Header Ads Widget

Responsive Advertisement

ತಾಯಿಯ ಹತ್ತಿರ ಹೋಗಲು ತಡೆದರೆ ಯಾವುದೇ ಅಧಿಕಾರಿಗಳಾಗಲಿ ಅಥವಾ ಜನಪ್ರತಿನಿಧಿಗಳಾಗಲಿ ತಿರ್ಥೋದ್ಬವಕ್ಕೆ ಹೋಗಲು ನಾವು ಬಿಡುವುದಿಲ್ಲ; ಅಖಿಲ ಕೊಡವ ಸಮಾಜ ಹಾಗೂ ಅದರ ಅಂಗಸಂಸ್ಥೆಗಳ ಎಚ್ಚರ

ತಾಯಿಯ ಹತ್ತಿರ ಹೋಗಲು ತಡೆದರೆ ಯಾವುದೇ ಅಧಿಕಾರಿಗಳಾಗಲಿ ಅಥವಾ ಜನಪ್ರತಿನಿಧಿಗಳಾಗಲಿ ತಿರ್ಥೋದ್ಬವಕ್ಕೆ ಹೋಗಲು ನಾವು ಬಿಡುವುದಿಲ್ಲ; ಅಖಿಲ ಕೊಡವ ಸಮಾಜ ಹಾಗೂ ಅದರ ಅಂಗಸಂಸ್ಥೆಗಳ ಎಚ್ಚರ

( ಸಾಂದರ್ಭಿಕ ಚಿತ್ರ ) 

ಕಾವೇರಿ ತಿರ್ಥೋದ್ಬವ ಸಂದರ್ಭದಲ್ಲಿ ಸ್ಥಳೀಯ ಭಕ್ತಾದಿಗಳಿಗೆ ವಿವಿಧ ಕಟ್ಟುನಿಟ್ಟಿನ ಆದೇಶವನ್ನು ಹೊರಡಿಸುವ ಬದಲು ಹೊರ ಜಿಲ್ಲೆ, ಹೊರ ರಾಜ್ಯಗಳ ಪ್ರವಾಸಿಗರಿಗೆ ಕಡಿವಾಣ ಹಾಕಬೇಕಿದೆ. ಯಾರ ಕಣ್ಣೊರೆಸಲು 7ರಿಂದ 17ರವರೆಗೆ ಜಿಲ್ಲೆಯ ಕೆಲವು ಸೀಮಿತವಾದ ಪ್ರವಾಸಿತಾಣಗಳ ಮೇಲೆ ನಿರ್ಬಂಧ ಇದರಿಂದ ಪ್ರಯೋಜನವಾದರೂ ಏನು ಎಂದು ಅರ್ಥವಾಗುತ್ತಿಲ್ಲ. ಹೊಟ್ಟೆಯೊಳಗೆ ತೊಂದರೆ ಇದೆ ಎಂದು ಆಪರೇಷನ್ ಮಾಡಿ ಹೊಟ್ಟೆಯೊಳಗೆ ಕತ್ತರಿನ್ನು ಬಿಟ್ಟು ಹೊಲಿಗೆ ಹಾಕಿದಂತ್ತಿದೆ ಪರಿಸ್ಥಿತಿ. ಕೂಡಲೆ ಜಿಲ್ಲೆಯ ಎಲ್ಲಾ ಪವಾಸಿತಾಣಗಳನ್ನು ಬಂದ್ ಮಾಡಿ ಪ್ರವಾಸಿಗರಿಗೆ ನಿರ್ಬಂಧ ಹಾಕಿ ಜಿಲ್ಲೆಯೊಳಗಿರುವ ಭಕ್ತಾದಿಗಳಿಗೆ ಮುಕ್ತವಾಗಿ ಕಾವೇರಿ ತುಲಾಸಂಕ್ರಮಣದಲ್ಲಿ ಪಾಲ್ಗೊಳ್ಳಲು ಅವಕಾಶ ಮಾಡಿಕೊಡಬೇಕಾಗಿದೆ ಎಂದು ಅಖಿಲ ಕೊಡವ ಸಮಾಜ ಹಾಗೂ ಅದರ ಅಂಗಸಂಸ್ಥೆಗಳು ಒತ್ತಾಯಿಸಿದೆ.

ಈ ಕುರಿತು ಸಾಮೂಹಿಕ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅಖಿಲ ಕೊಡವ ಸಮಾಜ ಅಧ್ಯಕ್ಷ ಮಾತಂಡ ಮೊಣ್ಣಪ್ಪ, ಅಖಿಲ ಕೊಡವ ಸಮಾಜ ಯೂತ್ ವಿಂಗ್ ಅಧ್ಯಕ್ಷ ಚಮ್ಮಟೀರ ಪ್ರವೀಣ್ ಉತ್ತಪ್ಪ ಹಾಗೂ ಅಖಿಲ ಕೊಡವ ಸಮಾಜ ಪೊಮ್ಮಕ್ಕಡ ಪರಿಷತ್ ಅಧ್ಯಕ್ಷೆ ಬಾಚರಣಿಯಂಡ ರಾಣು ಅಪ್ಪಣ್ಣ  ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳ ನಡೆಯನ್ನು ಖಂಡಿಸಿದ್ದು, ಕಳೆದ ವರ್ಷ ಕೂಡ ಸ್ಥಳೀಯ ಭಕ್ತಾದಿಗಳನ್ನು ತಡೆದು ಗೊಂದಲ ಸೃಷ್ಟಿಸಲಾಗಿತ್ತು, ಇದೀಗ ಪುನಃ ಮತ್ತೊಂದು ತಗಾದೆ ತೆಗೆದಿರುವುದು ಸರಿಯಲ್ಲ ಎಂದರು‌. ಶನಿವಾರ ಮಡಿಕೇರಿಯಲ್ಲಿ ಉಸ್ತುವಾರಿ ಸಚಿವರು, ಶಾಸಕರುಗಳು, ಜಿಲ್ಲಾಧಿಕಾರಿ ಹಾಗೂ ವಿವಿಧ ಅಧಿಕಾರಿಗಳನೊಳಗೊಂಡ ಸಭೆಯಲ್ಲಿ ತಲಕಾವೇರಿ ತಿರ್ಥೋದ್ಬವ ಸಂದರ್ಭದಲ್ಲಿ ವಾಹನಗಳನ್ನು ಭಾಗಮಂಡಲದಲ್ಲಿಯೇ ತಡೆಯುವಂತೆ ಹಾಗೂ ಭಾಗಮಂಡಲದಿಂದ ತಲಕಾವೇರಿಗೆ ಕಾಲ್ನಡಿಗೆಯಲ್ಲಿ ತೆರಳುವ ಸ್ಥಳೀಯ ಭಕ್ತಾದಿಗಳಿಗೆ ಕೂಡ ವ್ಯಾಕ್ಸಿನ್'ನೊಂದಿಗೆ 72 ಗಂಟೆಗಳ ನೆಗೆಟಿವ್ ಸರ್ಟಿಫಿಕೇಟ್ ತರಬೇಕು ಎಂದು ಆದೇಶ ಹೊರಡಿಸಿರುವುದು ಸರಿಯಲ್ಲ, ಕೂಡಲೇ ಈ ಆದೇಶವನ್ನು ಹಿಂಪಡೆದು ಪ್ರವಾಸಿಗರಿಗೆ ಕಟ್ಟುನಿಟ್ಟಿನ ಆದೇಶವನ್ನು ಹೊರಡಿಸಿ ಅದುಬಿಟ್ಟು ನಮ್ಮ ತಾಯಿಯ ಹತ್ತಿರ ನಾವು ಹೋಗಲು ಕಾನೂನಿನ ಬೇಲಿ ನಿರ್ಮಿಸುವುದು ಸರಿಯಲ್ಲ, ನಮ್ಮ ಧಾರ್ಮಿಕ ಭಾವನೆಗೆ ದಕ್ಕೆಯಾದರೆ ಬೇಲೆಯನ್ನು ತೆರವುಗೊಳಿಸಲು ನಮಗೆ ಗೊತ್ತಿದೆ ಹಾಗೂ ಇದು ಅನಿವಾರ್ಯ ಕೂಡ ಎಂದು ಎಚ್ಚರಿಸಿದ್ದಾರೆ.

ಕಾವೇರಿ ಮಾತೆಯನ್ನು ಹೆತ್ತಮ್ಮನಂತೆ ಪೂಜಿಸುತ್ತಿರುವ ಕೊಡವರ ದೇವಿ ಹಾಗೂ ಕೊಡಗಿನ ಆರಾಧ್ಯ ದೇವತೆ ವರ್ಷಕ್ಕೊಮ್ಮೆ ತೀರ್ಥ ರೂಪಿಣಿಯಾಗಿ ನಮಗೆ ದರ್ಶನ ನೀಡುತ್ತಿದ್ದು, ಕೊಡವರಿಗೆ ನೀಡಿದ ಮಾತಿನಂತೆ ಆ ತಾಯಿ ವರ್ಷಕ್ಕೊಮ್ಮೆ ತುಲಾಸಂಕ್ರಮಣದಂದು ದರ್ಶನ ನೀಡುತ್ತಿದ್ದಾಳೆ‌. ಈ ಸಂದರ್ಭದಲ್ಲಿ ನಾವು ತಾಯಿಯ ಜೊತೆ ಇರಬೇಕಾದದ್ದು ಮಕ್ಕಳ ಕರ್ತವ್ಯ, ಆದರೆ ಇಲ್ಲಿ ತಾಯಿಮಕ್ಕಳನ್ನು ದೂರ ಮಾಡಲು ನೋಡುತ್ತಿರುವುದು ಸರಿಯಲ್ಲ, ಕಳೆದ ಕೆಲವು ವರ್ಷಗಳಿಂದ ಇಲ್ಲದ ನಿಯಮಗಳನ್ನು ನಮ್ಮ ಮೇಲೆ ಹೇರಿ ಗೊಂದಲ ಸೃಷ್ಟಿಸಲಾಗುತ್ತಿದೆ, ನಮ್ಮ ತಾಳ್ಮೆಗೂ ಒಂದು ಮಿತಿ ಇದೆ, ಭಾಗಮಂಡಲದಲ್ಲಿ ವಾಹನ ನಿಲ್ಲಿಸಲು ಸ್ಥಳಾವಕಾಶದ ಕೊರತೆ ಇದ್ದು ತಲಕಾವೇರಿಯಲ್ಲಿ ವಾಹನ ನಿಲುಗಡೆಗೆ ಸಾಕಷ್ಟು ಸ್ಥಳಾವಕಾಶವಿದೆ ಹಾಗೂ ಭಾಗವಂಡಲದಿಂದ ತಲಕಾವೇರಿಗೆ ಸಾಕಷ್ಟು ದೂರವಿದ್ದು ಎಲ್ಲಾರಿಗೂ ಕಾಲ್ನಡಿಗೆಯಲ್ಲಿ ತೆರಳುವುದು ಅಸಾಧ್ಯ, ಮಕ್ಕಳು ಹಾಗೂ ವಯಸ್ಸಾದವರಿಗೆ ಹಾಗೂ ಅಂಗಾಂಗ ವೈಪಲ್ಯ ಇರುವವರಿಗೆ ಮಾತ್ರವಲ್ಲ, ಇತ್ತೀಚಿನ ದಿನಗಳಲ್ಲಿ ಆರೋಗ್ಯವಂತರಿಗೆ ಕೂಡ ಬಿಪಿ ಶುಗರ್ ಹೀಗೆ ಹಲವಾರು ಸಾಮಾನ್ಯ ಖಾಯಿಲೆಗಳು ಅವರನ್ನು ಕಾಡುತ್ತಿರುತ್ತದೆ ಅಂತಹವರಿಗೆ ಭಾಗಮಂಡಲದಿಂದ ತಲಕಾವೇರಿವರೆಗೆ ಕಾಲ್ನಡಿಗೆಯಲ್ಲಿ ತೆರಳುವುದು ಅಸಾಧ್ಯವಾಗಿದೆ. ಹಾಗೇ ಸ್ಥಳೀಯರಿಗೆ ವ್ಯಾಕ್ಸಿನ್'ನೊಂದಿಗೆ ಕೊವೀಡ್ ನೆಗೆಟಿವ್ ರಿಪೋರ್ಟ್ ಖಡ್ಡಾಯ ಮಾಡಿರುವುದು ಸರಿಯಲ್ಲ, ಈಗಾಗಲೇ ಸ್ಥಳೀಯರಿಗೆ ಆಧ್ಯತೆ ನೀಡಿ ಪ್ರವಾಸಿಗರಿಗೆ ಕಡಿವಾಣ ಹಾಕಿ ಎಂಬ ಒತ್ತಾಯವನ್ನು ಈ ಹಿಂದೆಯೇ ಮಾಡಿದ್ದೇವೆ. ಈಗಲೂ ಕೂಡ ಅದನ್ನೇ ಪುನಃ ಹೇಳುತ್ತಿದ್ದೇವೆ ಕೊವೀಡ್ ಸೋಂಕಿನ ದೃಷ್ಟಿಯಿಂದ ಕಾವೇರಿ ತಿರ್ಥೋದ್ಬವದಿಂದ ಕಿರುಸಂಕ್ರಮಣದವರೆಗೂ ಜಿಲ್ಲೆಗೆ ಪ್ರವಾಸಿಗರನ್ನು ನಿರ್ಬಂಧಿಸಬೇಕು ಅದುಬಿಟ್ಟು ಸ್ಥಳೀಯರ ಮೇಲೆ ಒತ್ತಡ ಹೇರುವುದು ಸರಿಯಲ್ಲ. ಈಗಾಗಲೇ ತಿರ್ಥೋದ್ಬವಕ್ಕೆ ಕೆಲವೇ ಕೆಲವು ದಿನಗಳು ಮಾತ್ರ ಉಳಿದಿದೆ ಕೂಡಲೇ ಪ್ರವಾಸಿಗರಿಗೆ ತಾತ್ಕಾಲಿಕವಾಗಿ ನಿರ್ಬಂಧ ಹೇರಿ ಸ್ಥಳೀಯ ಮೂಲ ನಿವಾಸಿಗಳು ಹಾಗೂ ಸ್ಥಳೀಯ ಭಕ್ತಾದಿಗಳಿಗೆ ಮಾತ್ರ ತಿರ್ಥೋದ್ಬವದಲ್ಲಿ ಯಾವುದೇ ನಿರ್ಬಂಧ ಹೇರದೆ ನಮ್ಮ ಧಾರ್ಮಿಕ ವಿಧಿವಿಧಾನಗಳನ್ನು ಹಾಗೂ ನಮ್ಮ ಹಿರಿಯರ ಕಟ್ಟುಪಾಡುಗಳನ್ನು ಆಚರಿಸಲು ಅವಕಾಶ ಮಾಡಿಕೊಡಬೇಕಾಗಿದೆ. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಈ ವಿಷಯವಾಗಿ ಯಾರೇ ಹೋರಾಟ ಹಮ್ಮಿಕೊಂಡರು ನಮ್ಮ ಸಂಪೂರ್ಣ ಬೆಂಬಲವಿದೆ ಹಾಗೂ ಕೊಡಗಿನ ನಿವಾಸಿಗಳು ಕೂಡ ಒಂದಾಗುತ್ತಾರೆ, ಇದಕ್ಕೆ ಅವಕಾಶ ಮಾಡಿ ಕೊಡಬಾರದು. ಈಗಾಗಲೇ ಜಿಲ್ಲೆಯಲ್ಲಿ ಪ್ರವಾಸಿಗರು ಅಗತ್ಯಕ್ಕಿಂತಲೂ ಹೆಚ್ಚುವರಿಯಾಗಿ ಆಗಮಿಸುತ್ತಿದ್ದಾರೆ, ಇವರಿಗೆ ಯಾವುದೇ ವ್ಯಾಕ್ಸಿನ್ ಸರ್ಟಿಫಿಕೇಟ್ ಅಥವಾ ನೆಗೆಟಿವ್ ಸರ್ಟಿಫಿಕೇಟ್ ಬೇಕಾಗಿಲ್ಲ , ಆದರೆ ನಮ್ಮ ಹಬ್ಬಕ್ಕೆ ಎಲ್ಲಿಲ್ಲದ ನಿಯಮಗಳನ್ನು ಹಾಕುವುದು ಸರಿಯೇ. ಮೊದಲು ಒಂದಷ್ಟು ದಿವಸ ಪ್ರವಾಸಿಗರಿಗೆ ಕಡಿವಾಣ ಹಾಕಿ. ನಮ್ಮ ಆರೋಗ್ಯ ನೋಡಿಕೊಳ್ಳುವುದು ನಮಗೆ ಗೊತ್ತಿದೆ. ಯಾರನ್ನು ಮೆಚ್ಚಿಸಲು ಅಥವಾ ಯಾರಿಗಾಗಿ ಈ ನಿರ್ಬಂಧ ನಮ್ಮನ್ನು ತಾಯಿಯ ಹತ್ತಿರ ಹೋಗಲು ತಡೆದರೆ ಯಾವುದೇ ಅಧಿಕಾರಿಗಳಾಗಲಿ ಅಥವಾ ಜನಪ್ರತಿನಿಧಿಗಳಾಗಲಿ ತಿರ್ಥೋದ್ಬವಕ್ಕೆ ಹೋಗಲು ನಾವು ಬಿಡುವುದಿಲ್ಲ ಎಂದು ಅಖಿಲ ಕೊಡವ ಸಮಾಜ ಹಾಗೂ ಅದರ ಅಂಗಸಂಸ್ಥೆಗಳು ಎಚ್ಚರಿಸಿವೆ.

Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,