Header Ads Widget

ಸರ್ಚ್ ಕೂರ್ಗ್ ಮೀಡಿಯ

ಭತ್ತದಲ್ಲಿ ಗಂಧೀ ತೆನೆ ತಿಗಣೆ ಕೀಟದ ಭಾಧೆ - ಗೋಣಿಕೊಪ್ಪಲು ಕೃಷಿ ವಿಜ್ಞಾನ ಕೇಂದ್ರ ಸಲಹೆ

ಭತ್ತದಲ್ಲಿ ಗಂಧೀ ತೆನೆ ತಿಗಣೆ ಕೀಟದ ಭಾಧೆ -  ಗೋಣಿಕೊಪ್ಪಲು ಕೃಷಿ ವಿಜ್ಞಾನ ಕೇಂದ್ರ ಸಲಹೆ:


ಕೊಡಗು ಜಿಲ್ಲೆಯಾದ್ಯಂತ ಬೆಳೆದಿರುವ ಭತ್ತ ಕದಿರುದಾಟಿ ಕಾಳು ಕಟ್ಟುತ್ತಿರುವ ಈ ಸಮಯದಲ್ಲಿ ಗಂಧೀ ತೆನೆ ತಿಗಣೆ ಕೀಟದ ಭಾದೆ ತೀವ್ರ ಗತಿಯಲ್ಲಿ ಜಿಲ್ಲೆಯಾದ್ಯಂತ   ಕಂಡುಬಂದಿದ್ದು, ಇದರ ಹತೋಟಿಗೆ ಕೃಷಿ ವಿಜ್ಞಾನ ಕೇಂದ್ರದ ಸಸ್ಯ ಸಂರಕ್ಷಣಾ ತಜ್ಞ ಡಾ. ವೀರೆಂದ್ರ ಕುಮಾರ್ ರವರು ಕೆಲವೂಂದು ಸಲಹೆಗಳನ್ನು ನೀಡಿದ್ದಾರೆ.

ಕೀಟ ಭಾದೆಯ ಲಕ್ಷಣಗಳು:

ಪ್ರೌಢ ಮತ್ತು ಅಪ್ಸರೆ ಕೀಟಗಳು ಹಾಲು ತುಂಬಿದ ಕಾಳುಗಳಿಂದ ರಸವನ್ನು ಹೀರುತ್ತವೆ. ಇದರಿಂದ ಕಾಳುಗಳು ಜೊಳ್ಳಾಗಿ ಕಂದುಬಣ್ಣಕ್ಕೆ ತಿರುಗುತ್ತವೆ. ಹಾನಿಗೊಳಗಾದ ಭತ್ತದ ಹುಲ್ಲು ಸಹ ದುರ್ವಾಸನೆಯಿಂದ ಕೂಡಿರುತ್ತದೆ. ಈ ಕೀಟದ ಮರಿ ತಿಗಣೆಗಳು ಕೆಲವು ದಿನಗಳವರೆಗೆ ಬದುವಿನ ಮೇಲಿರುವ ಕಳೆಗಳ ಮೇಲೆ ವಾಸಿಸುತ್ತಿದ್ದು, ಭತ್ತವು ಹೂ ಬಿಡುವ ಸಮಯಕ್ಕೆ ಬೆಳೆಯನ್ನು ಬಾಧಿಸುತ್ತವೆ. 


ಹತೋಟಿ ಕ್ರಮಗಳು: 

•ಗದ್ದೆಯ ಬದು ಮತ್ತು ಸುತ್ತಮುತ್ತಲಿನ ಪ್ರದೇಶಗಳಿಂದ ಕಳೆ ಮತ್ತು ಇತರೆ ಆಶ್ರಯ ಸಸ್ಯಗಳನ್ನು ತೆಗೆದು ಸ್ವಚ್ಛಯನ್ನು ಕಾಪಾಡಬೇಕು.

•ಕೀಟವಿರುವ ಸೂಚನೆಯನ್ನು ನೋಡಿಕೊಂಡು ಶೇ. 5 ರ 8 ಕೆ.ಜಿ. ಮೆಲಾಥಿಯನ್ ಪುಡಿಯನ್ನು ಪ್ರತೀ ಎಕರೆ ಪ್ರದೇಶಕ್ಕೆ ಧೂಳೀಕರಿಸಬೇಕು. ಅಥವಾ ಒಂದು ಲೀಟರ್ ನೀರಿನಲ್ಲಿ 2.0 ಮಿ.ಲೀ. ಮೆಲಾಥಿಯನ್ ಅಥವಾ 2.0 ಮಿ.ಲೀ. ಕ್ಲೋರೊಪೈರಿಫಾಸ್ ಕೀಟನಾಶಕವನ್ನು ಬೆರಸಿ ಸಿಂಪಡಿಸಬೇಕು.

•ಸಿಂಪರಣೆಯನ್ನು ಬದುಗಳಿಂದ ವೃತ್ತಾಕಾರದಲ್ಲಿ ಪ್ರಾರಂಭಿಸಿ ಗದ್ದೆಯ ಮಧ್ಯಭಾಗಕ್ಕೆ ಕೊನೆಗೊಳಿಸುವುದರಿಂದ ಪರಿಣಾಮಕಾರಿಯಾಗಿ ಕೀಟವನ್ನು ನಿಯಂತ್ರಿಸಬಹುದು.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ

ಪ್ರಧಾನ ವಿಜ್ಞಾನಿ ಮತ್ತು ಮುಖ್ಯಸ್ಥರು

ಭಾ.ಕೃ.ಅ.ಪ- ಕೃಷಿ ವಿಜ್ಞಾನ ಕೇಂದ್ರ

ಗೋಣಿಕೊಪ್ಪಲು, ಕೊಡಗು ಜಿಲ್ಲೆ,   ದೂರವಾಣಿ: 08274-295274

Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,