗಳ ಮೇಲೆ ನಡೆಯುತ್ತಿರುವ ಅತ್ಯಾಚಾರ, ಹಲ್ಲೆ, ದೌರ್ಜನ್ಯಗಳನ್ನು ಹಿಂದು ಜಾಗರಣ ವೇದಿಕೆ ಉಗ್ರವಾಗಿ ಖಂಡಿಸುತ್ತದೆಯೆಂದರು.  ಭಾರತದಿಂದಲೇ ಹಲವು ರೀತಿಯ ಸಹಾಯಗಳನ್ನು ಪಡೆದುಕೊಂಡು ಬದುಕಿರುವ ಅಲ್ಲಿನ ಸರಕಾರ  ಬಾಂಗ್ಲಾದ ಮತಾಂಧರ ದುಷ್ಕೃತ್ಯಗಳನ್ನು ತಡೆಯುವಲ್ಲಿ ವಿಫಲವಾಗಿದ್ದು, ಅಲ್ಲಿನ ಜಿಹಾದಿ ಮತಾಂಧರ ನೀಚಕೃತ್ಯಗಳು ನಾಗರೀಕ ಸಮಾಜ ತಲೆತಗ್ಗಿಸುವಂತಿದೆಯೆಂದರು.               


ಪ್ರತಿಭಟನೆಯಲ್ಲಿ ಹಿಂದು ಜಾಗರಣ ವೇದಿಕೆಯ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮಹೇಶ್ ,ಪ್ರಚಾರ ಪ್ರಮುಖ್ ಕುಮಾರ್ , ಮಾತೃ ಸುರಕ್ಷಾ ಪ್ರಮುಖ್ ಶಾಂತೆಯಂಡ ತಿಮ್ಮಯ್ಯ ,ಮಡಿಕೇರಿ ತಾಲ್ಲೂಕು ಪ್ರ.ಕಾರ್ಯದರ್ಶಿ ಚೇತನ್ , ವಿ.ಹೆಚ್.ಪಿ. ಯ ಸುರೇಶ್ ಮುತ್ತಪ್ಪ, ಪುದಿಯೊಕ್ಕಡ ರಮೇಶ್, ಬಜರಂಗದಳದ ವಿನಯ್ ,ಬಿ.ಜೆ.ಪಿ. ಪ್ರಮುಖರಾದ ರವಿ ಕುಶಾಲಪ್ಪ ,ರಮೇಶ್ ಹೊಳ್ಳ ,ಮಹೇಶ್ ಜೈನಿ,...ಸೇರಿದಂತೆ ಹಲವು ಪ್ರಮುಖರು ಹಾಗೂ ಹಿಂದುಪರ ಸಂಘಟನೆಗಳ ನೂರಾರು ಕಾರ್ಯಕರ್ತರು  ಪಾಲ್ಗೊಂಡಿದ್ದರು.

Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,