Header Ads Widget

ಸರ್ಚ್ ಕೂರ್ಗ್ ಮೀಡಿಯ

ಮಕ್ಕಳ ವಿಜ್ಞಾನ ಸಮಾವೇಶ: ಕೊಡಗಿನಿಂದ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಕಿರಿಯ ವಿಜ್ಞಾನಿಗಳು

ಮಕ್ಕಳ ವಿಜ್ಞಾನ ಸಮಾವೇಶ: ಕೊಡಗಿನಿಂದ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಕಿರಿಯ ವಿಜ್ಞಾನಿಗಳು


ಮಡಿಕೇರಿ ಅ.08: ಕೋವಿಡ್-19 ರ ಹಿನ್ನೆಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ವತಿಯಿಂದ ಭೌತಿಕ ಸಮಾವೇಶಕ್ಕೆ ಪರ್ಯಾಯವಾಗಿ ಆನ್‍ಲೈನ್ ಮೂಲಕ "ಸುಸ್ಥಿರ ಜೀವನಕ್ಕಾಗಿ ವಿಜ್ಞಾನ" ಎಂಬ ಕೇಂದ್ರ ವಿಷಯದಡಿ ನಡೆದ ಕೊಡಗು ಜಿಲ್ಲಾ ಮಟ್ಟದ 28ನೇ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶ-2020 ದಲ್ಲಿ ವಿದ್ಯಾರ್ಥಿಗಳು ಸ್ವತಃ ತಾವೇ ವೈಜ್ಞಾನಿಕ ಯೋಜನಾ ಪ್ರಬಂಧ ತಯಾರಿಸಿ ಉತ್ತಮವಾಗಿ ಪ್ರಬಂಧ ಮಂಡಿಸಿ ರಾಜ್ಯ ಮಟ್ಟದ ಸಮಾವೇಶಕ್ಕೆ ಆಯ್ಕೆಯಾದ ಜಿಲ್ಲೆಯ 10 ಮಂದಿ ಕಿರಿಯ ವಿಜ್ಞಾನಿಗಳನ್ನು ನಗರದ ಡಿಡಿಪಿಐ ಕಚೇರಿಯಲ್ಲಿ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಮಕ್ಕಳ ವಿಜ್ಞಾನ ಸಮಾವೇಶದ ಸಮಾರೋಪ ಸಮಾರಂಭದಲ್ಲಿ ಪುರಸ್ಕರಿಸಲಾಯಿತು.

       ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಂವಹನ ಮಂಡಳಿ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಸಮಗ್ರ ಶಿಕ್ಷಣ ಕರ್ನಾಟಕ, ರಾಷ್ಟ್ರೀಯ ಹಸಿರು ಪಡೆ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಕೊಡಗು ಜಿಲ್ಲಾ ಸಮಿತಿ ವತಿಯಿಂದ ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್‍ನ ಸಹಯೋಗದೊಂದಿಗೆ ಏರ್ಪಡಿಸಿದ್ದ ಕೊಡಗು ಜಿಲ್ಲಾಮಟ್ಟದ 28 ನೇ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ರಾಜ್ಯ ಮಟ್ಟದ ಸಮಾವೇಶಕ್ಕೆ ಆಯ್ಕೆಯಾದ 10 ಕಿರಿಯ ವಿಜ್ಞಾನಿಗಳಿಗೆ ಡಿಡಿಪಿಐ ಎಚ್.ಕೆ.ಮಂಜುನಾಥ್ ಹಾಗೂ ರೋಟರಿ ಮಿಸ್ಟಿ ಹಿಲ್ಸ್ ನ ಅಧ್ಯಕ್ಷೆ ನೆರವಂಡ ಅನಿತಾ ಪೂವಯ್ಯ ಪ್ರಶಸ್ತಿ ಪತ್ರ ವಿತರಿಸಿದರು.

ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶ-2020 ಕ್ಕೆ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಕಿರಿಯ ವಿಜ್ಞಾನಿಗಳಿಗೆ ರೋಟರಿ ಸಂಸ್ಥೆಯ ಸಹಾಯಕ ಗವರ್ನರ್ ಎಚ್.ಟಿ.ಅನಿಲ್ ಪ್ರಶಸ್ತಿ ಪತ್ರ ವಿತರಿಸಿದರು.

ಜಿಲ್ಲೆಯ ವಿವಿಧ ಶಾಲೆಗಳ ಕಿರಿಯ ವಿಜ್ಞಾನಿಗಳು ತಮ್ಮ ಮಾರ್ಗದರ್ಶಿ ಶಿಕ್ಷಕರ ನೇತೃತ್ವದಲ್ಲಿ ವೈಜ್ಞಾನಿಕ ಪ್ರಬಂಧ ಮಂಡಿಸಿದ್ದಾರೆ. ಮುಂದೆ ಆವರಣದಲ್ಲಿ ವಿದ್ಯಾರ್ಥಿಗಳು ತಾವು ಮಂಡಿಸಿದ ಉಪ ವಿಷಯ ಹಾಗೂ ಮಾರ್ಗದರ್ಶಿ ಶಿಕ್ಷಕರ ಹೆಸರನ್ನು ನಮೂದಿಸಲಾಗಿದೆ.

 ನಗರ ಕಿರಿಯ ವಿಭಾಗ: ನಗರದ ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದ ಸಿ.ಎಸ್.ರಘುವಂಶಿ(ಕೊಡಗಿನಲ್ಲಿ ಶೋಲಾ ಅರಣ್ಯಗಳು-ಮಾರ್ಗದರ್ಶಿ ಶಿಕ್ಷಕಿ-ಎಂ.ಎಸ್.ಶೃತಿ), ಬಿ.ಪಿ.ಅಮೋಘ್(ವನ್ಯಜೀವಿಗಳ ಸುಸ್ಥಿರ ಜೀವನಕ್ಕಾಗಿ ಕಾಡುಹಣ್ಣುಗಳ ಸಂರಕ್ಷಣೆ- ಎಂ.ಎಸ್.ಶೃತಿ).

ಗ್ರಾಮಾಂತರ ಕಿರಿಯ ವಿಭಾಗ: ಕಿರಗೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಿ.ಆರ್.ಚೇತನ್ (ವೈಜ್ಞಾನಿಕ ವಿಧಾನದೊಂದಿಗೆ ಸಾಂಪ್ರದಾಯಿಕ ಕೃಷಿ-ಮಾರ್ಗದರ್ಶಿ ಶಿಕ್ಷಕರು:ಎಂ.ಕೆ.ವೀಣಾ), ಸೋಮವಾರಪೇಟೆ ಚೌಡ್ಲು ಓ.ಎಲ್.ವಿ.ಕಾನ್ವೆಂಟ್ ನ ಧೀಮಂತ್ ನಾಗ್ (ಕಪ್ಪುಬೆಲ್ಲ ಆರೋಗ್ಯದ ಸಂಜೀವಿನಿ- ಮಾರ್ಗದರ್ಶಿ ಶಿಕ್ಷಕರು : ಬಿ.ಡಿ.ಛಾಯಾ)

ಗ್ರಾಮಾಂತರ ಹಿರಿಯ ವಿಭಾಗ: ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯ ಸಿ.ಎಸ್.ಇಂಚರ (ನೀರಿನ ಸಂರಕ್ಷಣೆ ಮತ್ತು ನಿರ್ವಹಣೆ- ಮಾರ್ಗದರ್ಶಿ ಶಿಕ್ಷಕರು: ಟಿ.ಜಿ.ಪ್ರೇಮಕುಮಾರ್), ಶನಿವಾರಸಂತೆ ಸೆಕ್ರೆಡ್ ಹಾರ್ಟ್ ಶಾಲೆಯ ಎ.ಕೆ.ಹರ್ಷಿತ(ಬೆಳೆಗಳ ಸಂರಕ್ಷಣೆ ಮತ್ತು ನೀರಿನಲ್ಲಿ ಮೃತದೇಹಗಳ ಪತ್ತೆ ಹಚ್ಚುವುದು: ಮಾರ್ಗದರ್ಶಿ ಶಿಕ್ಷಕರು: ಎ.ಎಸ್.ಕಿರಣ್ ಕುಮಾರ್ ), ಕೂಡಿಗೆ ಅಂಜೆಲಾ ವಿದ್ಯಾನಿಕೇತನ ಶಾಲೆಯ ಎಸ್.ಎನ್.ಸ್ನೇಹ (ಆಹಾರ ಸಂರಕ್ಷಣೆ- ಮಾರ್ಗದರ್ಶಿ ಶಿಕ್ಷಕರು:ಜೋಸ್ನಿ ಜೋಸ್)

       ನಗರ ಹಿರಿಯ ವಿಭಾಗ: ನಗರದ ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದ   ಇದೇ ಶಾಲೆಯ ಕೆ.ಕೆ.ಮಹಿನ್  ("ರಾಸಾಯನಿಕ ಕೀಟನಾಶಕವು ವರವೋ-ಶಾಪವೋ"- ಮಾರ್ಗದರ್ಶಿ ಶಿಕ್ಷಕ ಎಂ.ಲೋಹಿತ್ ಚಂಗಪ್ಪ), ಸ್ನೇಹ ವಲ್ಲರಿ ಬರ್ಕರ್ (ಕೊಡಗಿನ ದೇವರಕಾಡಿನ ಔಷಧಿ ಸಸ್ಯಗಳು-ಮಾರ್ಗದರ್ಶಿ ಶಿಕ್ಷಕರು: ಪಿ.ಎಸ್.ಪೆÇನ್ನಮ್ಮ), ಸನಾ ದೇಚಮ್ಮ (ಸೂಕ್ಷ್ಮಜೀವಿಗಳ ಸಂಕುಲ ಸ0ರಕ್ಷಣೆಯಿಂದ   ಸಕಲ ಜೀವಿಗಳ ಉಳಿವು- ಮಾರ್ಗದರ್ಶಿ ಶಿಕ್ಷಕರು : ಪಿ.ಎಸ್.ಪೆÇನ್ನಮ್ಮ).

      ಡಿಡಿಪಿಐ ಎಚ್.ಕೆ.ಮಂಜುನಾಥ್, ರೋಟರಿ ಅಸಿಸ್ಟೆಂಟ್ ಗರ್ವನರ್ ಎಚ್.ಟಿ.ಅನಿಲ್, ರೋಟರಿ ಮಿಸ್ಟಿ ಹಿಲ್ಸ್‍ನ ಅಧ್ಯಕ್ಷೆ ಅನಿತಾ ಪೂವಯ್ಯ, ವಿಜ್ಞಾನ ಕಾರ್ಯಕ್ರಮ ಸಂಘಟಕ ಟಿ.ಜಿ.ಪ್ರೇಮಕುಮಾರ್, ಮಾಲಿನ್ಯ ನಿಯಂತ್ರಣ ಮಂಡಳಿಯ ಜಿಲ್ಲಾ ಪರಿಸರ ಅಧಿಕಾರಿ ಜಿ.ಆರ್.ಗಣೇಶನ್, ಜಿಲ್ಲಾ ರೆಡ್‍ಕ್ರಾಸ್ ಸಂಸ್ಥೆಯ ಅಧ್ಯಕ್ಷ ರವೀಂದ್ರ ರೈ, ಶಿಕ್ಷಣಾಧಿಕಾರಿ ಕೆ.ಕಾಂತರಾಜು, ಜಿಲ್ಲಾ ಉಪ ಯೋಜನಾ ಸಮನ್ವಯಾಧಿಕಾರಿ ಎಂ.ಕೃಷ್ಣಪ್ಪ, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಎಸ್.ಟಿ.ವೆಂಕಟೇಶ್, ರೋಟರಿ ಸಂಸ್ಥೆಯ ಸದಸ್ಯೆ ಶಿಲ್ಪ ರೈ, ಮುಖ್ಯೋಪಾಧ್ಯಾಯಿನಿ ಡಿ.ಎಂ.ರೇವತಿ, ಸಮಾವೇಶದ ಜಿಲ್ಲಾ ಸಂಯೋಜಕ ಜಿ.ಶ್ರೀಹರ್ಷ, ಬಿಆರ್‍ಸಿ ನಳಿನಿ,  ಇಸಿಓ ಎಂ.ಎಚ್.ಹರೀಶ್, ಬಿಆರ್‍ಪಿಗಳಾದ  ಕೆ.ಯು.ರಂಜಿತ್, ಪುಟ್ಟರಂಗನಾಥ್ ಇತರರು ಇದ್ದರು.

Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,