Header Ads Widget

ಸರ್ಚ್ ಕೂರ್ಗ್ ಮೀಡಿಯ

‘ಕನ್ನಡಕ್ಕಾಗಿ ನಾವು’ ಗೀತಗಾಯನ ಕಾರ್ಯಕ್ರಮ

‘ಕನ್ನಡಕ್ಕಾಗಿ ನಾವು’ ಗೀತಗಾಯನ ಕಾರ್ಯಕ್ರಮ


ಮಡಿಕೇರಿ: ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ವತಿಯಿಂದ ‘ಕನ್ನಡ ರಾಜ್ಯೋತ್ಸವದ ಅಂಗವಾಗಿ ‘ಕನ್ನಡಕ್ಕಾಗಿ ನಾವು’ ಅಭಿಯಾನದ ಸಾಂಸ್ಕತಿಕ ಹಾಗೂ ಬೀದಿ ನಾಟಕ ಜಾಗೃತಿ ಕಾರ್ಯಕ್ರಮವು ಕುಶಾಲನಗರದ ಕೊಡಗು ಜಿಲ್ಲಾ ವಿದ್ಯಾ ಸಾಗರ ಕಲಾ ವೇದಿಕೆ ವತಿಯಿಂದ ಮಂಗಳವಾರ ಜರುಗಿತು. 

ಮಾಲ್ದಾರೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸಮೀರ್, ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕರಾದ ವಿಜಯ್ ಕುಮಾರ್ ಅವರು ಕಂಜರ ನುಡಿಸುವ ಮೂಲಕ ಚಾಲನೆ ನೀಡಿದರು. 

ಗ್ರಾ.ಪಂ.ಸದಸ್ಯರಾದ ಮೊಹಮದ್ದಲಿ, ಶಿಕ್ಷಕರರಾದ ಈಶ್ವರಿ, ಧನ್ಯ, ಅಮರಯ್ಯ, ಪ್ರತಿಮಾ, ಸೋನಿ, ಪ್ರಸನ್ನ ಇತರರು ಇದ್ದರು. ಪ್ರೌಢಶಾಲಾ ಸಹ ಶಿಕ್ಷಕರಾದ ಮಹಮದ್ ಶರೀಫ್ ಅವರು ಮಾತನಾಡಿದರು. 

ಕೊಡಗು ಜಿಲ್ಲಾ ವಿದ್ಯಾಸಾಗರ ಕಲಾವೇದಿಕೆಯ ಇ.ರಾಜು ಮತ್ತು ತಂಡದವರಿಂದ ಕನ್ನಡಕ್ಕಾಗಿ ನಾವು ಅಭಿಯಾನ ಕುರಿತು  ಗೀತಗಾಯನ ಮತ್ತು ಬೀದಿ ನಾಟಕ ಪ್ರದರ್ಶಿಸಲಾಯಿತು.

Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,