Header Ads Widget

ಸರ್ಚ್ ಕೂರ್ಗ್ ಮೀಡಿಯ

ವಿದೇಶಿ ಮಾದರಿ ಸೆಮಿ ಆಟೋಮ್ಯಾಟಿಕ್ ಗನ್: ದೇಶದಲ್ಲೇ ಮೊಟ್ಟ ಮೊದಲ ಬಾರಿಗೆ ಕೊಡಗಿನ ಅಮ್ಮತಿಯಲ್ಲಿ ಲಭ್ಯ

ವಿದೇಶಿ  ಮಾದರಿ ಸೆಮಿ ಆಟೋಮ್ಯಾಟಿಕ್ ಗನ್: ದೇಶದಲ್ಲೇ ಮೊಟ್ಟ ಮೊದಲ ಬಾರಿಗೆ  ಕೊಡಗಿನ ಅಮ್ಮತಿಯಲ್ಲಿ ಲಭ್ಯ  


ಕೇಂದ್ರ ಸರಕಾರದ ಅಡಿಯಲ್ಲಿ ನಮ್ಮ ದೇಶದ ಪ್ರದಾನ ಮಂತ್ರಿ ನರೇಂದ್ರ ಮೋದಿ ಅವರ  ಕನಸಾದ ಮೇಕ್ ಇನ್ ಇಂಡಿಯಾ ಪ್ರಾಜೆಕ್ಟ್ ಭಾಗವಾಗಿ  ನಿರ್ಮಾಣವಾದ ಭಾರ್ಗವ ಆರ್ಮ್ಸ್ ಕಂಪೆನಿಯ ಸ್ವಯಂ ಚಾಲಿತ ಸ್ಟಾಲಿನ್  ಕೋವಿ ದೇಶದಲ್ಲೇ ಪ್ರಥಮ ಬಾರಿಗೆ ಅಮ್ಮತ್ತಿಯ ಕಲ್ಲುಗುಡಿ ಆರ್ಮೋರಿ ಯಲ್ಲಿ ಕೋವಿ ಪ್ರಿಯರಿಗೆ ಲಭ್ಯವಿದೆ. 

ಎಸ್. ಎಕ್ಷ. 100 ಎಂಬ ಸಿಂಗಲ್ ಬ್ಯಾರೆಲ್ ಕೋವಿಯಲ್ಲಿ ಒಮ್ಮೆಗೆ ಐದು ಗುಂಡುಗಳನ್ನು ತುಂಬಿ ಒಂದು ಬಾರಿ ಅದರ ಲಾಕ್ ಅನ್ನು ಎಳೆದರೆ ಸಾಕು.. ಒಂದರ ಹಿಂದೆ ಒಂದರಂತೆ ಐದು ಗುಂಡುಗಳನ್ನು ಅದು ಸ್ವಯಂಚಾಲಿತವಾಗಿ ಕೇವಲ ಸೆಕೆಂಡ್ ಗಳಲ್ಲಿ ಅದರಲ್ಲಿ ಹೊಡೆಯಬಹುದು. 

ಇಲ್ಲಿಯವರೆಗೆ ಭಾರತ  ದೇಶದಲ್ಲಿ ಇಂತಹ ಕೋವಿಗಳಿಗೆ ನಿಷೇದ ಇದ್ದು, ಇದೆ ಮೊದಲ ಬಾರಿಗೆ ಟರ್ಕಿಶ್ ಮಾರ್ಕ್ ಮ್ಯಾನ್ ಶಿಪ್  ಮಾದರಿಯ ಕೋವಿ ಭಾರತದ ನಾಗರಿಕರಿಗೆ ಕೇವಲ ಒಂದು ಲಕ್ಷದ ಅರುವತ್ತೇಳು ಸಾವಿರ ರೂಪಾಯಿಗಳಿಗೆ ಮೊಟ್ಟ ಮೊದಲ ಬಾರಿಗೆ ತಮ್ಮ ಅಂಗಡಿಯಲ್ಲಿ  ಲಭಿಸುತ್ತಿದೆ ಎಂದು ಅಂಗಡಿ ಮಾಲೀಕ ನೆಲ್ಲಮಕ್ಕಡ ಸೊಮ್ಮಣ್ಣ ಹರ್ಷ ವ್ಯಕ್ತ ಪಡಿಸಿದ್ದಾರೆ.

Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,