Header Ads Widget

Responsive Advertisement

ಕರ್ನಾಟಕ ರಾಜ್ಯ ರೈತ ಸಂಘ ಕೊಡಗು ವತಿಯಿಂದ ಮಡಿಕೇರಿಯ ಜಿಲ್ಲಾ ಚೆಸ್ಕಾಂ ಕೆಂದ್ರ ಕಛೇರಿಯ ಮುಂದೆ ಬೃಹತ್ ಪ್ರತಿಭಟನೆ

ಕರ್ನಾಟಕ ರಾಜ್ಯ ರೈತ ಸಂಘ ಕೊಡಗು ವತಿಯಿಂದ ಕೊಡಗಿನ ರೈತರ 10HP ವರೆಗಿನ ಎಲ್ಲಾ ರೈತರ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್‌ ಪೂರೈಸಬೇಕೆಂದು ಮಡಿಕೇರಿಯ ಚೆಸ್ಕಾಂ ಕೆಂದ್ರ ಕಛೇರಿಯಲ್ಲಿ ರೈತರ ಬೃಹತ್ ಪ್ರತಿಭಟನೆ


ದಿನಾಂಕ 25-10-2021ರ ಸೋಮವಾರದಂದು ಕರ್ನಾಟಕ ರಾಜ್ಯ ರೈತ ಸಂಘ ಕೊಡಗು ಘಟಕದ ವತಿಯಿಂದ ಕೊಡಗು ಜಿಲ್ಲೆಯ 5 ತಾಲ್ಲೂಕಿನ ರೈತರು   ಚೆಸ್ಕಾಂ ಇಲಾಖೆಯಿಂದ ಅನುಭವಿಸುತ್ತಿರುವ ಕಿರುಕುಳ ಹಾಗೂ ರೈತರಿಗೆ ಆಗುತ್ತಿರುವ ಅನ್ಯಾಯ ಹಾಗೂ ಸರಕಾರದ ಮಲತಾಯಿ ಧೋರಣೆಯ ವಿರುದ್ಧ  ‌ಮಡಿಕೇರಿಯ ಜಿಲ್ಲಾ ಚೆಸ್ಕಾಂ ಇಲಾಖೆಯ ಕಛೇರಿಯ ಮುಂದೆ  ನೂರಾರು ರೈತರು ಸೇರಿ ಬ್ರಹತ್ ಪ್ರತಿಭಟನೆ ಮಾಡಿದರು.

ಕರ್ನಾಟಕ ರಾಜ್ಯ ರೈತ ಸಂಘದ ಕೊಡಗು ಜಿಲ್ಲಾ ಘಟಕವು ಹಾಗೂ ಹಲವಾರು ರೈತ ಪರ ಸಂಘಟನೆಗಳು ಕಳೆದ ಹಲವು ವರ್ಷಗಳಿಂದ ಹಲವಾರು ಬಾರಿ ಮನವಿ ಸಲ್ಲಿಸಿದರು ಚೆಸ್ಕಾಂ ಇಲಾಖೆಯ ಅಧಿಕಾರಿಗಳು ಹಾಗೂ ಸರಕಾರವು ಕೊಡಗಿನ ರೈತರಿಗೆ ಸರಿಯಾಗಿ ಸ್ಪಂದಿಸದೆ‌ ಇರೊ ಕಾರಣ ಕೊಡಗು ಜಿಲ್ಲೆಯ ರೈತರು ಮಡಿಕೇರಿ ನಗರದ ತಿಮ್ಮಯ್ಯ ವೃತ್ತ ದಲ್ಲಿ 1ಗಂಟೆಗೂ ಹೆಚ್ಚಿನ ಕಾಲ ಮಾನವಸರಪಳಿ ರಚಿಸಿ ಸರಕಾರದ ರೈತ ವಿರೋದಿ ನೀತಿಯ ವಿರುದ್ಧ ಅಕ್ರೋಷ ವ್ಯಕ್ತಪಡಿಸಿ ತಿಮ್ಮಯ್ಯ ವ್ರತ್ತದಿಂದ ಚೆಸ್ಕಾಂ ಇಲಾಖೆಯ ಕಛೇರಿಗೆ ನೂರಾರು ರೈತರು ಮೆರವಣಿಗೆಯ ಮೂಲಕ ಸಾಗಿ ಪ್ರತಿಭಟನೆ ನಡೆಸಿದರು.

ರೈತರ ಅಹವಾಲನ್ನು ಸ್ವೀಕರಿಸಲು ಕೆ ಪಿ ಟಿ ಸಿ ಎಲ್ ನ ಉನ್ನತ ಅಧಿಕಾರಿಗಳಾದ ಮಾದೇಶ್ ರವರು ಮಾತ್ರ ಮೈಸೂರಿನಿಂದ ಆಗಮಿಸಿದ್ದು, ಚೆಸ್ಕಾಂ ನ ಉನ್ನತ ಅಧಿಕಾರಿಗಳಾದ ಮಾದೇವ್ ಸ್ವಾಮಿ ಪ್ರಸನ್ನ ರವರು ರೈತರು ಸಭೆಗೆ ಆಗಮಿಸುವಂತೆ ಮನವಿ ಮಾಡಿದ್ದರು ಬರದಿದ್ದಕ್ಕೆ ರೈತರು ಅಕ್ರೋಷ ವ್ಯಕ್ತಪಡಿಸಿ ಚೆಸ್ಕಾಂ ಇಲಾಖೆಗೆ ದಿಕ್ಕಾರ ಕೂಗಿದರು. ಹಾಗೆ ಚೆಸ್ಕಾಂ ನ M D ಮಹದೇವ್ ಸ್ವಾಮಿ ಪ್ರಸನ್ನ ರವರು ಬಂದು ರೈತರ ಅಹವಾಲು ಸ್ವೀಕರಿಸುವವರೆಗೆ ಕಛೇರಿಯ ಆವರಣದಲ್ಲಿ ಪ್ರತಿಭಟಿಸಿಸುವುದಾಗಿ ರೈತರು ಎಚ್ಚರಿಕೆನೀಡಿದರು. 

ರೈತ ಸಂಘ ಜಿಲ್ಲಾ ಅಧ್ಯಕ್ಷರಾದ ಕಾಡ್ಯಮಾಡ ಮನು ಸೋಮಯ್ಯನವರು ಕರ್ನಾಟಕ ಸರ್ಕಾರದ ಇಂದನ ಮಂತ್ರಿಗಳಾದ ಸುನಿಲ್ ಕುಮಾರ್ ರವರನ್ನು ದೂರವಾಣಿ ಮೂಲಕ ಸಂಪರ್ಕ ಮಾಡಿ ಕೊಡಗಿನ ರೈತರ ತೊಂದರೆ ಹಾಗೂ ಅಧಿಕಾರಿಗಳ ಧೋರಣೆ ಬಗ್ಗೆ ಮಾಹಿತಿ ನೀಡಿ ಕೊಡಗಿನ  ರೈತರಿಗೆ ನ್ಯಾಯ ಒದಗಿಸುವಂತೆ ಮನವಿ ಮಾಡಿ ಕೂಡಲೇ ಚೆಸ್ಕಾಂ ನ M D ಯವರನ್ನು ಪ್ರತಿಭಟನೆ ಸ್ಥಳಕ್ಕೆ ಕಳುಹಿಸಿ ರೈತರ ಅಹವಾಲು ಸ್ವೀಕರಿಸುವಂತೆ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಇಂದನ ಸಚಿವರು ಮುಂದಿನ ದಿನಗಳಲ್ಲಿ ಕೊಡಗಿನ ರೈತ ಸಮಸ್ಯೆಗಳನ್ನು ಬಗೆಹರಿಸುವುದಾಗಿ ಮಾಹಿತಿ ನೀಡಿ ಚೆಸ್ಕಾಂ ಅಧಿಕಾರಿಯನ್ನು ಕೂಡಲೇ ಮೈಸೂರಿನಿಂದ ಪ್ರತಿಭಟನೆ ಸ್ಥಳಕ್ಕೆ ತೆರಳುವಂತೆ ಆದೇಶ ನೀಡಿದ ಮೇರೆಗೆ ಚೆಸ್ಕಾಂ ಅಧಿಕಾರಿಯಾದ ಮಹದೇವ ಸ್ವಾಮಿ ಪ್ರಸನ್ನರವರು ಸಂಜೆ 4.45ಕ್ಕೆ ಪ್ರತಿಭಟನೆ ಸ್ಥಳಕ್ಕೆ ಆಗಮಿಸಿದರು. ಇವರು ಬರುವವರೆಗೂ ಕಾಯುತ್ತಿದ್ದ ರೈತರು ಮಾಹಿತಿ ನೀಡಿಯೂ  ರೈತರ ಸಭಗೆ ಆಗಮಿಸದೆ ರೈತರನ್ನು ಸತಾಯಿಸಿದಕ್ಕೆ ಅಧಿಕಾರಿಗಳ ವಿರುದ್ಧ ಅಕ್ರೋಷ ವ್ಯಕ್ತಪಡಿಸಿ ದಿಕ್ಕಾರ ಕೂಗಿ ಅವರನ್ನು ಕಛೇರಿ ಒಳಗೆ ಪ್ರವೇಶಿಸದಂತೆ ತಡೆದು ದಿಕ್ಕಾರ ಹಾಕಿದರು.

ಸ್ಥಳಕ್ಕಾಗಮಿಸಿದ ಚೆಸ್ಕಾಂ M D ಯವರು ರೈತರ ಅಹವಾಲು ಸ್ವೀಕರಿಸಿ  ಬೇಡಿಕೆಗಳನ್ನು ಸರ್ಕಾರದ ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮಕೈಗೊಂಡು ಮುಂದಿನ KRCE ಸಭೆಗೆ ರೈತ ಸಂಘದ ನಾಯಕರುಗಳನ್ನು ಕರೆದು ಸಭೆಯಲ್ಲಿ ಕೊಡಗಿನ ರೈತರಿಗೆ ನ್ಯಾಯ ಒದಗಿಸುವಂತೆ ಭರವಸೆ ನೀಡಿದರು. ಇದಕ್ಕೆ ಮೊದಲು ಸ್ಥಳೀಯ ಸಮಸ್ಯೆಗಳನ್ನು ಸ್ಥಳೀಯ ಅಧಿಕಾರಿ ಸುರೇಶ್ ರವರ ತಂಡ 10 ದಿವಸ ಗಳೋಳಗ್ಗೆ ಸರಿಪಡಿಸುವುದಾಗಿ ಭರವಸೆ ನೀಡಿ, ಇನ್ನೂ ಮುಂದೆ ಯಾವುದೇ ರೈತರ ವಿದ್ಯುತ್ ಕಡಿತಗೊಳಿಸುವುದಿಲ್ಲ ಎಂದು  ಭರವಸೆ ನೀಡಿ ಸ್ಥಳೀಯ ಮಟ್ಟದ ಎಲ್ಲಾ ಸಮಸ್ಯೆಗಳನ್ನು ಸ್ಥಳೀಯ ಅಧಿಕಾರಿಗಳು ಕೂಡಲೇ ಸರಿಮಾಡುವಂತೆ EE ಸುರೇಶ್ ರವರು AEE ಗಳಿಗೆ ಆದೇಶ ನೀಡಿದರು.

ಪ್ರತಿಭಟನೆ ವೇಳೆ ರೈತರು ಮನವಿಯಲ್ಲಿನ ಪ್ರಮುಖ ಬೇಡಿಕೆಗಳು :-

1)ಕೊಡಗಿನ ರೈತರಿಗೆ  10 HP ಗಿಂತ ಕಡಿಮೆ ಇರುವ ಎಲ್ಲಾ ಪಂಪ್‌ ಸೆಟ್ ಗಳಿಗೆ ರಾಜ್ಯದ ಎಲ್ಲಾ ರೈತರಿಗೆ ನೀಡಿದಂತೆ ಕೊಡಗಿನ ಕಾಫಿ ಬೆಳೆಗಾರರಿಗೂ ರೈತರಿಗೂ ಉಚಿತ ವಿದ್ಯುತ್ ನೀಡಬೇಕು.

2)ಕೊಡಗು ಜಿಲ್ಲೆಯಾದ್ಯಂತ ನಿರಂತರ ಉತ್ತಮ ಗುಣಮಟ್ಟದ ವಿದ್ಯುತ್ ಪೂರೈಕೆ ಮಾಡುವುದು ಹಾಗೂ ಎಲ್ಲಾ 5 ತಾಲ್ಲೂಕಿನಲ್ಲಿ ಚೆಸ್ಕಾಂ ಇಲಾಖೆಯ ಸಬ್ಬ್ ಸ್ಟೇಷನ್ ಮೇಲ್ದರ್ಜೆಗೆ ಏರಿಸುವ ಕೆಲಸ ಕೂಡಲೇ ಆಗಬೇಕು .

3)ನಿರಂತರ ಪ್ರಕ್ರರ್ತಿ ವಿಕೋಪಕ್ಕೆ ತುತ್ತಾದ ಕೊಡಗಿನ ಎಲ್ಲಾ ರೈತರ 10HP ಗಿಂತ ಹೆಚ್ಚಿನ ಎಲ್ಲಾ ತರಹದ ಪಂಪ್ ಸೆಟ್ಟುಗಳಿಗೆ ನೀಡಿದ ಶುಲ್ಕದ ಬಡ್ಡಿಯನ್ನು ಸಂಪೂರ್ಣ ಮನ್ನಾ ಮಾಡಿ ಅಸಲು ಕಟ್ಟಲು ಕಂತಿನ ಅಧಾರದ ಮೇರೆಗೆ ಸಮಯ ನೀಡಬೇಕು.

4)ಈಗಾಗಲೇ ನಿಷ್ಕ್ರಿಯ ಗೊಳಿಸಿದ ರೈತರ ಪಂಪ್ ಸೆಟ್ ಮತ್ತು ಮನೆಗಳಿಗೆ ಕೂಡಲೇ ವಿದ್ಯುತ್ ಪೂರೈಕೆ ಮಾಡುವುದು

5)ಹಾಗೆ 10HP ಪಂಪ್ ಸೆಟ್ ಗಿಂತ ಹೆಚ್ಚಿನ ಪಂಪ್‌ಸೆಟ್ಟ್ ಗೆ ಶುಲ್ಕ ದ ರಷೀದಿ ನೀಡುವಾಗ ಕೊಡಗಿನ ರೈತರು ವರ್ಷದಲ್ಲಿ 3 ತಿಂಗಳು ಮಾತ್ರ ತಮ್ಮ ಬೆಳೆಗಳಿಗೆ ನೀರು ಹಾಯಿಸಲು ಪಂಪ್ ಸೆಟ್ ಉಪಯೋಗ ಮಾಡುವುದನ್ನು ಪರಿಗಣಿಸದೆ  ಚೆಸ್ಕಾಂ ಇಲಾಖೆ ಕೊಡಗಿನ ರೈತರಿಗೆ  ವರ್ಷಂಪೂರ್ತಿ  ನಿಗದಿತ ಶುಲ್ಕ, ಹಾಗೂ ಮೀಟರ್ ರೀಡಿಂಗ್ ಯುನಿಟ್ ಆಧರಿತ ಶುಲ್ಕ,ಮತ್ತು ವರ್ಷಕ್ಕೊಮ್ಮೆ ಠೇವಣಿ ಹಣವನ್ನು ವಸೂಲಿ ಮಾಡುತ್ತಿದೆ ಕೂಡಲೇ ಇದನ್ನು ಕೈಬಿಟ್ಟು ಒಂದೊ ವಾರ್ಷಿಕ ಶುಲ್ಕ ಅಥವಾ ಮೀಟರ್ ರೀಡಿಂಗ್ ಶುಲ್ಕದಲ್ಲಿ ಯಾವುದಾದರೂ ಒಂದನ್ನು ಮಾತ್ರ ರೈತರಿಂದ ಪಡೆದುಕೊಳ್ಳಬೇಕು.

6)ಅಕಸ್ಮಾತ್ ರೈತರ ಬೇಳೆಗಳು,ಮನೆಗಳು ,ಮತ್ತು ಸಾಕುಪ್ರಾಣಿಗಳು ಚೆಸ್ಕಾಂ ಇಲಾಖೆಯ ಬೆಜವಬ್ದಾರಿಯಿಂದ ಅಥವಾ ಸರಿಯಾಗಿ ಲೈನ್ ನಿರ್ವಹಣೆ ಮಾಡದೆ ಯಾರಿಗಾದರೂ ಹಾನಿಯಾದರೇ ನೀಡುವ ಪರಿಹಾರವನ್ನು ಹೆಚ್ಚಿಸಬೇಕು ಹಾಗೂ ಪರಿಹಾರವನ್ನು ನೀಡಲು ವಿಳಂಬ ಮಾಡದೆ ಕೂಡಲೇ ನೀಡುವಂತೆ ಮನವಿ ಮಾಡಿದರು

7)ರಾಜ್ಯದ ರೈತರಿಗೆ ಚೆಸ್ಕಾಂ ಇಲಾಖೆಯಿಂದ ಸಿಗುತ್ತಿರುವ ಎಲ್ಲಾ ಸವಲತ್ತುಗಳು ಕೊಡಗಿನ ರೈತರಿಗೆ ಸಿಗಬೇಕು ಹಾಗೂ ಕೊಡಗಿನ ರೈತರಿಗೆ ಎಲ್ಲಾ ಸಮಯದಲ್ಲೂ ಉತ್ತಮ ಗುಣಮಟ್ಟದ ವಿದ್ಯುತ್ ಪೂರೈಕೆ  ಮಾಡಬೇಕು ಹಾಗೂ ಸಂಬಂಧಿಸಿದ ಹಲವಾರು ಸಬ್ಬ್ ಸ್ಟೇಷನ್ ನಲ್ಲಿ JE and AEE and Line men ಗಳನ್ನು ಕೂಡಲೇ ನೇಮಕ ಮಾಡಿ ನಾಡಿನ ಜನತೆಗೆ ಸೂಕ್ತ ರೀತಿಯಲ್ಲಿ ಸೇವೆ ಒದಗಿಸುವಂತೆ ಮಾಡಬೇಕು ಎಂದು ಮನವಿಮಾಡಿದರು.

ಪ್ರತಿಭಟನೆಗೆ ಜಿಲ್ಲೆಯ 5 ತಾಲೂಕಿನ ಕರ್ನಾಟಕ ರಾಜ್ಯ ರೈತ ಸಂಘದ ಪದಾಧಿಕಾರಿಗಳು, ಸದಸ್ಯರು ರೈತಬಾಂದವರು, ರೈತ ಪರ ಸಂಘ ಸಂಸ್ಥೆಗಳ ಸದಸ್ಯರು ಮುಖಂಡರು ನೂರಾರು ಸಂಖ್ಯೆಯಲ್ಲಿ ಭಾಗವಹಿಸಿ ತಮ್ಮ ಬೆಂಬಲ ವ್ಯಕ್ತಪಡಿಸಿದರು.

Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,