Header Ads Widget

ಸರ್ಚ್ ಕೂರ್ಗ್ ಮೀಡಿಯ

ಮಡಿಕೇರಿ ಕಾಫಿ ಮಂಡಳಿ ವತಿಯಿಂದ ಮಕ್ಕಂದೂರಿನ VSSN ಬ್ಯಾಂಕ್ ನ ಸಭಾಂಗಣದಲ್ಲಿ International Coffee Day ಆಚರಣೆ

ಮಡಿಕೇರಿ ಕಾಫಿ ಮಂಡಳಿ ವತಿಯಿಂದ ಮಕ್ಕಂದೂರಿನ VSSN ಬ್ಯಾಂಕ್ ನ ಸಭಾಂಗಣದಲ್ಲಿ International Coffee Day ಆಚರಣೆ


ಮಡಿಕೇರಿ, 01.10.2021: International Coffee Day ಪ್ರಯುಕ್ತ ಮಡಿಕೇರಿ ಕಾಫಿ ಮಂಡಳಿ ವತಿಯಿಂದ ಕಾರ್ಯಕ್ರಮವನ್ನು  ಏರ್ಪಡಿಸಲಾಗಿತ್ತು. ಕಾರ್ಯಕ್ರಮವನ್ನು  ಮಾನ್ಯ ವಿಧಾನ ಪರಿಷತ್ ಸದಸ್ಯರಾದ ಶ್ರೀಮತಿ ವೀಣಾ ಅಚ್ಚಯ್ಯ ಅವರು ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಕ್ಕೋಡ್ಲು ಗ್ರಾಮದ ಬೆಳೆಗಾರಾರಾದ ಶಾಂತೆಯಂಡ ಸುಬ್ಬಯ್ಯನವರು ವಹಿಸಿದ್ದರು.

ಕಾರ್ಯಕ್ರಮದಲ್ಲಿ ಮಡಿಕೇರಿಯ ತೋಟಗಾರಿಕಾ ಉಪ ನಿರ್ದೇಶಕರಾದ ಶ್ರೀ ಶಶಿಧರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಕಾಫಿ ಮಂಡಳಿಯ ಉಪ ನಿರ್ದೇಶಕರಾದ ಶ್ರೀ ಶಿವಕುಮಾರಸ್ವಾಮಿ ಯವರು ಪ್ರಾಸ್ತಾವಿಕ ಭಾಷಣ ಮಾಡಿದರು. ಸಮಾರಂಭದಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವ ಪ್ರಯುಕ್ತ ಕಾಫಿ ಮಂಡಳಿಯ ಮಡಿಕೇರಿ ವಿಭಾಗ ಆಯೋಜಿಸಿದ್ದ ಚಿತ್ರ ಕಲಾ ಸ್ಪರ್ಧೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಉತ್ತಮ ಚಿತ್ರಗಳನ್ನು ಬಿಡಿಸಿ ಆಯ್ಕೆಗೋಂಡಿದ್ದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು. ಈ ವರ್ಷದ ಅಂತರ್ರಾಷ್ಟ್ರೀಯ ಕಾಫಿ ದಿವಸದ ಆಶಯಕ್ಕೆ ಅನುಗುಣವಾಗಿ , ಕಾಫಿ ಉದ್ಯಮದಲ್ಲಿ ತೋಡಗಿಸಿಕೊಡು ಕಾಫಿ ರಪ್ತು ಮತ್ತು ಉತ್ತಮ ಗುಣಮಟ್ಟದ ಕಾಫಿಪುಡಿಯನ್ನು ಅಮೆಜಾನ್ online ಮಳಿಗೆಯ ಮುಖಾಂತರ ಮಾರಾಟ ಮಾಡುತ್ತಾ ದೇಶೀಯ ಮಾರುಕಟ್ಟೆಯಲ್ಲಿ ಛಾಪು ಮೂಡಿಸುತ್ತಿರುವ ಜಿಲ್ಲೆಯ ಉತ್ಸಾಹಿ ಯುವಕರಾದ ಗಾಳಿಬೀಡಿನ ಶ್ರೀ ಮೋಕ್ಷಿತ್ s/o ಉಡುಡೋಳಿರ ನಾಣಯ್ಯರವನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು. ಕಾರ್ಯಕ್ರಮದ ನಡುವೆ ಭಾಗವಹಿಸಿದ್ದ ಬೆಳೆಗಾರರಿಗೆ ಕಾಫಿಗೆ ಸಂಬಂಧಿಸಿದಂತೆ ರಸ ಪ್ರಶ್ನೆಗಳನ್ನು ಕೇಳಿ ಸರಿ ಉತ್ತರ ನೀಡಿದವರಿಗೆ ಬಹುಮಾನ ನೀಡಿ ಪ್ರೋತ್ಸಾಹಿಸಲಾಯಿತು.  ಮಡಿಕೇರಿ ಕಾಫಿ ಮಂಡಳಿಯ ಹಿರಿಯ ಸಂಪರ್ಕಧಿಕಾರಿ ಶ್ರೀ ಜಯರಾಮನ್ ಹಾಗೂ ಇತರೆ ಸಿಬ್ಬಂದಿ ಇದ್ದರು. ಮಾನಸ ಕಾರ್ಯಕ್ರಮದ ನಿರೂಪಣೆಯನ್ನು ಮಾಡಿದರು. ಕಾರ್ಯಕ್ರಮದಲ್ಲಿ ಕಾಫಿ ಮಂಡಳಿಯಲ್ಲಿ ದೊರೆಯುವ ಸೌಲಭ್ಯಗಳ ಕುರಿತು ಮಾಹಿತಿ ಒದಗಿಸಲಾಯಿತು.

Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,