Header Ads Widget

ಸರ್ಚ್ ಕೂರ್ಗ್ ಮೀಡಿಯ

ಅರೆಭಾಷೆ ಸಾಹಿತ್ಯದ ಮೂಲಕ ಸಂಸ್ಕೃತಿ ಬಲಪಡಿಸಿ: ನಾಗೇಶ್ ಕಾಲೂರು

ಅರೆಭಾಷೆ ಸಾಹಿತ್ಯದ ಮೂಲಕ ಸಂಸ್ಕೃತಿ ಬಲಪಡಿಸಿ: ನಾಗೇಶ್ ಕಾಲೂರು


ಮಡಿಕೇರಿ: ಅರೆಭಾಷೆ ಸಾಹಿತ್ಯದ ಮೂಲಕ ಸಂಸ್ಕೃತಿಯನ್ನು ಕಟ್ಟುವಂತಾಗಬೇಕು. ಇದರಿಂದ ಅರೆಭಾಷೆಯನ್ನು ಮತ್ತಷ್ಟು ಗಟ್ಟಿಗೊಳಿಸಲು ಸಾಧ್ಯ ಎಂದು ಸಾಹಿತಿ ನಾಗೇಶ್ ಕಾಲೂರು ಅವರು ಅಭಿಪ್ರಾಯಪಟ್ಟಿದ್ದಾರೆ.    

ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಮರಗೋಡು ಗ್ರಾಮದ ಅರೆಭಾಷೆ ಗೌಡ ಸಮಾಜದ ಸಭಾಂಗಣದಲ್ಲಿ ಗುರುವಾರ ನಡೆದ ‘ಅರೆಭಾಷೆ ಸಂಸ್ಕøತಿ’ ಶಿಬಿರದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.   

ಸಮಾಜದಲ್ಲಿ ಸಂಸ್ಕೃತಿ ಮತ್ತು ನಾಗರಿಕತೆ ಒಂದಕ್ಕೊಂದು ಅವಿನಾಭಾವ ಸಂಬಂಧ ಹೊಂದಿದ್ದು, ಆ ದಿಸೆಯಲ್ಲಿ ಅರೆಭಾಷೆಯು ಶ್ರೀಮಂತಿಕೆಯ ಸಂಸ್ಕøತಿ ಹೊಂದಿದೆ ಎಂದು ಅವರು ಹೇಳಿದರು. 

ಯಾವುದೇ ಸಂಸ್ಕೃತಿಯು ನಿರಂತರವಾಗಿ ಹರಿಯುವ ನದಿಯಿದ್ದಂತೆ, ಅರೆಭಾಷೆಯಲ್ಲಿನ ಸಂಸ್ಕøತಿಯನ್ನು ಇತರರಿಗೂ ಪರಿಚಯಿಸಬೇಕು. ಸಂಸ್ಕøತಿ ಮತ್ತು ನಾಗರಿಕತೆ ಬೆಳೆದಂತೆ ಸಮಾಜದಲ್ಲಿ ಅಭಿವೃದ್ಧಿಯನ್ನು ಕಾಣಬಹುದು. ಆ ನಿಟ್ಟಿನಲ್ಲಿ ಅರೆಭಾಷೆ ಸಂಸ್ಕøತಿಯನ್ನು ಉಳಿಸಿ ಬೆಳೆಸಿಕೊಂಡು ಹೋಗಬೇಕು ಎಂದು ಅವರು ಹೇಳಿದರು.  

ಸ್ಥಳೀಯ ಸಂಸ್ಕೃತಿ, ಆಚಾರ-ವಿಚಾರಗಳನ್ನು ಉಳಿಸುವಲ್ಲಿ ಬಾಂಧವ್ಯ ಮತ್ತು ಭ್ರಾತೃತ್ವ ಅತೀ ಮುಖ್ಯ. ಸ್ಥಳೀಯ ಮಾತೃ ಭಾಷೆ ಸಂಸ್ಕೃತಿ ಅಂತಃಕರಣವನ್ನು ಉಳಿಸಿಕೊಂಡಾಗ ಮಾತ್ರ ಅರೆಭಾಷೆಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲು ಸಾಧ್ಯ. ಆ ದಿಸೆಯಲ್ಲಿ ಅರೆಭಾಷೆ ಸಂಸ್ಕøತಿಗೆ ವಿಶೇಷ ಗುಣವಿದೆ. ಇದನ್ನು ಮತ್ತಷ್ಟು ಬಲಪಡಿಸಬೇಕು ಎಂದರು.  

ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಪದ್ಧತಿ ಪರಂಪರೆಯನ್ನು ಬೆಳೆಸುವುದರ ಜೊತೆಗೆ, ಮತ್ತೊಂದು ಸಂಸ್ಕøತಿಯನ್ನು ಪ್ರೀತಿಸಬೇಕು ಮತ್ತು ಗೌರವಿಸಬೇಕು ಎಂದರು. 

ಅರೆಭಾಷೆಯಲ್ಲಿನ ಸೋಬಾನೆ ಹಾಡು, ಗಂಗೆ ಪೂಜೆ, ನುಡಿಗಟ್ಟು, ಮೆಹಂದಿ ಹೀಗೆ ಸಂಪ್ರದಾಯಗಳು ಅರೆಭಾಷೆ ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಸಹಕಾರಿಯಾಗಿದೆ ಎಂದು ನಾಗೇಶ್ ಕಾಲೂರು ಹೇಳಿದರು.  

ಮರಗೋಡು ಗೌಡ ಸಮಾಜದ ಅಧ್ಯಕ್ಷರಾದ ಕಟ್ಟೆಮನೆ ಕೆ.ಜನಾರ್ದನ ಅವರು ಮಾತನಾಡಿ ಕೊಡಗು, ದಕ್ಷಿಣ ಕನ್ನಡ ಹಾಗೂ ಕೇರಳದ ಸ್ಪಲ್ಪ ಭಾಗದಲ್ಲಿ ಅರೆಭಾಷಿಕರು ವಾಸಿಸುತ್ತಿದ್ದು, ಅನಾದಿಕಾಲದಿಂದಲೂ ಅರೆಭಾಷೆ ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಉಳಿಸಿಕೊಂಡು ಬಂದಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಅರೆಭಾಷೆ ಸಂಸ್ಕೃತಿಯು ಶ್ರೀಮಂತಿಕೆಯನ್ನು ಹೊಂದಿದ್ದು, ಇದನ್ನು ಉಳಿಸಿ ಬೆಳೆಸುವಲ್ಲಿ ಅಕಾಡೆಮಿ ವತಿಯಿಂದ ಅರೆಭಾಷೆ ಸಾಂಸ್ಕೃತಿಕ ಶಿಬಿರ ಏರ್ಪಡಿಸಿರುವುದು ಸಹಕಾರಿಯಾಗಿದೆ ಎಂದರು.

ಮರಗೋಡು ಗ್ರಾ.ಪಂ.ಸದಸ್ಯರಾದ ಪರಿಚನ ಶರತ್ ಅವರು ಮಾತನಾಡಿ ಅರೆಭಾಷೆ ಸಂಸ್ಕೃತಿ ಸಾಹಿತ್ಯ ಅಕಾಡೆಮಿ ವತಿಯಿಂದ ಮರಗೋಡು ಗ್ರಾಮದಲ್ಲಿ ಅರೆಭಾಷೆ ಸಂಸ್ಕೃತಿ ಶಿಬಿರ ಏರ್ಪಡಿಸಿರುವುದು ಅರೆಭಾಷೆ ಸಾಹಿತ್ಯ ಮತ್ತು ಸಂಸ್ಕøತಿ ಬೆಳವಣಿಗೆಗೆ ಮತ್ತಷ್ಟು ಸಹಕಾರಿಯಾಗಿದೆ. ಇದರಿಂದ ಯುವ ಪೀಳಿಗೆ ಮಾಹಿತಿ ತಿಳಿಯಲು ಅನುಕೂಲವಾಗಿದೆ ಎಂದರು.  

ಅಕಾಡೆಮಿ ಸದಸ್ಯರಾದ ಬೈತಡ್ಕ ಜಾನಕಿ, ಚೊಕ್ಕಾಡಿ ಪ್ರೇಮ ರಾಘವಯ್ಯ, ಧನಂಜಯ ಅಗೋಳಿಕಜೆ, ಕೂಡಕಂಡಿ ಡಾ.ದಯಾನಂದ, ಇತರರು ಇದ್ದರು. ರಿಜಿಸ್ಟ್ರಾರ್ ಚಿನ್ನಸ್ವಾಮಿ ಸ್ವಾಗತಿಸಿದರು. ಧನಂಜಯ ಅಗೋಳಿಕಜೆ ನಿರೂಪಿಸಿದರು. ವೆಂಕಟೇಶ್ ಮಾಳಿಗೆ ಮನೆ ವಂದಿಸಿದರು.

Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,