Header Ads Widget

ಸರ್ಚ್ ಕೂರ್ಗ್ ಮೀಡಿಯ

ವಿದ್ಯುತ್ ನಷ್ಟ ತಗ್ಗಿಸುವ ನಿಟ್ಟಿನಲ್ಲಿ ಡಿಸ್ಕಾಂಗಳ ಇಂಧನ ಲೆಕ್ಕಾಚಾರ ಕಡ್ಡಾಯ ಮಾಡಿದ ಇಂಧನ ಸಚಿವಾಲಯ

ವಿದ್ಯುತ್ ನಷ್ಟ ತಗ್ಗಿಸುವ ನಿಟ್ಟಿನಲ್ಲಿ ಡಿಸ್ಕಾಂಗಳ ಇಂಧನ ಲೆಕ್ಕಾಚಾರ ಕಡ್ಡಾಯ ಮಾಡಿದ ಇಂಧನ ಸಚಿವಾಲಯ


ವಿದ್ಯುತ್ ವಲಯದಲ್ಲಿ ನಡೆಯುತ್ತಿರುವ ಸುಧಾರಣೆಗಳ ಅಡಿಯಲ್ಲಿ ಒಂದು ಪ್ರಮುಖ ಕ್ರಮವಾಗಿ, ನಿಯಮಿತವಾಗಿ ಇಂಧನ ಲೆಕ್ಕಾಚಾರ ಕೈಗೊಳ್ಳುವಂತೆ ವಿದ್ಯುತ್ ವಿತರಣಾ ಕಂಪನಿಗಳಿಗೆ ವಿದ್ಯುತ್ ಸಚಿವಾಲಯವು ಇಂದು ಆದೇಶಿಸಿದೆ. ಈ ಸಂಬಂಧ ಇಂಧನ ಸಂರಕ್ಷಣೆ (ಇಸಿ) ಕಾಯಿದೆ, 2001 ರ ಅಡಿಯಲ್ಲಿ, ವಿದ್ಯುತ್ ಸಚಿವಾಲಯದ ಅನುಮೋದನೆಯೊಂದಿಗೆ, ಇಂಧನ ದಕ್ಷತೆ ಸಂಸ್ಥೆ -ಬ್ಯೂರೋ ಆಫ್ ಎನರ್ಜಿ ಎಫೀಶಿಯೆನ್ಸಿ (ಬಿಇಇ) ಯಿಂದ ಆದೇಶ ನೀಡಲಾಗಿದೆ.  ಈ ಅಧಿಸೂಚನೆ ತ್ರೈಮಾಸಿಕಕ್ಕೆ ಒಮ್ಮೆ ಡಿಸ್ಕಾಂಗಳು ಪ್ರಮಾಣೀಕೃತ ಇಂಧನ ವ್ಯವಸ್ಥಾಪಕರ ಮೂಲಕ 60 ದಿನಗಳ ಒಳಗಾಗಿ ಇಂಧನ ಲೆಕ್ಕಾಚಾರ ಮಾಡುವುದನ್ನು ಕಡ್ಡಾಯ ಮಾಡುತ್ತದೆ. ಸ್ವತಂತ್ರ ಮಾನ್ಯತೆ ಪಡೆದ ಇಂಧನ ಲೆಕ್ಕ ಪರಿಶೋಧಕರಿಂದ ವಾರ್ಷಿಕ ಇಂಧನ ಲೆಕ್ಕಪರಿಶೋಧನೆಯೂ ನಡೆಯುತ್ತದೆ. ಈ ಎರಡೂ ವರದಿಗಳನ್ನು ಸಾರ್ವಜನಿಕವಾಗಿ ಪ್ರಕಟಿಸಲಾಗುವುದು. ಇಂಧನ ಲೆಕ್ಕಚಾರ ವರದಿಗಳು ವಿವಿಧ ವರ್ಗದ ಗ್ರಾಹಕರಿಂದ ವಿದ್ಯುತ್ ಬಳಕೆ ಮತ್ತು ವಿವಿಧ ಪ್ರದೇಶಗಳಲ್ಲಿ ಪ್ರಸರಣ ಮತ್ತು ವಿತರಣೆಯ ನಷ್ಟದ ಬಗ್ಗೆ ವಿವರವಾದ ಮಾಹಿತಿಯನ್ನು ಒದಗಿಸುತ್ತದೆ. ಇದು ಹೆಚ್ಚಿನ ನಷ್ಟಗಳು ಮತ್ತು ಕಳ್ಳತನದ ಪ್ರದೇಶಗಳನ್ನು ಗುರುತಿಸುತ್ತದೆ ಮತ್ತು ಸರಿಪಡಿಸುವ ಕ್ರಮಗಳನ್ನೂ ಸಕ್ರಿಯಗೊಳಿಸುತ್ತದೆ. ಈ ಕ್ರಮಗಳಿಂದ ನಷ್ಟ ಮತ್ತು ಕಳ್ಳತನಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳ ಮೇಲೆ ಹೊಣೆಗಾರಿಕೆಯನ್ನು ನಿಗದಿಪಡಿಸಲು ಸಹ ಸಾಧ್ಯವಾಗುತ್ತದೆ. ಈ ದತ್ತಾಂಶದಿಂದಾಗಿ ಡಿಸ್ಕಾಂಗಳು ತಮ್ಮ ವಿದ್ಯುತ್ ನಷ್ಟವನ್ನು ತಗ್ಗಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಸಾಧ್ಯವಾಗಿಸುತ್ತದೆ. ಡಿಸ್ಕಾಂಗಳು ಸೂಕ್ತ ಮೂಲಸೌಕರ್ಯ ಉನ್ನತೀಕರಣದ ಜೊತೆಗೆ ಬೇಡಿಕೆಯ ಕಡೆಯ ನಿರ್ವಹಣೆ (ಡಿಎಸ್.ಎಂ.) ಪ್ರಯತ್ನಗಳನ್ನು ಪರಿಣಾಮಕಾರಿಯಾಗಿ ಯೋಜಿಸಲು ಸಾಧ್ಯವಾಗುತ್ತದೆ. ಈ ಉಪಕ್ರಮವು ನಮ್ಮ ಪ್ಯಾರಿಸ್ ಒಪ್ಪಂದದ ಗುರಿಗಳನ್ನು ಪೂರೈಸುವಲ್ಲಿ ಭಾರತದ ಹವಾಮಾನ ಕ್ರಮಗಳಿಗೆ ಮತ್ತಷ್ಟು ಕೊಡುಗೆ ನೀಡುತ್ತದೆ.

ಈ ನಿಬಂಧನೆಗಳನ್ನು ಇಂಧನ ಸಂರಕ್ಷಣಾ ಕಾಯ್ದೆ, 2001ರ ಅಡಿಯಲ್ಲಿ ಹೊರಡಿಸಲಾಗಿದೆ, ವಿತರಣಾ ವಲಯವನ್ನು ದಕ್ಷಗೊಳಿಸಿ ನಷ್ಟಗಳನ್ನು ಕಡಿಮೆ ಮಾಡುವ ಒಟ್ಟಾರೆ ಉದ್ದೇಶದೊಂದಿಗೆ ಡಿಸ್ಕಾಂಗಳ ಆರ್ಥಿಕ ಕಾರ್ಯಸಾಧ್ಯತೆಯತ್ತ ಸಾಗುವವಂತೆ ಮಾಡುತ್ತದೆ. ಇಂಧನ ಲೆಕ್ಕಪತ್ರ ಮತ್ತು ಲೆಕ್ಕಪರಿಶೋಧನಾ ವರದಿಗಳನ್ನು ತಯಾರಿಸುವಲ್ಲಿ ಪರಿಣತಿ ಹೊಂದಿರುವ ರಾಷ್ಟ್ರೀಯ ಮಾನ್ಯತೆ ಪಡೆದ ಇಂಧನ ಲೆಕ್ಕಪರಿಶೋಧಕರು ಮತ್ತು ಇಂಧನ ವ್ಯವಸ್ಥಾಪಕರ ಸಂಗ್ರಹವನ್ನು ಬಿಇಇ ಪ್ರಮಾಣೀಕರಿಸುತ್ತದೆ, ನಷ್ಟ ಕಡಿತ ಮತ್ತು ಇತರ ತಾಂತ್ರಿಕ ಕ್ರಮಗಳಿಗೆ ಶಿಫಾರಸುಗಳನ್ನು ಸರಿಯಾಗಿ ಒದಗಿಸುತ್ತದೆ. ಸಾರ್ವಜನಿಕ ಪ್ರತಿಕ್ರಿಯೆಗಳನ್ನು ಪಡೆಯಲು ಏಪ್ರಿಲ್ 2021ರಲ್ಲಿ ಮೇಲೆ ಹೇಳಿದ ನಿಬಂಧನೆಗಳನ್ನು ಮೊದಲೇ ಪ್ರಕಟಿಸಲಾಗಿದೆ ಮತ್ತು ನಂತರ ವಿದ್ಯುತ್ ಸಚಿವಾಲಯವು ಅಂತಿಮವಾಗಿ ಈ ನಿಬಂಧನೆಗಳನ್ನು ಹೊರಡಿಸುವ ಮೊದಲು ವಿವಿಧ ಬಾಧ್ಯಸ್ಥರೊಂದಿಗೆ ವಿವರವಾದ ಚರ್ಚೆಗಳನ್ನೂ ನಡೆಸಿದೆ.

ಸೆಪ್ಟೆಂಬರ್ 2020ರಲ್ಲಿ, ಪ್ರತ್ಯೇಕ ಅಧಿಸೂಚನೆಯ ಮೂಲಕ, ಎಲ್ಲಾ ವಿದ್ಯುತ್ ವಿತರಣಾ ಕಂಪನಿಗಳನ್ನು ಇಸಿ ಕಾಯ್ದೆಯಡಿ ನಿಯೋಜಿತ ಗ್ರಾಹಕರು (ಡಿಸಿಗಳು) ಎಂದು ಅಧಿಸೂಚಿಸಲಾಯಿತು. ಇಡೀ ವಿತರಣಾ ವ್ಯವಸ್ಥೆ ಮತ್ತು ಚಿಲ್ಲರೆ ಪೂರೈಕೆ ವ್ಯವಹಾರದ ಮೇಲೆ ಇಂಧನ ಲೆಕ್ಕಪರಿಶೋಧನೆಯ ಸಂಭಾವ್ಯ ಪ್ರಯೋಜನಗಳಿಂದಾಗಿ, ಭಾರತದಾದ್ಯಂತ ಎಲ್ಲಾ ವಿತರಣಾ ಉಪಯುಕ್ತತೆಗಳಿಗೆ ಬದ್ಧರಾಗಿರಲು ಮತ್ತು ಕ್ರಮಗಳನ್ನು ರೂಪಿಸಲು ಸಮಗ್ರ ಮಾರ್ಗಸೂಚಿಗಳು ಮತ್ತು ಚೌಕಟ್ಟಿನ ಗುಂಪನ್ನು ಅಭಿವೃದ್ಧಿಪಡಿಸುವುದು ಅನಿವಾರ್ಯವಾಗಿತ್ತು.

ನವೀಕರಿಸಬಹುದಾದ ಇಂಧನ ಉತ್ಪಾದನೆ ಮತ್ತು ಮುಕ್ತ ಪ್ರವೇಶ ಗ್ರಾಹಕರು, ಮತ್ತು ಅಂತಿಮ ಗ್ರಾಹಕರಿಂದ ಇಂಧನ ಬಳಕೆ ಸೇರಿದಂತೆ ಜಾಲದ ವಿತರಣಾ ಪರಿಧಿಯಲ್ಲಿ ವಿವಿಧ ವೋಲ್ಟೇಜ್ ಹಂತಗಳಲ್ಲಿ ಎಲ್ಲಾ ಇಂಧನ ಒಳಹರಿವಿನ ಲೆಕ್ಕವನ್ನು ಇಂಧನ ಲೆಕ್ಕಾಚಾರ ಸೂಚಿಸುತ್ತದೆ. ನಿಯಮಿತವಾಗಿ ಇಂಧನ ಲೆಕ್ಕಾಚಾರ ಮತ್ತು ನಂತರದ ವಾರ್ಷಿಕ ಇಂಧನ ಲೆಕ್ಕಪರಿಶೋಧನೆ, ಹೆಚ್ಚಿನ ನಷ್ಟ ಮತ್ತು ಕಳ್ಳತನದ ಕ್ಷೇತ್ರಗಳನ್ನು ಗುರುತಿಸಲು ಸಹಾಯ ಮಾಡುತ್ತದೆ ಮತ್ತು ಆ ಮೂಲಕ ಸರಿಪಡಿಸಲು ಕ್ರಮಗಳನ್ನು ಕೈಗೊಳ್ಳುವ ಪ್ರಯತ್ನಗಳತ್ತ ಕೇಂದ್ರೀಕರಿಸುತ್ತದೆ. ಇಂದು ಹೊರಡಿಸಲಾದ ನಿಬಂಧನೆಗಳು ವಿದ್ಯುತ್ ವಿತರಣಾ ಕಂಪನಿಗಳಿಗೆ ವಾರ್ಷಿಕ ಇಂಧನ ಲೆಕ್ಕಪರಿಶೋಧನೆ ಮತ್ತು ತ್ರೈಮಾಸಿಕ ನಿಯಮಿತ ಇಂಧನ ಲೆಕ್ಕಾಚಾರಕ್ಕೆ ಅಗತ್ಯವಾದ ಪೂರ್ವ ಅಗತ್ಯ ಮತ್ತು ವರದಿ ಮಾಡುವ ಅವಶ್ಯಕತೆಗಳೊಂದಿಗೆ ಪೂರೈಸಲು ಬಹುನಿರೀಕ್ಷಿತ ವಿಶಾಲ ಚೌಕಟ್ಟನ್ನು ಒದಗಿಸುತ್ತದೆ.

ನಿಯಮಿತ ಇಂಧನ ಲೆಕ್ಕಾಚಾರದ ಮೂಲಕ ಸಾಧಿಸಬೇಕಾದ ಉದ್ದೇಶಗಳೆಂದರೆ:

*ತಾಂತ್ರಿಕ ಮತ್ತು ವಾಣಿಜ್ಯಾತ್ಮಕ ನಷ್ಟಗಳಾದ್ಯಂತ ವಿಂಗಡಿಸಲಾದ ವಿದ್ಯುತ್ ವಿತರಣಾ ವ್ಯವಸ್ಥೆಯಲ್ಲಿನ ನೈಜವಾದ ನಷ್ಟಗಳನ್ನು ಪ್ರಮಾಣೀಕರಿಸಲು ಮತ್ತು ನಿರ್ಧರಿಸಲು ಸಮಗ್ರ ಇಂಧನ ಲೆಕ್ಕಾಚಾರ ವ್ಯವಸ್ಥೆಯ ಅಭಿವೃದ್ಧಿ.

*ಸೋರಿಕೆ, ಕಳ್ಳತನ,  ವ್ಯರ್ಥ ಅಥವಾ ಅಸಮರ್ಥ ಬಳಕೆಯ ಪ್ರದೇಶಗಳನ್ನು ಗುರುತಿಸಿ, ಆ ಮೂಲಕ ಹೆಚ್ಚಿನ ಪ್ರಸರಣ ಮತ್ತು ವಿತರಣೆ (ಟಿ ಮತ್ತು ಡಿ) ನಷ್ಟಗಳ ಪ್ರಸ್ತುತ ಸವಾಲುಗಳನ್ನು ನಿಭಾಯಿಸಲು ದಾರಿ ಮಾಡಿಕೊಡುತ್ತದೆ.

*ಟಿ ಮತ್ತು ಡಿ ನಷ್ಟಗಳ ನೈಜವಾದ ಮತ್ತು ನ್ಯಾಯಯುತ ಚಿತ್ರಣವನ್ನು ಪಡೆಯಲು ವಿತರಣಾ ವ್ಯವಸ್ಥೆಯ ಸ್ವತಂತ್ರ 3ನೇ ವ್ಯಕ್ತಿಯಿಂದ ಇಂಧನ ಲೆಕ್ಕಪರಿಶೋಧನೆಯನ್ನು ಸಕ್ರಿಯಗೊಳಿಸಿ ಮತ್ತು ಖಚಿತಪಡಿಸಿಕೊಳ್ಳಲು.

*ಆದ್ಯತೆಯ ಕ್ಷೇತ್ರಗಳು / ಗ್ರಾಹಕ ವಿಭಾಗಗಳಲ್ಲಿ ಟಿ ಮತ್ತು ಡಿ ನಷ್ಟವನ್ನು ಕಡಿಮೆ ಮಾಡಲು ಉದ್ದೇಶಿತ ದಕ್ಷತೆ ಸುಧಾರಣಾ ಚಟುವಟಿಕೆಗಳನ್ನು ಕೈಗೊಳ್ಳಲು ವಿತರಣಾ ಉಪಯುಕ್ತತೆಗಳನ್ನು ಸಕ್ರಿಯಗೊಳಿಸಲು.

*ಇಂಧನ ಬಂಡವಾಳ ಹೂಡಿಕೆಗಳಿಗೆ ಆದ್ಯತೆ ನೀಡಲು ಮತ್ತು ಗರಿಷ್ಠ ಫಲಿತಾಂಶಗಳನ್ನು ಸಾಧಿಸಲು ಬಜೆಟ್ ಗೆ ಹೆಚ್ಚು ನಿಖರವಾಗಿ ಸಹಾಯ ಮಾಡಲು ಒಂದು ಆಧಾರವನ್ನು ಒದಗಿಸಲು.

*ಅಗತ್ಯ ಸಾಮರ್ಥ್ಯ ಸೇರ್ಪಡೆಗಾಗಿ ಜಾಲದ ಓವರ್ ಲೋಡ್ ವಿಭಾಗಗಳನ್ನು ಗುರುತಿಸಲು.

Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,