Header Ads Widget

ಸರ್ಚ್ ಕೂರ್ಗ್ ಮೀಡಿಯ

ರಾಷ್ಟ್ರೀಯ ಜಾನುವಾರು ಮಿಷನ್ ಯೋಜನೆ; ಸಹಾಯ ಧನಕ್ಕೆ ಅರ್ಜಿ ಆಹ್ವಾನ

ರಾಷ್ಟ್ರೀಯ ಜಾನುವಾರು ಮಿಷನ್ ಯೋಜನೆ; ಸಹಾಯ ಧನಕ್ಕೆ ಅರ್ಜಿ ಆಹ್ವಾನ 


ಮಡಿಕೇರಿ: ಕೇಂದ್ರ ಸರ್ಕಾರದ ವತಿಯಿಂದ 2021-22 ನೇ ಸಾಲಿನಿಂದ 2025-26 ನೇ ಸಾಲಿನವರೆಗೆ ರಾಷ್ಟ್ರೀಯ ಜಾನುವಾರು ಮಿಷನ್ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ. 

ಈ ಯೋಜನೆಯ ಮಾರ್ಗಸೂಚಿಯನ್ವಯ ಪಶುಪಾಲನಾ ಹಾಗೂ ಪಶುವೈದ್ಯಕೀಯ ಸೇವಾ ಇಲಾಖೆ ಬೆಂಗಳೂರು ಇಲ್ಲಿಂದ ಆಸಕ್ತ ವ್ಯಕ್ತಿಗಳು, ರೈತ ಉತ್ಪಾದಕ ಸಂಸ್ಧೆಗಳು, Joint liabilities group, ಸ್ವ-ಸಹಾಯ ಸಂಘಗಳು, Section(8)  ರಡಿ ನೊಂದಾಯಿತ ಕಂಪನಿಗಳಿಂದ ಉದ್ಯಮಶೀಲ ಕಾರ್ಯಕ್ರಮ ಅನುಷ್ಠಾನಗೊಳಿಸಲು ಅರ್ಜಿ ಆಹ್ವಾನಿಸಲಾಗಿದೆ.

ಗ್ರಾಮೀಣ ಕೋಳಿ ಸಾಕಾಣಿಕೆ ವಿಧಾನದಲ್ಲಿ ಒಂದು ಸಾವಿರ ಕಡಿಮೆ ವೆಚ್ಚದ ಕೋಳಿ ತಳಿಗಳ ಮಾತೃ ಕೋಳಿಗಳ ಫಾರಂ ಸ್ಥಾಪನೆ, ಹ್ಯಾಚರಿ, ಮಾತೃ ಕೋಳಿಗಳ ಬ್ರೂಡಿಂಗ್ ಮತ್ತು ಸಾಕಾಣಿಕಾ ಘಟಕ ಸ್ಧಾಪನೆ. 500 ಹೆಣ್ಣು, 25 ಗಂಡು ಕುರಿ/ ಮೇಕೆ ತಳಿ ಸಂವರ್ಧನಾ ಘಟಕ ಸ್ಧಾಪಿಸಿ ಕುರಿ/ ಮೇಕೆ ಮರಿಗಳ ಉತ್ಪಾದನೆ, 100 ಹೆಣ್ಣು, 10 ಗಂಡು ಹಂದಿಗಳ ತಳಿ ಸಂವರ್ಧನಾ ಘಟಕ ಆರಂಭಿಸಿ ಹಂದಿ ಮರಿಗಳ ಉತ್ಪಾದನೆ ಮತ್ತು ಕೊಬ್ಬಿಸುವಿಕೆ, ಮೇವು ಬಿಲ್ಲೆ/ ರಸ ಮೇವು ಘಟಕ ಹಾಗೂ ಟಿ.ಎಂ.ಆರ್. ಘಟಕಗಳನ್ನು ಸ್ಧಾಪಿಸಲು ಉದ್ಯಮಶೀಲರನ್ನು ಪ್ರೋತ್ಸಾಹಿಸಿ ಪಶು ಆಹಾರ ಮತ್ತು ಮೇವಿನ ಉತ್ಪಾದನೆಯನ್ನು ಉತ್ತೇಜಿಸುವುದು ಉದ್ದೇಶವಾಗಿದೆ. 

ಆಸಕ್ತಿಯ ಆಭಿವ್ಯಕ್ತಿಗಳನ್ನು ಪರಿಶೀಲಿಸಿ ಮೌಲ್ಯಮಾಪನ ಮಾಡಿ ಅರ್ಹತೆಗೆ ಅನುಗುಣವಾಗಿ ಅರ್ಹ ಫಲಾನುಭವಿಗಳ ಪಟ್ಟಿ ಸಿದ್ದಪಡಿಸಲಾಗುವುದು. ಅನುದಾನದ ಲಭ್ಯತೆಗೆ ಅನುಗುಣವಾಗಿ ರಾಷ್ಟ್ರೀಯ ಜಾನುವಾರು ಮಿಷನ್ ಯೋಜನೆಯಡಿಯಲ್ಲಿ ಸಹಾಯಧನ ನೀಡಲಾಗುವುದು. 

ಪ್ರತಿ ಯೋಜನೆಗೆ ಉಲ್ಲೇಖಿಸಿರುವ ಸೀಲಿಂಗ್‍ವರೆಗೆ ಶೇ.50 ಬಂಡವಾಳ ಸಹಾಯಧನವನ್ನು ((back ended subsidy) SIDBI   ಯಿಂದ ಎರಡು ಸಮಾನ ಕಂತುಗಳಲ್ಲಿ ಫಲಾನುಭವಿಗಳಿಗೆ ಬಿಡುಗಡೆ ಮಾಡಲಾಗುತ್ತಿದೆ. ಆಸಕ್ತ ಫಲಾನುಭವಿಗಳು ಆನ್‍ಲೈನ್ www.nlm.udyamimitra.in ಮೂಲಕ ಅಗತ್ಯ ದಾಖಲೆಗಳೊಂದಿಗೆ ಅರ್ಜಿ  ಸಲ್ಲಿಸಬಹುದು. ಆಸಕ್ತ ಫಲಾನುಭವಿಗಳು ತಮ್ಮ ಆಸಕ್ತಿಯ ಅಭಿವ್ಯಕ್ತಿಯನ್ನು ಸಲ್ಲಿಸಲು ನವೆಂಬರ್, 10 ರವರೆಗೆ ಅವಧಿ ವಿಸ್ತರಿಸಲಾಗಿದೆ.  

ಹೆಚ್ಚಿನ ಮಾಹಿತಿಗೆ ಸಂಬಂಧಿಸಿದ ಜಿಲ್ಲಾ ಉಪ ನಿರ್ದೇಶಕರು/ ಸಹಾಯಕ ನಿರ್ದೇಶಕರು ತಾಲ್ಲೂಕು ಮಟ್ಟ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯನ್ನು ಸಂಪರ್ಕಿಸಬಹುದು ಎಂದು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪ ನಿರ್ದೇಶಕರಾದ ಡಾ.ಪಿ.ಸುರೇಶ್ ಭಟ್ ಅವರು ತಿಳಿಸಿದ್ದಾರೆ.

Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,