Header Ads Widget

Responsive Advertisement

ಸಾಲ ಕೊಡಿಸುವ ಕರೆ ಬರಬಹುದು ಗ್ರಾಹಕರೇ ಎಚ್ಚರ !

ಸಾಲ ಕೊಡಿಸುವ ಕರೆ ಬರಬಹುದು ಗ್ರಾಹಕರೇ ಎಚ್ಚರ !


ರಾಜ್ಯಾದ್ಯಂತ ಅಕ್ಟೋಬರ್ ತಿಂಗಳಿನಲ್ಲಿ ಸಾಲ ಸಂಪರ್ಕ ಕಾರ್ಯಕ್ರಮ ಹಮ್ಮಿಕೊಂಡಿದ್ದು,ಕೊಡಗು ಜಿಲ್ಲೆಯಲ್ಲಿ ದಿನಾಂಕ 22-10-2021 ರಂದು ನಡೆದಿದೆ. ಆದರೆ ಕಾರ್ಯಕ್ರಮದ ನಂತರ ಹಲವಾರು ಗ್ರಾಹಕರಿಗೆ ಪೋನ್ ಮೂಲಕ ಸಂಪರ್ಕಿಸಿ ಸಾಲ ಕೊಡಿಸುವ  ವಿಚಾರ ಪ್ರಸ್ತಾಪ ಮಾಡುತ್ತ ಪಾನ್ ಕಾರ್ಡ್,ಆಧಾರ ಕಾರ್ಡ್, ವೋಟರ್ ಐ ಡಿ, ರೇಷನ್ ಕಾರ್ಡ್, ವಿದ್ಯುತ್ ಬಿಲ್, ಬ್ಯಾಂಕ್ ಪಾಸ್ ಬುಕ್, ಗ್ಯಾಸ್ ಬುಕ್ ಗಳ ಪ್ರತಿ ಹಾಗೂ ಎರಡು ಪಾಸ್ ಪೋರ್ಟ್ ಸೈಜ್ ಪೋಟೋ ಗಳನ್ನು ವ್ಯಾಟ್ಸಾಪ್ ಮೂಲಕ ಕಳಿಸಲು ಹೇಳುತ್ತಿದ್ದಾರೆ. ನವದೆಹಲಿ ಯಲ್ಲಿ ಸಾಲ ಮಂಜೂರಾತಿ ಮಾಡಿದ ನಂತರ ಗ್ರಾಹಕರಿಗೆ ಸಂಸ್ಕರಣಾ ಶುಲ್ಕವನ್ನು ತೆಗೆದುಕೊಳ್ಳುವ ಸಾಲದ ಮೇಲೆ 3,500/-ದಿಂದ 10,000/-ರೂಗಳ ವರೆಗೆ ಹಣ ಕಳಿಸಲು ತಿಳಿಸುತ್ತಾರೆ. ಇಂತಹ ಹಲವಾರು ಘಟನೆಗಳು  ಕಳೆದ ಎರಡು ದಿನಗಳಿಂದ ಕೊಡಗಿನಲ್ಲಿ ನಡೆಯುತ್ತಿದ್ದು, ಸಾರ್ವಜನಿಕರು ಈ ಬಗ್ಗೆ ಎಚ್ಚರ ವಹಿಸಬೇಕಿದೆ. ನಕಲಿ ಕರೆಗಳ ಮೂಲಕ ವಂಚಿಸುವ ಪ್ರಕರಣದ ಬಗ್ಗೆ ಎಚ್ಚರಿಕೆ ವಹಿಸಬೇಕು.ನಕಲಿ ಫೋನ್ ಕರೆಗಳ ಮೂಲಕ ಬ್ಯಾಂಕ್ ಅಧಿಕಾರಿಗಳೆಂದು ನಂಬಿಸಿ ವಂಚಿಸುವ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಲೇ ಇವೆ. ಬ್ಯಾಂಕ್ ಗ್ರಾಹಕರು ಎಷ್ಟೇ ಎಚ್ಚರಿಕೆ ವಹಿಸಿದರೂ ಮೋಸ ಹೋಗುವುದು ಮಾತ್ರ ನಿಂತಿಲ್ಲ. 

ಫೇಸ್ ಬುಕ್, ವಾಟ್ಸಾಪ್, ನಕಲಿ ಕರೆಗಳ ಮೂಲಕ ವಂಚಿಸುವ ಪ್ರಕರಣದ ಬಗ್ಗೆ ಎಚ್ಚರಿಕೆ ವಹಿಸದಿದ್ದಲ್ಲಿ ವಂಚನೆಗೊಳಗಾಗುವುದು ಖಚಿತ. ಕೇಂದ್ರ ಸರ್ಕಾರ ಘೋಷಿಸಿರುವ ಸಾಲ ಸಂಪರ್ಕ ಯೋಜನೆಯ ನಿರ್ಧಾರದ ದುರುಪಯೋಗ ಪಡೆದುಕೊಂಡು ಗ್ರಾಹಕರನ್ನು ವಂಚಿಸುವ ಪ್ರಯತ್ನಗಳು ನಡೆಯುತ್ತಿವೆ. ಈ ಬಗ್ಗೆ ಎಚ್ಚರಿಕೆ ಯಿಂದ ಇರುವಂತೆ ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ನ ಮುಖ್ಯಸ್ಥರಾದ ಆರ್. ಕೆ ಬಾಲಚಂದ್ರ ಗ್ರಾಹಕರಿಗೆ ಕೋರಿದ್ದಾರೆ.

ಸಾಲ ಸಂಪರ್ಕ ಯೋಜನೆಯ ಹೆಸರಿನಲ್ಲಿ ಬ್ಯಾಂಕ್ ಅಧಿಕಾರಿ ಎಂದು ಹೇಳಿಕೊಂಡು ಯಾರಾದರೂ ಕರೆ ಮಾಡಿ ತಮ ಮೊಬೈಲ್ ಸಂಖ್ಯೆಗೆ ಬಂದಿರುವ ಒಂದು ಬಾರಿಯ ರಹಸ್ಯ ಸಂಖ್ಯೆ (ಒ.ಟಿ.ಪಿ) ಹಂಚಿಕೊಳ್ಳುವಂತೆ ಕೇಳಿದರೆ ಅದಕ್ಕೆ ಪ್ರತಿಕ್ರಿಯೆ ನೀಡಬೇಡಿ. ಈ ಕುರಿತು ಬ್ಯಾಂಕ್‌ಗಳಿಂದ ಎಸ್‌ಎಂಎಸ್‌ ಹಾಗೂ ಇಮೇಲ್ ಕಳುಹಿಸುವ ಮೂಲಕ ಗ್ರಾಹಕರಿಗೆ ತಿಳುವಳಿಕೆ ಮೂಡಿಸಲು ಪ್ರಯತ್ನಿಸುತ್ತಿವೆ. ಯಾವುದೇ ಕಾರಣಕ್ಕೂ ಬ್ಯಾಂಕಿಂಗ್ ವಹಿವಾಟಿಗೆ ಸಂಬಂಧಿಸಿದ ಓ.ಟಿ.ಪಿ., ಡೆಬಿಟ್ ಕಾರ್ಡ್ ಹಿಂಭಾಗದಲ್ಲಿರುವ ಸಿ.ವಿ.ವಿ., ಪಿನ್, ಆನ್‌ಲೈನ್‌ ಬ್ಯಾಂಕಿಂಗ್‌ ಪಾಸ್‌ವರ್ಡ್ ಅಥವಾ ಪಿನ್‌ಅನ್ನು ಯಾರೊಂದಿಗೂ ಹಂಚಿಕೊಳ್ಳದಿರಿ ಎಂದು ಸ್ಪಷ್ಟ ಸೂಚನೆ ನೀಡಿದೆ. ಅನಿರೀಕ್ಷಿತವಾಗಿ ಒಂದು ಕಾಲ್ ಬರುತ್ತದೆ. ಅದರಲ್ಲಿ ಹೀಗೆ ಹೇಳುತ್ತಾರೆ, ಸರ್ಕಾರದ ಕಡೆಯಿಂದ ಸಾಲ ಸಂಪರ್ಕ ದ ಯೋಜನೆ ಯಲ್ಲಿ ಹಣ ನೀಡುತ್ತಿದ್ದೇವೆ, ಇಲ್ಲವೇ ಪ್ರಧಾನಮಂತ್ರಿಗಳ ಜನ್‌ಧನ್ ಖಾತೆಗೆ ಹಣ ಬರುತ್ತದೆ. ನಿಮಗೆ ಒಂದು ಓ.ಟಿ.ಪಿ. ಬರುತ್ತದೆ. ಆ ಓ.ಟಿ.ಪಿ. ನಮಗೆ ಹೇಳಿದ ತಕ್ಷಣ ನಿಮ್ಮ ಖಾತೆಗೆ ಹಣ ಜಮೆ ಆಗುತ್ತೆ  ಎಂದು ವಂಚಿಸುವ ಸಾಧ್ಯತೆ ಇದೆ. ಓ.ಟಿ.ಪಿ.ಯನ್ನು ಕಾಲ್ ಮಾಡಿದವರಿಗೆ ನೀಡಿದರೆ, ಆಗ ನಿಮ್ಮ ಖಾತೆಯಲ್ಲಿ ರುವ ಹಣವೆಲ್ಲಾ ಅವರ ಖಾತೆಗಳಿಗೆ ವರ್ಗಾಯಿಸಲ್ಪಡುತ್ತದೆ ಎಂದು ಜಿಲ್ಲಾ ಮಾರ್ಗದರ್ಶಿ ಬ್ಯಾಂಕಿನ ಮುಖ್ಯಸ್ಥ ಆರ್. ಕೆ. ಬಾಲಚಂದ್ರ ತಿಳಿಸಿದ್ದಾರೆ.

Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,