ಕೊಡಗು ಸಂಪಾಜೆ ಗ್ರಾಮದ ಪಯಸ್ವಿನಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆ
ಕೊಡಗು ಸಂಪಾಜೆ ಗ್ರಾಮದ ಪಯಸ್ವಿನಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿಯಮಿತ 2020-21 ನೇ ಸಾಲಿನ ವಾರ್ಷಿಕ ಮಹಾಸಭೆಯು ಸಂಪಾಜೆ ಶ್ರೀ ಪಂಚಲಿಂಗೇಶ್ವರ ಸಭಾಭವನದಲ್ಲಿ ಅ. 23 ರಂದು ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಎನ್.ಸಿ ಅನಂತ್ ರವರು ವಹಿಸಿದ್ದರು. ಸಂಘದ ನಿರ್ದೇಶಕರು, ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಉಪಸ್ಥಿತರಿದ್ದರು. ಸಂಘದ ಸಿಬ್ಬಂದಿ ರೇಣುಕಾಕ್ಷ ರವರ ಪ್ರಾಥನೆಯೊಂದಿಗೆ, ಮಹಾಸಭೆಯ ನೋಟಿಸ್ ಅನ್ನು ಓದಿ ದಾಖಲಿಸಿದರು. 2020-21 ರ ಸಾಲಿನ ಆಡಳಿತ ಮಂಡಳಿಯ ವರದಿಯನ್ನು ಪರಿಗಣಿಸಿ ವರದಿಯ ವಿವರದಲ್ಲಿ ಪಾಲು ಬಂಡವಾಳ ಸಂಸ್ಥೆಯಲ್ಲಿ ಸದ್ರಿ 2585 ಜನ ಸದಸ್ಯರಿದ್ದು ಇವರಿಂದ ಭರ್ತಿಯಾದ ಬಂಡವಾಳ ರೂ.205.40 ಲಕ್ಷವಿದ್ದು, ಸರಕಾರದ ಪಾಲು ಬಂಡವಾಳ ರೂ. 1.25 ಲಕ್ಷದಷ್ಟಿರುತ್ತದೆ, ಠೇವಣಿ ಮೊತ್ತವು ರೂ1930.28 ಲಕ್ಷದಷ್ಟಿರುತ್ತದೆ, ಸಂಸ್ಥೆಯಲ್ಲಿ ಹೊರಗಿನ ಸಾಲಗಳು ಸಂಘವು ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿಂದ 1178 ಈ ಜನ ಸದಸ್ಯರಿ ಗೆ ರೂ 1784.48 ಲಕ್ಷಗಳ ಕೆ ಸಿ ಸಿ ಮಿತಿ ಮಂಜೂರಾತಿ ಮಾಡಿಸಿದ್ದು ರೂ 1150.66 ಲಕ್ಷಗಳ ಸಾಲ ಹೊಂದಿಕೊಳ್ಳುತ್ತದೆ ಹಾಗೂ ಜಿಲ್ಲಾ ಬ್ಯಾಂಕ್ ಗೆ ಯಾವುದೇ ವಾಯಿದೆ ಮೀರಿದ ಸಾಲ ಪಾವತಿಸಲು ಬಾಕಿ ಇರುವುದಿಲ್ಲ, ಸದಸ್ಯರ ಸಾಲಗಳ ಮಾಹಿತಿಯಲ್ಲಿ ಸದಸ್ಯರ ಅವಶ್ಯಕತೆಗಳಿಗನುಸಾರವಾಗಿ 1098 ಸದಸ್ಯರಿಗೆ ರೂ 1321.76 ಲಕ್ಷಗಳ ಕಿಸಾನ್ ಕ್ರೆಡಿಟ್ ಸಾಲವನ್ನು ವಿತರಿಸಲಾಗಿದೆ. ಎಲ್ಲಾ ಸಾಲಗಳು ಸೇರಿದಂತೆ ಒಟ್ಟು ರೂ 2433.51 ಲಕ್ಷಗಳ ಸಾಲ ವಿತರಿಸಲಾಗಿದೆ ಸದಸ್ಯರ ಒಟ್ಟು ಸಾಲದ ಮರು ಪಾವತಿ ಶೇಕಡಾ 97.36 ರಷ್ಟು ಆಗಿರುತ್ತದೆ ಇನ್ನು ರೂ 64.12 ಲಕ್ಷಗಳ ಸಾಲ ವಾಯಿದೆ ಮೀರಿದ ಸಾಲ ಬಾಕಿ ಇರುತ್ತದೆ.2019-20 ಸಾಲಿನ ಮಹಾಸಭೆಯ ವರದಿಯನ್ನು ರೆಕಾರ್ಡ್ ಮಾಡಲಾಯಿತು.
ಹಾಗೂ 2020-21 ಸಾಲಿನ ಲೆಕ್ಕ ಪರಿಶೋಧನಾ ವರದಿ ಅಂಗೀಕರಿಸಿದ ನಂತರ ಬಜೆಟ್ ಗಿಂತ ಹೆಚ್ಚಿಗೆ ಅದ ಖರ್ಚಿನ ಮಂಜೂರಾತಿ, ವಾರ್ಷಿಕ ಆಯ ವ್ಯಾಯಾದ ಅನುಮೋದನೆ, ನಿವ್ವಳ ಲಾಭಗಳ ವಿಂಗಡಣೆ, 2020-21 ರ ಸಾಲಿನಲ್ಲಿ ಲೆಕ್ಕ ಪರಿಶೋಧನೆ ಆಗಿದ್ದು ನಿವ್ವಳ ಲಾಭ ರೂ 3026199.77 ಆಗಿರುತ್ತದೆ. ಮುಂದಿನ ವರ್ಷಕ್ಕಾಗಿ ಸಮಿತಿಯಿಂದ ಸಿದ್ದ ಪಡಿಸಲಾದ ಸಂಘದ ಕಾರ್ಯ ಚಟುವಟಿಕೆಗಳ ಕಾರ್ಯಕ್ರಮದ ಅನುಮೋದನೆ ನಡೆಯಿತು. ಸಂಘಕ್ಕೆ ಹೊರಗಿನಿಂದ ತರತಕ್ಕ ಸಾಲದ ಪರಿಮಿತಿಯನ್ನು ನಿರ್ಧರಿಸಿ, 2021-22 ರ ಸಾಲಿಗೆ ಲೆಕ್ಕ ಪರಿಶೋಧಕರ ನೇಮಕ ಮಾಡಲಾಯಿತು, ವಸೂಲಾತಿಯಾಗದ ಬಾಕಿಗಳ ಬಗ್ಗೆ ಪರಿಶೀಲಿಸಿ ತೀರ್ಮಾನ ತೆಗೆದು ಕೊಳ್ಳಲಾಯಿತು, ಸಂಘದ ಅಧ್ಯಕ್ಷರು ಕಾನೂನು ಪ್ರಕಾರ ತರಬಹುದಾದ ಇತರೆ ವಿಚಾರ ಚರ್ಚಿಸಿ ನಿರ್ಣಯಿಸಿದರು.
ಸಮಾರಂಭದಲ್ಲಿ ಅಧ್ಯಕ್ಷರ ಭಾಷಣದಲ್ಲಿ 2020-21 ನೇ ಸಾಲಿನಲ್ಲಿ ಸಂಘ ಉತ್ತಮವಾದ ಸಾಧನೆಯನ್ನು ಮಾಡಿದ್ದು ಸದಸ್ಯರು ಹಾಗೂ ಸಂಘದ ಅಭಿವೃದ್ಧಿಗಾಗಿ ಹಲವು ಯೋಜನೆಗಳನ್ನು ಹಮ್ಮಿಕೊಂಡಿದ್ದು ಹಾಗೂ ಸರಕಾರದ ಯೋಜನೆಗಳನ್ನು ಅನುಷ್ಠಾನಕ್ಕೆ ತರಲಾಗಿದೆ, ಸಂಘವು ಪ್ರಶಕ್ತ ಸಾಲಿನಲ್ಲಿ 180.03 ಕೋಟಿಗಳಿಗೂ ಮೀರಿ ವ್ಯವಹಾರ ಮಾಡಿರುತ್ತದೆ, ಕೋರೊನಾ ಆರಂಭದ ದಿನಗಳಲ್ಲಿ ಸಂಘದ ಸದಸ್ಯರು ಸಂಕಷ್ಟದಲ್ಲಿದ್ದಾಗ ಸಂಘವು ಸದಸ್ಯರ ಅವಶ್ಯಕತೆಗೆ ತಕ್ಕಂತೆ 6 ತಿಂಗಳಿಗೆ ಮಿರದಂತೆ ಒಬ್ಬ ಸದಸ್ಯನಿಗೆ ರೂ 20,000 ಸಾಲ ನೀಡುವ ಮಹತ್ವದ ತೀರ್ಮಾನ ಕೈಗೊಂಡಿರುತ್ತದೆ.
ಈ ವರ್ಷ ಕೂಡ ಸಂಘದ ಸದಸ್ಯರ ಮಕ್ಕಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಯಲ್ಲಿ 85% ಹಾಗೂ ಅದಕ್ಕಿಂತ ಹೆಚ್ಚಿಗೆ ಅಂಕ ಪಡೆದ ಸದಸ್ಯರ ಮಕ್ಕಳಿಗೆ ಸಂಘದ ವತಿಯಿಂದ ಪ್ರೋತ್ಸಾಹ ಧನ ನೀಡುವ ಯೋಜನೆಯನ್ನು ಕೈಗೊಂಡಿರುತ್ತೇವೆ. ಸಂಸ್ಥೆಯು ಆಡಳಿತ ನಿರ್ವಹಣೆ, ಸದಸ್ಯರ ಸ್ಪಂದನೆ, ಸಾಲದ ವ್ಯವಹಾರ, ಮರುಪಾವತಿ, ಆಧುನಿಕ ವ್ಯವಸ್ಥೆಗಳ ಅಳವಡಿಕೆ, ಲೆಕ್ಕ ಪತ್ರದಲ್ಲಿ ಪಾರದರ್ಶಕತೆ ಹಾಗೂ ಇತ್ಯಾದಿ ವಿಷಯಗಳಲ್ಲಿ ತಾಲೂಕಿನಲ್ಲಿ ಆತ್ಯುತ್ತಮ ಸಹಕಾರ ಸಂಘ ಪ್ರಶಸ್ತಿಯನ್ನು ಪಡೆಯಿತು ಹಾಗೂ ಪಯಶ್ವಿನಿ ಸಹಕಾರಿ ಸಂಘದ ಕಾರ್ಯಚಟುವಟಿಕೆಯನ್ನು ವಿವರಿಸಿದರು. ಸಮಾರಂಭದಲ್ಲಿ ಸಭೆಗೆ ಭಾಗಿಯಾದ ಎಲ್ಲ ಗಣ್ಯರು, ಸದಸ್ಯರು, ನಿರ್ದೇಶಕರನ್ನು ಸಂಘದ ಉಪಾಧ್ಯಕ್ಷರಾದ ರಾಜಾರಾಮ್ ಕಳಗಿ ಅವರು ಅಭಿನಂದಿಸಿದರು.
ಸಭೆಯಲ್ಲಿ ಚೆಂಬು, ಸಂಪಾಜೆ ಗ್ರಾಮ ಪಂಚಾಯತ್ ಸದಸ್ಯರು, 2 ಗ್ರಾಮಗಳ ಸಂಘದ ಸದಸ್ಯರು ಭಾಗವಹಿಸಿದ್ದರು ಸಭೆಯಲ್ಲಿ ರಾಸಾಯನಿಕ ಗೊಬ್ಬರ, ಕೃಷಿ ಉತ್ಪನ್ನ ಉಪಕರಣ, ಹಾಗೂ ಪುಸ್ತಕ ಮಳಿಗೆಗಳನ್ನು ಹೊಂದಿಕೊಂಡು ಕೃಷಿ ಮೇಳ ಮತ್ತು ಮಾರಾಟ ಮೇಳ ನಡೆಯಿತು.
ನಮ್ಮ ಪತ್ರಿಕೋದ್ಯಮವನ್ನು ಬೆಂಬಲಿಸಿ
"ಸರ್ಚ್ ಕೂರ್ಗ್ ಮೀಡಿಯಾ"ದ ಜೀವನಾಡಿಯಾಗಿರುವ ಪ್ರತಿಯೊಬ್ಬ ಓದುಗರಿಗೆ ಪ್ರೀತಿಯ ಧನ್ಯವಾದಗಳು. ನಿಮ್ಮಂತಹ ಓದುಗರಿಂದಲೇ ಗ್ರಾಮೀಣ ಮತ್ತು ಕೃಷಿ ಪತ್ರಿಕೋದ್ಯಮವನ್ನು ಮುಂದೆ ಸಾಗಿಸಲು ನಮಗೆ ಸ್ಫೂರ್ತಿ ಸಿಗುತ್ತದೆ. ಗುಣಮಟ್ಟದ ಗ್ರಾಮೀಣ ಮತ್ತು ಕೃಷಿ ಪತ್ರಿಕೋದ್ಯಮವನ್ನು ಬೆಳೆಸಲು ಮತ್ತು ಗ್ರಾಮೀಣ ಕೊಡಗಿನ ಪ್ರತಿಯೊಂದು ಮೂಲೆಯ ರೈತರು ಮತ್ತು ಜನರಲ್ಲಿಗೆ ತಲುಪಿಸಲು ನಿಮ್ಮಂತಹ ಓದುಗರ ಬೆಂಬಲ ನಮಗೆ ಸದಾ ಬೇಕು. ನಿಮ್ಮ ಪ್ರತಿಯೊಂದು ಕೊಡುಗೆಯೂ ದೊಡ್ಡದಾದರೂ ಸಣ್ಣದಾದರೂ ನಮ್ಮ ಭವಿಷ್ಯಕ್ಕಾಗಿ ಮೌಲ್ಯಯುತವಾಗಿರುತ್ತದೆ.
ನಿಮ್ಮ ಉದಾರ ಕೊಡುಗೆಯನ್ನು ಈ ಸಂಖ್ಯೆಗೆ Google Pay ಮಾಡಿ: 98440 95648https://play.google.com/store/apps/details?id=com.searchcoorg.user.searchcoorg&hl=en_IN&gl=US
Search Coorg Media
Coorg's Largest Online Media Network