Header Ads Widget

ಸರ್ಚ್ ಕೂರ್ಗ್ ಮೀಡಿಯ

ಕಾವೇರಿ ತಾಯಿಯ ಪವಿತ್ರ ತೀರ್ಥೋಧ್ಬವ ದರ್ಶನಕ್ಕೆ ಏಕೆ ಈ ರೀತಿಯ ವಿಘ್ನ....?

ಕಾವೇರಿ ತಾಯಿಯ ಪವಿತ್ರ ತೀರ್ಥೋಧ್ಬವ ದರ್ಶನಕ್ಕೆ ಏಕೆ ಈ ರೀತಿಯ ವಿಘ್ನ....?

( ಚೀರಂಡ ಕಂದಾ ಸುಬ್ಬಯ್ಯ )

ಅಕ್ಟೋಬರ್ ಹದಿನೇಳು, ದಕ್ಷಿಣ ಭಾರತದ ಪಾಪನಾಷಿನಿ, ರೈತರ ಜೀವನಾಡಿ ಕಾವೇರಿ ಮಾತೆಯು ತೀರ್ಥದ ರೂಪದಲ್ಲಿ ಉಕ್ಕಿ ಭಕ್ತರಿಗೆ ದರ್ಶನ ಕೊಡುವ‌ ಆ ದಿನ‌ ಅದೊಂದು ಅಪೂರ್ವ ಕ್ಷಣ. ಈ ಶೃಧ್ದಾ ಭಕ್ತಿಯ ಕ್ಷಣಕ್ಕೆ ಹತ್ತು‌ ದಿನ, ಅಂದರೆ‌ ಅಕ್ಟೋಬರ್ ಹತ್ತರಿಂದ ಕಾವೇರಿ ಸಂಕ್ರಮಣ (17/10/2021) ವರೆಗೆ ಕೊಡಗಿನ ಪ್ರವಾಸೋದ್ಯಮ ಸ್ಥಗಿತ ಮಾಡಿ ಕಾವೇರಿ ಮಾತೆಗೆ ಗೌರವ ಕೊಟ್ಟು ಕೊಡಗಿನ‌  ತಾಯಿಯ ಭಕ್ತರಿಗೆ ಸುಗಮವಾಗಿ ದರ್ಶನಕ್ಕೆ ಅನುವು ಮಾಡಿ ಕೊಟ್ಟಲ್ಲಿ ನಮ್ಮ ಘನ ವ್ಯಕ್ತ ಸರಕಾರದ ಉಸ್ತುವಾರಿಗಳ  ಗಂಟೇನು ಕರಗೀತು ಎಂಬುದು ನನ್ನ ಪ್ರಶ್ನೆ ?

ಕಾವೇರಿ ಸಂಕ್ರಮಣ‌ ಎಂದರೆ‌.... ಭಕ್ತರಿಗೆ ತಾಯಿಯ  ದಿವ್ಯ ದರ್ಶನ, ಪೂಜೆ, ಪಿಂಡ ಪ್ರದಾನ ಮುಖ್ಇಯವಾಗಿರುತ್ತದೆ. ಬೇರೆ ಹಬ್ಬಗಳಂತೆ‌ ಜಾತ್ರೆ ಕುಣಿತ, ಹಾಗು‌ ರಾಜಕೀಯ ನಾಯಕರ ಗೆಲುವಿನ ಸಂಭ್ರದ ಜಯಕಾರ ಬ್ಯಾಂಡು‌ ಕುಣಿತ, ಗುಂಡು‌ ಪಟಾಕಿಯ‌ ಸಂಭ್ರವಿಲ್ಲ.  ಚುನಾವಣೆ ಗೆದ್ದರೆ, ಸಚಿವ ಸ್ಥಾನದ ಹಬ್ಬಗಳಿಗೆ ಕೋವಿಡ್ ನೆಗೆಟಿವ್ ಸಟಿ೯ಫಿಕೇಟ್ ಇಟ್ಟುಕೊಂಡು‌ ಕುಣಿದರೆ...? ಕೊರೋನ ಸುಳಿಯೋದಿಲ್ಲವೇ...? 

ಅಕ್ಟೋಬರ್ ಏಳರಂದು ಸನ್ಮಾನ್ಯ ಶಾಸಕರಾದ ಕೆ.ಜಿ ಬೋಪಯ್ಯರವರ‌ ಅಧ್ಯಕ್ಷತೆಯಲ್ಲಿ ಶ್ರೀ ಕಾವೇರಿ ಮಾತೆಯ ತೀರ್ಥೋಧ್ಬವ ವಿಚಾರವಾಗಿ‌ ನಡೆಯುವ‌ ಸಭೆಯಲ್ಲಿ ಜಿಲ್ಲೆಯ ಸರ್ವ ಕಾವೇರಿ ಮಾತೆಯ ಭಕ್ತರಿಗೆ ಆರೋಗ್ಯಕರವಾದ ಚರ್ಚೆಯಾಗಿ ಉತ್ತಮ ವ್ಯವಸ್ಥೆ ಮೂಡಿ ಬರಲಿ

ಗೌರವಾನಿತ ಉಸ್ತುವಾರಿ ಸಚಿವರೇ.  ಕಾವೇರಿ ತಾಯಿಯ ಪವಿತ್ರ ತೀರ್ಥೋಧ್ಬವ ದರ್ಶನಕ್ಕೆ ಮಾತೆಯ ಮಕ್ಕಳು ಭಾಗಮಂಡಲದಿಂದ‌ ಏಂಟು‌ ಕಿಲೋ ಮೀಟರ್ ನಡೆದು‌ಕೊಂಡು ಹೋಗ ಬೇಕೆ....? ಹಾಗಾದರೆ ಅದು ಕೂಡ ತಾಯಿಯ ಪರಮ ಭಕ್ತರೀಗೆ ದೊಡ್ಡ ವಿಷಯವೇನಲ್ಲಾ, ನಡೆಯೊದಾದರೆ ನಡೆಯೋದೆ... ಕೊಡಗಿನ ಗೌರವಾನಿತ ಉಸ್ತುವಾರಿ ಸಚಿವರಾದ ಕೋಟ ಸಾಯಭ್ರೆ..... ಜೀವನದಿ ಕಾವೇರಿ ಮಾತೆಯ ತೀಥೋ೯ಧ್ಬವ ಕ್ಷಣದ ಪೂರ್ಣ ವ್ಯವಸ್ಥೆಯ ರೂಪು ರೇಷೆಯನ್ನು ನಮ್ಮ ಜಿಲ್ಲಾಡಳಿತಕ್ಕೆ ಹಾಗು ನಮ್ಮ ಅನುಭವಿ ಶಾಸಕರುಗಳಿಗೆ ಬಿಟ್ಟು‌ಕೊಟ್ಟು, ನಿಮ್ಮ ಆಶೀರ್ವಾದ ಸದಾ ಕೊಡಗಿನ ಜನತೆಯ ಮೇಲಿರಲಿ.. ಎಂಬುದೇ ನಮ್ಮ ಆಶಯ.

 "ಜೈ ಪಾಪನಾಷಿಣಿ"

✍️....ಚೀರಂಡ ಕಂದಾ ಸುಬ್ಬಯ್ಯ 

Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,