Header Ads Widget

ಸರ್ಚ್ ಕೂರ್ಗ್ ಮೀಡಿಯ

ಹವಾಮಾನ ವೈಪರಿತ್ಯ: ರಾಷ್ಟ್ರೀಯ ವಿಪತ್ತು ನಿಧಿಯಲ್ಲಿ ಕಾಫಿ ಕೖಷಿಗೆ ಹೆಚ್ಚು ಪರಿಹಾರ ಅನುದಾನ ನೀಡಲು ಒತ್ತಾಯ

ಹವಾಮಾನ ವೈಪರಿತ್ಯ: ರಾಷ್ಟ್ರೀಯ ವಿಪತ್ತು  ನಿಧಿಯಲ್ಲಿ ಕಾಫಿ ಕೖಷಿಗೆ ಹೆಚ್ಚು   ಪರಿಹಾರ ಅನುದಾನ ನೀಡಲು ಒತ್ತಾಯ


ಇತ್ತೀಚಿನ ದಿನಗಳಲ್ಲಿ ಹವಾಮಾನದಲ್ಲಿನ ಏರುಪೇರು ಕಾಫಿಕೃಷಿಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. 2015 ರಿಂದ ಈಚೆಗೆ ನಿರಂತರವಾದ ಅತೀವೃಷ್ಟಿ ಮತ್ತು ಅನಾವೃಷ್ಟಿ ಕಾಫಿಬೆಳೆಗಾರರನ್ನು ಆರ್ಥಿಕ ಸಂಕಷ್ಟಕ್ಕೆ ಗುರಿಮಾಡಿದೆ.

ಜೊತೆಗೆ ರೋಗಬಾದೆ, ಬೆಲೆಕುಸಿತ, ಕಾರ್ಮಿಕರ ಕೊರತೆ, ಕಾಡುಪ್ರಾಣಿಗಳ ಹಾವಳಿ, ಮತ್ತು ಹವಾಮಾನ ಏರುಪೇರು ಬೆಳೆಗಾರರಿಗೆ ಕಷ್ಟವಾಗಿ ಪರಿಣಮಿಸಿದೆ.

ಪೂರಕವೆಂಬಂತೆ 2021 ನೇ ಸಾಲಿನಲ್ಲಿ ಮಳೆಯು ನಿರಂತರವಾಗಿ ಸುರಿಯುತ್ತಲೇ ಇದ್ದು, ಅರೇಬಿಕಾ ಕಾಫಿಯನ್ನು ಕುಯ್ಯಲು ಸಾಧ್ಯವಾಗುತ್ತಿಲ್ಲ. ಜೊತೆಗೆ ಕಾಫಿತೋಟಗಳಲ್ಲಿ ಕಳೆ(ಹಳ)ಪದೇ ಪದೇ ಬರುತ್ತಿದ್ದು, ಕಾರ್ಮಿಕರಿಂದ ಮತ್ತೆ ಮತ್ತೆ ಕಳೆ ನಿರ್ಮೂಲನೆ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. 

ಪ್ರಸ್ತುತ ಸುರಿಯುತ್ತಿರುವ ಅಕಾಲಿಕ ಮಳೆಯಿಂದ ಕಾಫಿ ಒಣಗಿಸಲು ಸಾಧ್ಯವಾಗದೇ ಕಾಫಿಯ ಗುಣಮಟ್ಟ ಕಳೆದುಕೊಳ್ಳುತ್ತಿದೆ. ಜೊತೆಗೆ ಬೆಳೆಗಾರರು ವರ್ಷವಿಡೀ ಬೆಳೆದ ಪಸಲು ಕೈಗೆ ಬರುವ ಮುನ್ನವೇ ಹಾಳಾಗುತ್ತಿದ್ದು, ಬೆಳೆಗಾರರಲ್ಲಿ ಆತಂಕ ಹೆಚ್ಚಾಗಿ, ಜೊತೆಗೆ ಆರ್ಥಿಕ ಹಿನ್ನೆಡೆಯಾಗಿದ್ದಾರೆ. ಜೊತೆಗೆ ಹವಾಮಾನ ವೈಪರಿತ್ಯದಿಂದ ಈ ಬಾರಿಯ ಕಾಳುಮೆಣಸು ಫಸಲು ಶೇ.85ರಷ್ಟು ನೆಲಕಚ್ಚಿದೆ.

ಕಾಫಿ ಬೆಳೆಗಾರ ಜಿಲ್ಲೆಗಳಾದ  ಕೊಡಗು. ಹಾಸನ, ಚಿಕ್ಕಮಗಳೂರು  ಜಿಲ್ಲೆಯ ಜನಪ್ರತಿನಿಧಿಗಳು  ಈ ವಿಷಯದ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸಿ,  ಕಾಫಿ ಉದ್ಯಮದ ಸಂಕಷ್ಟದ   ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಗಮನಸೆಳೆದು ಆತಂಕದಲ್ಲಿರುವ ಬೆಳೆಗಾರರಿಗೆ ಶೀಘ್ರದಲ್ಲೇ ಸೂಕ್ತ ಪರಿಹಾರ ದೊರಕಿಸಿಕೊಡಬೇಕೆಂದು ಕನಾ೯ಟಕ ಬೆಳೆಗಾರರ ಒಕ್ಕೂಟ ಒತ್ತಾಯಿಸಿದೆ.   

ಸಂಕಷ್ಟದ ಪರಿಸ್ಥಿತಿಯಲ್ಲಿ ಕಾಫಿಗೆ ಯಾವುದೇ ತರಹದ ಬೆಳೆವಿಮೆ ಇಲ್ಲವಾಗಿದೆ. ಈ ವಿಚಾರವಾಗಿಯೂ ಸಹ ಸರ್ಕಾರ ಗಮನಹರಿಸಬೇಕೆಂದು  ಜನಪ್ರತಿನಿಧಿಗಳನ್ನು ಒಕ್ಕೂಟ  ಒತ್ತಾಯಿಸಿದೆ.    ರಾಷ್ಟ್ರೀಯ ವಿಪತ್ತು ಯೋಜನೆಯಡಿ ಕಾಫಿಗೆ ಕೊಡುತ್ತಿರುವ  ಪರಿಹಾರ  ಬಹಳ  ಸಣ್ಣ  ಪ್ರಮಾಣದ್ದಾಗಿದೆ.  ಅದು ಕೃಷಿಗೆ ಸರಿದೂಗಿಸುವಂತಹದ್ದಾಗಿರುತ್ತದೆ. ಆದರೆ ಕಾಫಿಗೆ ಹೆಚ್ಚು ಖರ್ಚುವೆಚ್ಚಗಳಿರುವುದರಿಂದ ರಾಷ್ಟ್ರೀಯ ವಿಪತ್ತು ಯೋಜನೆಯಡಿಯಲ್ಲಿ ಕಾಫಿಗೆ ಪ್ರತ್ಯೇಕವಾದ ಹೆಚ್ಚಿನ  ಪ್ರಮಾಣದ  ಪರಿಹಾರವನ್ನು ಕೊಡಿಸುವ ನಿಟ್ಟಿನಲ್ಲಿ ಕಾಫಿ ಜಿಲ್ಲೆಗಳ  ಜನಪ್ರತಿನಿಧಿಗಳು ಕೇಂದ್ರ ಸರ್ಕಾರದ ಮೇಲೆ ಹೆಚ್ಚಿನ ಒತ್ತಡ ಹೇರಬೇಕಾಗಿಯೂ ಕೂಡಾ  ಕನಾ೯ಟಕ ಬೆಳೆಗಾರರ ಒಕ್ಕೂಟದ ಅಧ್ಯಕ್ಷ  ಡಾ.ಹೆಚ್.ಟಿ. ಮೋಹನ್ ಕುಮಾರ್, ಪ್ರಧಾನ  ಕಾಯ೯ದಶಿ೯ ಕೆ.ಬಿ.ಕೖಷ್ಣಪ್ಪ  ಹೇಳಿಕೆಯಲ್ಲಿ ತಿಳಿಸಿದ್ದಾರೆ.

Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,