Header Ads Widget

Responsive Advertisement

ಅಸ್ಸಾಂ ಕಾರ್ಮಿಕರ ದಾಖಲೆಗಳನ್ನು ಪರಿಶೀಲನೆ ಮಾಡಲು ಕೊಡಗು ಸಂರಕ್ಷಣಾ ಒಕ್ಕೂಟ ಒತ್ತಾಯ

■ಅಸ್ಸಾಂ ಕಾರ್ಮಿಕರ ದಾಖಲೆಗಳನ್ನು ಪರಿಶೀಲನೆ ಮಾಡಲು ಕೊಡಗು ಸಂರಕ್ಷಣಾ ಒಕ್ಕೂಟ ಒತ್ತಾಯ

●ಇವರಿಗೆ ಜಿಲ್ಲೆಯಲ್ಲಿ ಯಾವುದೇ ದಾಖಲೆಗಳನ್ನು ಮಾಡಿಕೊಡಲು ಮುಂದಾದರೆ ಸಂಘಟಿತ ಹೋರಾಟದ ಎಚ್ಚರಿಕೆ

( ಕೊಡಗು ಸಂರಕ್ಷಣಾ ಒಕ್ಕೂಟದ ಸಂಚಾಲಕ ಚಮ್ಮಟೀರ ಪ್ರವೀಣ್ ಉತ್ತಪ್ಪ )

ಕೊಡಗು ಜಿಲ್ಲೆಗೆ ಅಸ್ಸಾಂ ಕಾರ್ಮಿಕರು ಎಂದು ಉಗ್ರಗಾಮಿ ಸಂಘಟನೆಗಳ ಸದಸ್ಯರು ಹಾಗೂ ಅಪರಾಧ ಹಿನ್ನಲೆಯುಳ್ಳ ವ್ಯಕ್ತಿಗಳು ನುಸುಳಿರುವ ಸಾದ್ಯತೆ ಹೆಚ್ಚಾಗಿದ್ದು ಕೂಡಲೇ ಜಿಲ್ಲೆಯಲ್ಲಿ ಬೀಡುಬಿಟ್ಟಿರುವ ಅಸ್ಸಾಂ ಕಾರ್ಮಿಕರ ದಾಖಲೆಗಳನ್ನು ಪರಿಶೀಲಿಸಿ, ಆಯಾಯ ರಾಜ್ಯದ ಗುಪ್ತಚರ ಇಲಾಖೆಯ ಮೂಲಕ ದಾಖಲೆ ಮರುಪರಿಶೀಲನೆ ಮಾಡಬೇಕಿದೆ ಎಂದು ಕೊಡಗು ಸಂರಕ್ಷಣಾ ಒಕ್ಕೂಟ ಒತ್ತಾಯಿಸಿದೆ.

ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಕೊಡಗು ಸಂರಕ್ಷಣಾ ಒಕ್ಕೂಟದ ಸಂಚಾಲಕ ಚಮ್ಮಟೀರ ಪ್ರವೀಣ್ ಉತ್ತಪ್ಪ ಕೊಡಗಿನಲ್ಲಿ ಕಾರ್ಮಿಕರ ಸಮಸ್ಯೆಗಳಿರುವುದು ನಿಜ, ಆದರೆ ಸಮಸ್ಯೆಗಳಿವೆ ಎಂದು ದಾರಿಯಲ್ಲಿ ಹೋಗುವ ಹೆಮ್ಮಾರಿಯನ್ನು ಕರೆದು ಮನೆಯೊಳಗೆ ಸೇರಿಸಿಕೊಂಡರು ಎಂದಾಗಬಾರದು. ಈಗಾಗಲೇ ಹೊರಜಿಲ್ಲೆಯಲ್ಲಿ ಇವರಿಂದ ಸಸ್ಯೆಗಳು ಆಗಿರುವ ಬಗ್ಗೆ ವರದಿಯಾಗಿದ್ದು, ಜಿಲ್ಲೆಯಲ್ಲಿ ಸಮಸ್ಯೆಗಳು ಆಗುವ ಮೊದಲು ನಾವು ಎಚ್ಚೆತ್ತುಕೊಳ್ಳದಿದ್ದರೆ ಮುಂದೆ ಅನಾಹುತ ಕಟ್ಟಿಟ್ಟಿರುವ ಬುತ್ತಿ. ಈ ಕೂಡಲೇ ಜಿಲ್ಲಾಡಳಿತ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಜನಪ್ರತಿನಿಧಿಗಳು ಎಚ್ಚೆತ್ತುಕೊಳ್ಳಬೇಕಿದೆ ಎಂದು ಅವರು ಒತ್ತಾಯಿಸಿದ್ದಾರೆ.

ಜಿಲ್ಲೆಯಲ್ಲಿ ಸ್ಥಳೀಯ ಕೂಲಿಯಾಳುಗಳ ಸಂಬಳ ಗಗನಕ್ಕೇರಿದ್ದು, ಮಧ್ಯವರ್ತಿಗಳ ಹಾವಳಿಯಿಂದ ಕಾಫಿ ಬೆಳೆಗಾರ ಸೇರಿದಂತೆ ಕೃಷಿಕರು ತತ್ತರಿಸಿದ್ದಾರೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಕಳೆದ ಹತ್ತು ವರ್ಷಗಳಿಂದ ನಿಂತ ನಿರಾಗಿರುವ ಕಾಫಿಯ ದರದಲ್ಲಿ ಯಾವುದೇ ಹೆಚ್ಚಳ ಕಾಣುತ್ತಿಲ್ಲ, ಆದರೆ ಅದರ ನಿರ್ವಹಣೆಯ ದರ ಮಾತ್ರ ದುಪ್ಪಟ್ಟು ಏರಿಕೆಯಾಗಿದೆ. ಇನ್ನೂ ಕರಿಮೆಣಸಿನ ಬೆಲೆ ಪಾತಾಳಕ್ಕೆ ಕುಸಿದಿದ್ದು, ಏಲಕ್ಕಿ ಲಕ್ಕಿ ಇದ್ದಂತಿಲ್ಲ ಎಂಬಂತಾಗಿದೆ, ಭತ್ತ ಬೆಳೆಯುವ ಪ್ರದೇಶ ಸಂಪೂರ್ಣವಾಗಿ ಕ್ಷೀಣಿಸುತ್ತಿದ್ದು, ಕೃಷಿಯಿಂದ ಬೆಳೆಗಾರ ನಷ್ಟವನ್ನು ಅನುಭವಿಸುತ್ತಿದ್ದಾನೆ ಎಂಬ ದೂರು ಅಲ್ಲಲ್ಲಿ ಕೇಳಿಬರುತ್ತಿದೆ ಮಾತ್ರವಲ್ಲ ಇದು ವಾಸ್ತವ ಕೂಡ. ಈ ನಿಟ್ಟಿನಲ್ಲಿ ಸಮಸ್ಯೆಯನ್ನು ಸರಿದೂಗಿಸಲು ಹಾಗೂ ಕೆಲಸದಾಳುಗಳ ಸಮಸ್ಯೆಗೆ ಪರ್ಯಾಯವಾಗಿ ಹೊರಜಿಲ್ಲೆ, ಹೊರರಾಜ್ಯಗಳ ಕೂಲಿ ಕಾರ್ಮಿಕರಿಗೆ ಇಲ್ಲಿನ ಬೆಳೆಗಾರ ಅವಲಂಬಿತರಾಗಿರುವುದರಲ್ಲಿ ತಪ್ಪೇನಿಲ್ಲಾ. ಆದರೆ ಇತ್ತೀಚ್ಚಿನ ದಿನಗಳಲ್ಲಿ ತಂಡೋಪತಂಡವಾಗಿ ಯಾವುದೇ ಮುಂಜಾಗ್ರತೆ ಕ್ರಮವನ್ನು ಪಾಲಿಸದೆ, ದಾಖಲೆಗಳನ್ನು ಪರಿಶೀಲಿಸದೆ ಜಿಲ್ಲೆಯ ಗಡಿಯೊಳಗೆ ಬರುತ್ತಿರುವ ಹೊರರಾಜ್ಯಗಳ ಕಾರ್ಮಿಕರಿಂದ ದೇಶದ ಭದ್ರತೆಗೆ ಮುಂದೆ ತೊಡಕ್ಕಾಗಬಹುದು. ಹಾಗೂ ಜಿಲ್ಲೆಯಲ್ಲಿ ಇದೀಗ ಭಯದ ವಾತಾವರಣ ಕೂಡ ಸೃಷ್ಟಿಯಾಗಿದೆ ಎಂದರೆ ತಪ್ಪಲ್ಲ. ಅಸ್ಸಾಂ ಕಾರ್ಮಿಕರ ಸೋಗಿನಲ್ಲಿ ಬಾಂಗ್ಲಾ, ರೋಹಿಂಗ್ಯಾ ಸೇರಿದಂತೆ ಪಾಕಿಸ್ತಾನದ ನಂಟಿರುವ ಉಗ್ರಸಂಘಟನೆಗಳ ಪ್ರಮುಖರು ಕೊಡಗಿನ ಕಾಫಿತೋಟಗಳಲ್ಲಿ ಬೀಡುಬಿಟ್ಟಿರುವ ಸಾದ್ಯತೆಗಳನ್ನು ದೂರತಳ್ಳುವಂತಿಲ್ಲ ಎಂದು ಸಂಘಟನೆ ಆರೋಪಿಸಿದೆ.

ಈ ಹಿಂದೊಮ್ಮೆ ಉಗ್ರಸಂಘಟನೆಯೊಂದರ ನಾಯಕ ಅಬ್ದುಲ್ ನಾಸರ್ ಮದನಿಯಂತವರೇ ಕೊಡಗಿನ ಕಾಫಿತೋಟಗಳಲ್ಲಿ ಆಶ್ರಯ ಪಡೆದು ವಿವಿಧ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದರು, ಹೀಗಿರುವಾಗ ಯಾವುದೇ ಮೂಲ ದಾಖಲಾತಿಗಳನ್ನು ಪರಿಶೀಲಿಸದೆ ಪ್ರತಿನಿತ್ಯ ಸಾವಿರಾರು ಸಂಖ್ಯೆಯಲ್ಲಿ ಬರುತ್ತಿರುವ ಹೊರರಾಜ್ಯದ ಕಾರ್ಮಿಕರಿಂದ ಯಾವಾಗ ಎಲ್ಲಿ ಅಪಾಯ ಕಾದಿದೆ ಎಂದು ಹೇಳಲು ಸಾದ್ಯವಿಲ್ಲ. ಕಮಿಷನ್ ಆಸೆಗಾಗಿ ಮಧ್ಯವರ್ತಿಗಳು ಇವರನ್ನು ತಂದು ಜಿಲ್ಲೆಯ ಕಾಫಿತೋಟಗಳಿಗೆ ಬಿಡುತ್ತಿದ್ದು, ಒಬ್ಬ ಕಾರ್ಮಿಕನ ತಲೆಯ ಮೇಲೆ ಇಂತಿಷ್ಟು ಕಮಿಷನ್ ಪಡೆಯುವುದಷ್ಟೇ ಈ ಮಧ್ಯವರ್ತಿಗಳ ಕೆಲಸವಾಗಿದೆ. ನಂತರ ಯಜಮಾನನಿಗೂ ಮಧ್ಯವರ್ತಿಗಳಿಗೂ ಯಾವುದೇ ಸಂಬಂಧ ಇರುವುದಿಲ್ಲ. ಮುಂದೊಂದು ದಿವಸ ಇವರಿಂದ ಏನಾದರೂ ತೊಂದರೆಯಾದರೆ ಮಾಲಿಕನೇ ನೇರ ಹೊಣೆಗಾರನಾಗುತ್ತಾನೆ ಹಾಗೂ ಅನಾಹುತಕ್ಕೆ ಬಾರಿ ದಂಡ ತೆರಬೇಕಾಗುತ್ತೆ. ಈಗಾಗಲೇ ಅಸ್ಸಾಂ ಕಾರ್ಮಿಕರು ಎನ್ನಲಾಗುವ ಇವರಿಗೆ ಕೆಲವರು ಇಲ್ಲಿನ ದಾಖಲೆಗಳನ್ನು ಮಾಡಿಕೊಟ್ಟಿದ್ದಾರೆ ಎಂಬ ಗುಸುಗುಸು ಪ್ರಾರಂಭವಾಗಿದೆ. ಮೊದಮೊದಲು ಕಡಿಮೆ ಸಂಬಳಕ್ಕೆ ಬಂದ ಇವರು ಇದೀಗ ಹೆಚ್ಚಿನ ಸಂಬಳ ಕೊಡಿ ಇಲ್ಲದಿದ್ದರೆ ಬೇರೆ ಕಡೆ ಹೋಗುತ್ತೇವೆ ಎನ್ನುತ್ತಿದ್ದಾರೆ. ಜೊತೆಗೆ ಜಿಲ್ಲೆಯ ವಿವಿಧೆಡೆ ವ್ಯಾಪಾರ ವಹಿವಾಟಿಗೂ ಮುಂದಾಗಿದ್ದಾರೆ. ಪೂರ್ವಾಪರ ವಿಚಾರಿಸದೆ ಇವರಿಗೆ ಪ್ರಮುಖ ಸಂಘಟನೆಯೊಂದರೆ ಬೆಂಬಲವು ದೊರೆತಿದೆ. ಆ ಸಂಘಟನೆ ಕೂಡ ಕಣ್ಣುಮುಚ್ಚಿಕೊಂಡು ಅಸ್ತು ಎಂದಿದೆ ಹೊರತು ಇವರು ಯಾರು ಎಲ್ಲಿಂದ ಬಂದರು ಎಂಬ ಬಗ್ಗೆ ಮಾಹಿತಿಯನ್ನು ಕಲೆಹಾಕಿಲ್ಲ, ಹೀಗಿರುವಾಗ ಆ ಸಂಘಟನೆಯ ಉದ್ದೇಶವೇನು ಎಂದು ಗೊತ್ತಾಗುತ್ತಿಲ್ಲ. ಯಾವುದೇ ಕಾರಣಕ್ಕೂ ಇವರಿಗೆ ಸ್ಥಳೀಯ ದಾಖಲೆಗಳನ್ನು ಮಾಡಿಕೊಡಬಾರದು, ಮಾಡಿಕೊಡಲು ಮುಂದಾದರೆ ಎಲ್ಲಾ ಸಂಘ ಸಂಸ್ಥೆ ಹಾಗೂ ವಿವಿಧ ಸಮಾಜಗಳನ್ನು ಒಗ್ಗೂಡಿಸಿ ಹೊರಾಟದ ಹಾದಿ ಹಿಡಿಯಬೇಕಾಗುತ್ತದೆ ಎಂದು ಸಂಘಟನೆ ಎಚ್ಚರಿಸಿದೆ. 

ಈ ಕೂಡಲೇ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಜಿಲ್ಲೆಯ ಕಾಫಿತೋಟಗಳಲ್ಲಿ ಬೀಡುಬಿಟ್ಟಿರುವ ಅಸ್ಸಾಂ ಕಾರ್ಮಿಕರ ಸಂಪೂರ್ಣ  ದಾಖಲೆಗಳನ್ನು ತೋಟದ ಮಾಲಿಕರ ಸಹಾಯದಿಂದ ತರಿಸಿಕೊಂಡು ಈ ದಾಖಲೆಗಳನ್ನು ಕ್ರೋಢೀಕರಿಸಿ ಆಯಾಯ ರಾಜ್ಯದ (ಅಸ್ಸಾಂ) ಗುಪ್ತಚರ ಇಲಾಖೆಯ ಮೂಲಕ ಕ್ರಾಸ್ ಚೆಕ್ ಅಂದರೆ ದಾಖಲಾತಿ ಸರಿ ಇದೆಯಾ ಇಲ್ಲ ನಕಲಿ ದಾಖಲೆಗಳೇ ಎಂದು ಮರುಪರಿಶೀಲನೆ ಮಾಡಬೇಕಿದೆ. ಇದೀಗ ಮಾಲಿಕರು ಪಡೆದಿರುವ ಹಲವಾರು ದಾಖಲೆಗಳು ನಕಲಿ ಇದೆ ಎಂಬ ಬಗ್ಗೆ  ಮಾಹಿತಿ ಹೊರಬರುತ್ತಿದ್ದು, ಬಹುತೇಕ ಅಸ್ಸಾಂ ಕಾರ್ಮಿಕರು ಎನ್ನಲಾಗುವ ಇವರು ಮಾತನಾಡುವಾಗ ಬಾಂಗ್ಲಾ ಮಾತನಾಡುತ್ತಾರೆ ಎಂದು ಕಾಫಿತೋಟದ ಮಾಲಿಕರೇ ಹೇಳುತ್ತಾರೆ. ಹೀಗಿರುವಾಗ ಅಸ್ಸಾಮಿಗಳು ಯಾರು ಬಾಂಗ್ಲಾ , ರೋಹಿಂಗ್ಯಾ ಅಥವಾ ಪಾಕಿಸ್ತಾನಿಯರು ಯಾರು ಎನ್ನುವುದೇ ಯಕ್ಷ ಪ್ರಶ್ನೆಯಾಗಿದೆ. ಅನಾಹುತಗಳು ಸಂಬವಿಸುವ ಮೊದಲು ಎಚ್ಚೆತ್ತುಕೊಳ್ಳಬೇಕಿದ್ದು, ಈಗಾಗಲೇ ಕೆಲವು ನೆರೆಮನೆಯ ಗಲಾಟೆಗಳಿಗೆ ಇವರನ್ನು ಬಳಕೆ ಮಾಡಿಕೊಳ್ಳುತ್ತಿದ್ದು, ಮುಂದೊಂದು ದಿವಸ ಇವರಿಗೆ ತಿರುಗುಬಾಣವಾಗಲಿದೆ. ಪ್ರತಿನಿತ್ಯ ನೂರಾರು ಸಾವಿರಾರು ಸಂಖ್ಯೆಯಲ್ಲಿ ಬರುತ್ತಿರುವ ಕಾರ್ಮಿಕರ ದಾಖಲೆಗಳನ್ನು ಗಡಿಯಲ್ಲಿಯೇ ಪರಿಶೀಲಿಸಬೇಕಿದೆ, ದಾಖಲೆ ಸರಿ ಇಲ್ಲದಿದ್ದರೆ ಅಥವಾ ಕರೆದುಕೊಂಡು ಹೋಗುವ ಮಾಲಿಕರ ಉಪಸ್ಥಿತಿ ಇಲ್ಲದಿದ್ದರೆ ಅಲ್ಲಿಂದಲೇ ವಾಪಾಸು ಕಳುಹಿಸಬೇಕಿದೆ ಮತ್ತು ಈಗಾಗಲೇ ಕೊರೋನ ಕಣ್ಣಾಮುಚ್ಚಾಲೆ ಆಡುತ್ತಿದ್ದು ಇವರಿಗೆ 72ಗಂಟೆಗಳ ನೆಗೆಟಿವ್ ಸರ್ಟಿಫಿಕೇಟ್ ಕೂಡ ಅಗತ್ಯ ಎಂಬ ಆದೇಶವನ್ನು  ಜಿಲ್ಲಾಡಳಿತ ಹಾಗೂ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳು ಹೊರಡಿಸಬೇಕಿದೆ. ಈಗಾಗಲೇ ನಮ್ಮ ಸಂಘಟನೆ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಟಾಧಿಕಾರಿಯವರಿಗೆ ಮೌಖಿಕವಾಗಿ ಮನವಿಯನ್ನು ಮಾಡಿಕೊಂಡಿದ್ದು, ಸದ್ಯದಲ್ಲಿಯೇ ಲಿಖಿತವಾಗಿ ಮನವಿಯನ್ನು ನೀಡಲಿದ್ದೇವೆ ಎಂದು ಸಂಘಟಕರು ಮಾಹಿತಿ ನಈಡಿದ್ದಾರೆ. ಜಿಲ್ಲೆಯ ಜನರು ಕೂಡ ಎಚ್ಚೆತ್ತುಕೊಳ್ಳಬೇಕಾಗಿದ್ದು ಇಲಾಖೆಯೊಂದಿಗೆ ಸಹಕರಿಸಬೇಕಿದೆ, ಇಲ್ಲದಿದ್ದರೆ ಕೊಡಗು ಮತ್ತೊಂದು ಅಫಘಾನಿಸ್ಥಾನವಾಗಲಿದೆ. ಇದಕ್ಕೆ ಅವಕಾಶ ಕೊಡದೆ ಸ್ಥಳೀಯ ಕೂಲಿಯಾಳುಗಳಿಗೆ ಈಗಿನ ಪರಿಸ್ಥಿತಿಯಲ್ಲಿ ಸಂಬಳವನ್ನು ಪರಿಷ್ಕರಿಸಿ ಏಕಾ ರೂಪದ ಸಂಬಳವನ್ನು ನಿಗದಿ ಮಾಡಬೇಕಿದೆ ಹಾಗೂ ಹೊರ ರಾಜ್ಯದ ಕಾರ್ಮಿಕರನ್ನು ಆದಷ್ಟು ದೂರವಿಡಲು ನೋಡಬೇಕಿದೆ ಇಲ್ಲದಿದ್ದರೆ ಮುಂದೆ ಕೊಡಗಿನಲ್ಲಿ ಸಾಮಾಜಿಕ ಅಸಮತೋಲನ ಉಂಟಾಗುವ ಸಾದ್ಯತೆ ಕೂಡ ಹೆಚ್ಚು. ಅನಾಹುತ ನಡೆಯುವ ಮೊದಲು ಎಚ್ಚೆತ್ತುಕೊಳ್ಳಬೇಕಿದೆ ಎಂದು ಕೊಡಗು ಸಂರಕ್ಷಣಾ ಒಕ್ಕೂಟದ ಸಂಚಾಲಕ ಚಮ್ಮಟೀರ ಪ್ರವೀಣ್ ಉತ್ತಪ್ಪ ಒತ್ತಾಯಿಸಿದ್ದಾರೆ.

Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,