Header Ads Widget

Responsive Advertisement

ಕೋಟ ಶ್ರೀನಿವಾಸ ಪೂಜಾರಿ ವಿರುದ್ಧ ಕಾಂಗ್ರೆಸ್ ‌ಪತ್ರಿಕಾ ಹೇಳಿಕೆ, ಬಿ.ಜೆ.ಪಿ ತೀವ್ರ ಖಂಡನೆ

ಕೋಟ ಶ್ರೀನಿವಾಸ ಪೂಜಾರಿ ವಿರುದ್ಧ ಕಾಂಗ್ರೆಸ್ ‌ಪತ್ರಿಕಾ ಹೇಳಿಕೆ,  ಬಿ.ಜೆ.ಪಿ ತೀವ್ರ ಖಂಡನೆ


ತಲಕಾವೇರಿ ತೀರ್ಥೋಧ್ಭವದ ಕುರಿತಂತೆ ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿಯವರು ಮೊನ್ನೆ ಪತ್ರಿಕಾ ಗೋಷ್ಠಿ ನೀಡಿದ ಬೆನ್ನಲ್ಲೇ ಕಾಂಗ್ರೆಸ್ ಪಕ್ಷದ ನಾಯಕರು ಅದನ್ನು ಖಂಡಿಸಿ, ಏಕಾಏಕಿ ಪತ್ರಿಕಾ ಹೇಳಿಕೆ ನೀಡುತ್ತಿರುವ ಕುರಿತು, ಪತ್ರಿಕಾ ಹೇಳಿಕೆ ಮೂಲಕ ಸ್ಪಷ್ಟೀಕರಣ ನೀಡಿರುವ ಗೋಣಿಕೊಪ್ಪಲು ಬಾ ಜಾ ಪ ಮಂಡಲದ ವಕ್ತಾರರು ಹಾಗು ಅಧ್ಯಕ್ಷರು. ಕಾಂಗ್ರೆಸ್ಸಿನ ಈ ನಡೆಯನ್ನು ತೀವ್ರವಾಗಿ ಖಂಡಿಸಿದೆ. ಉಸ್ತುವಾರಿ ಸಚಿವರ ಸಮ್ಮುಖದಲ್ಲಿ ತೀರ್ಮಾನವನ್ನು   ಕಾಂಗ್ರೆಸ್ ಪಕ್ಷದ ವಿಧಾನಪರಿಷತ್ ಸದಸ್ಯೆ ವೀಣಾ ಅಚ್ಚಯ್ಯನವರ ಸಮ್ಮುಖದಲ್ಲೇ ತೆಗೆದುಕೊಂಡಿದ್ದು, ಆ ಸಂದರ್ಭದಲ್ಲಿ ಮೌನವಾಗಿದ್ದು, ಅಲ್ಲೇ ಪ್ರಶ್ನಿಸದೆ. ನಂತರ ಅವರ ಪಕ್ಷ ಏಕಾಏಕಿ ಪತ್ರಿಕಾ ಹೇಳಿಕೆ‌ ಮೂಲಕ ಮಾನ್ಯ ಸಚಿವ ಶ್ರೀನಿವಾಸ ಪೂಜಾರಿಯವರ ತೇಜೋವದೆ ಮಾಡುತ್ತಿದ್ದು. ಸುಳ್ಳು ಆರೋಪ ಮಾಡುತ್ತಿದೆ ಎಂದು ಹೇಳಿದೆ. ಈ ಹಿಂದೆ ಟಿಪ್ಪು ಜಯಂತಿ ಸಮಯದಲ್ಲಿ ಟಿಪ್ಪು ಜಯಂತಿ ವಿರೋಧಿಗಳನ್ನು ಗಡಿಪಾರು ಮಾಡಬೇಕು ಎಂದ ಕಾಂಗ್ರೆಸ್ ಪಕ್ಷ ಹಾಗು ಕಾವೇರಿ ತೀರ್ಥರೂಪಿಣಿಯಾಗಿ ಗರಿಯುವುದೇ ಸುಳ್ಳು ಎಂದ  ನಾಯಕರ ಕಾಂಗ್ರೆಸ್ ಪಕ್ಷ ಇಂದು ಕಾವೇರಿ ತೀರ್ಥೋಧ್ಭವದ  ನೆಪಮಾಡಿಕೊಂಡು ಕೊಡಗಿನಲ್ಲಿ ರಾಜಕೀಯ ಮಾಡುತ್ತಿದೆ ಎಂದು ತಮ್ಮ ಆಕ್ರೋಶ ಹೊರಹಾಕಿದೆ.


ಕೋಟ ಶ್ರೀನಿವಾಸ ಪೂಜಾರಿ ಅವರು ಹೊರಗಿನವರಾದರೂ ಅವರು ಹಿರಿಯರು ಹಾಗು ಕೊಡಗಿನ ಆಚಾರವಿಚಾರಗಳ ಕುರಿತು ಅರಿವು ಉಳ್ಳವರು, ಅವರು ಹಾಗು ಭಾಜಾಪ ಪಕ್ಷ ಯಾವತ್ತಿಗೂ ಕಾವೇರಿ ಭಕ್ತರ ಪರ, ಮಾತೆಯ ಪರ, ನಿಲ್ಲತ್ತದೆ ಭಕ್ತರಿಗೆ ಯಾವುದೇ ಸಮಸ್ಯೆ ಆಗದ ರೀತಿ ಕ್ರಮ ಕೈಗೊಳ್ಳುತ್ತದೆ. ಎಂದು ಪತ್ರಿಕಾ ಹೇಳಿಕೆಯ ಮೂಲಕ ಗೋಣಿಕೊಪ್ಪಲು ಭಾಜಪ ಇಂದು ಸ್ಪಷ್ಟೀಕರಣ  ನೀಡಿದೆ.

ಪತ್ರಿಕಾ ಹೇಳಿಕೆ ಸಂದರ್ಭ ಭಾ.ಜ.ಪ ಮಂಡಲದ ಪ್ರಮುಖರಾದ ನೆಲ್ಲಿರ ಚಲನ್ ಕುಮಾರ್, ಕುಟ್ಟಂಡ ಅಜಿತ್ ಕರುಂಬಯ್ಯ, ಪುಲಿಯಂಡ ಬೋಪಣ್ಣ, ಕುಪ್ಪಂಡ ಗಿರಿ ಪೂವಣ್ಣ, ಚೆಪ್ಪುಡಿರ ಮಾಚಯ್ಯ ಉಪಸ್ಥಿತರಿದ್ದರು.

Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,