Header Ads Widget

Responsive Advertisement

ವಿಶ್ವದ ಅತ್ಯುನ್ನತ ವಿಜ್ಞಾನಿಗಳ ಪಟ್ಟಿಯಲ್ಲಿ ಡಾ.ಜೆ.ಜಿ.ಮಂಜುನಾಥ್

ವಿಶ್ವದ ಅತ್ಯುನ್ನತ ವಿಜ್ಞಾನಿಗಳ ಪಟ್ಟಿಯಲ್ಲಿ ಡಾ.ಜೆ.ಜಿ.ಮಂಜುನಾಥ್


ಮಡಿಕೇರಿ ಅ.25: ಯುಎಸ್‍ಎಯ ಸ್ಟ್ಯಾನ್‍ಫೆÇೀರ್ಡ್ ವಿ.ವಿ. ಮತ್ತು ಎಲ್ಸ್‍ವಿಯರ್ ಸಂಸ್ಥೆಯ ಸಹಯೋಗದೊಂದಿಗೆ ಪ್ರಕಟಿಸಿರುವ ವಿಶ್ವದ ಅತ್ಯುನ್ನತ ಶೇ.2 ವಿಜ್ಞಾನಿಗಳ ಪಟ್ಟಿಯಲ್ಲಿ ಡಾ.ಜೆ.ಜಿ.ಮಂಜುನಾಥ ಅವರು ಸ್ಥಾನ ಪಡೆದಿದ್ದಾರೆ. 

ಮಂಗಳೂರು ವಿ.ವಿಯ ಘಟಕ ಕಾಲೇಜು ಫೀಲ್ಡ್‍ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜು, ಮಡಿಕೇರಿಯಲ್ಲಿನ ರಸಾಯನ ಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿರುವ ಡಾ.ಜೆ.ಜಿ.ಮಂಜುನಾಥ್ ಅವರು 2021ರ ಸಾಲಿನ ಅತ್ಯುನ್ನತ ವಿಜ್ಞಾನಿಗಳ ಪಟ್ಟಿಯಲ್ಲಿ 24574 ನೇ ಸ್ಥಾನವನ್ನು ಮತ್ತು ವಿಶ್ವದ ವೃತ್ತಿ ಜೀವಮಾನ ಸಾಧಕರ ಪಟ್ಟಿಯಲ್ಲಿ 197749ನೇ ಸ್ಥಾನವನ್ನು ಪಡೆದಿರುತ್ತಾರೆ (ಸಂಯೋಜಿತ ಅಂಕಗಳ ಆಧಾರದ ಮೇಲೆ ಶ್ರೇಣಿ). 

ಇವರು ಅನಲೈಟಿಕಲ್ ಮತ್ತು ಎನರ್ಜಿ ವಿಷಯಗಳ ಕುರಿತು ಸಂಶೋಧನ ಲೇಖನಗಳನ್ನು ಪ್ರಕಟಿಸಿದ್ದಾರೆ. ಇವರ ಸಾಧನೆಯು ಮಂಗಳೂರು ವಿ.ವಿಗೆ ಮತ್ತು ಫೀಲ್ಡ್‍ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿಗೆ ಹೆಮ್ಮೆ ತಂದಿದೆ ಎಂದು ವಿ.ವಿಯ ಕುಲಪತಿಯವರು, ಕುಲಸಚಿವರು ಮತ್ತು ಪ್ರಾಂಶುಪಾಲರು ಅಭಿನಂದಿಸಿದ್ದಾರೆ.

Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,