Header Ads Widget

ಸರ್ಚ್ ಕೂರ್ಗ್ ಮೀಡಿಯ

ನ.14 ರಿಂದ 20 ರವರೆಗೆ ಮಕ್ಕಳ ರಕ್ಷಣೆ ಮತ್ತು ಪೋಷಣೆ ಜಾಗೃತಿ ಅಭಿಯಾನ

ನ.14 ರಿಂದ 20 ರವರೆಗೆ ಮಕ್ಕಳ ರಕ್ಷಣೆ ಮತ್ತು ಪೋಷಣೆ ಜಾಗೃತಿ ಅಭಿಯಾನ


ಮಡಿಕೇರಿ ನ.11: ಚೈಲ್ಡ್ ಲೈನ್ 1098 ಸೇವೆಯು 25 ವರ್ಷ ಪೂರೈಸಿದ್ದು ರಜತ ಮಹೋತ್ಸವದ ಸಂಭ್ರಮದಲ್ಲಿದ್ದು, ಪ್ರತಿ ವರ್ಷದಂತೆ ಈ ವರ್ಷ ಕೂಡ ನವೆಂಬರ್, 14 ರಿಂದ 20 ರವರೆಗೆ ಚೈಲ್ಡ್‍ಲೈನ್ ಸೇ ದೋಸ್ತಿ ಸಪ್ತಾಹ ಕಾರ್ಯಕ್ರಮವನ್ನು ದೇಶದಾದ್ಯಂತ ಆಯೋಜಿಸಲಾಗಿದೆ. 

ಅದರಂತೆ ಜಿಲ್ಲಾ ಮಟ್ಟದಲ್ಲಿರುವ ಮಕ್ಕಳ ಸಹಾಯವಾಣಿ 1098 ಕೇಂದ್ರಗಳ ಮುಖಾಂತರ ಮಕ್ಕಳ ರಕ್ಷಣೆ ಮತ್ತು ಪೋಷಣೆಯನ್ನು ಖಾತರಿ ಪಡಿಸಲು ಮತ್ತು ಜಾಗೃತಿಯನ್ನು ಮೂಡಿಸಲು ಒಂದು ವರ್ಷದ ಚೈಲ್ಡ್‍ಲೈನ್ ಸೇ ದೋಸ್ತಿ ಸಪ್ತಾಹ (ಚೈಲ್ಡ್‍ಲೈನ್ ಮಿತ್ರ) ಅಭಿಯಾನವು ನವೆಂಬರ್, 14 ರಿಂದ 20 ರವರೆಗೆ ನಡೆಯಲಿದೆ. 

ಮಕ್ಕಳ ಸಹಾಯವಾಣಿ 1098 ಸೇವೆಯು ದಿನದ 24 ಗಂಟೆಗಳ ಕಾಲ ತುರ್ತು ಪರಿಸ್ಥಿತಿಯಲ್ಲಿ ಇರುವ ಮಕ್ಕಳಿಗೆ ದೂರವಾಣಿ ಹಾಗೂ ಹೊರ ಸಂಪರ್ಕ ಸೇವೆಗಳ ಮೂಲಕ ರಕ್ಷಣೆ ಮತ್ತು ಪೋಷಣೆಯನ್ನು ಒದಗಿಸುವ ರಾಷ್ಟ್ರೀಯ ಉಚಿತ ಕರೆ ಸೇವೆಯಾಗಿದೆ. ಈ ಸೇವೆಯು ಭಾರತ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ‘ಮಿಶನ್ ವಾತ್ಸಲ್ಯ’ ಯೋಜನೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. 

ಈ ಕಾರ್ಯಕ್ರಮದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿವಿಧ ಇಲಾಖೆ ಅಧಿಕಾರಿಗಳು, ಅಂಗನವಾಡಿ ಕಾರ್ಯಕರ್ತರು, ಆಶಾ ಕಾರ್ಯಕರ್ತರು, ಸ್ವಯಂ ಸೇವಾ ಸಂಘಟನೆಗಳು, ಸಮುದಾಯದವರು, ಸ್ವಯಂ ಸೇವಕರು, ಸಾರ್ವಜನಿಕರು, ಮಕ್ಕಳು ಮತ್ತು ಮಾಧ್ಯಮ ಮಿತ್ರರೊಂದಿಗೆ ಜೊತೆಗೂಡಿ ಮಕ್ಕಳ ಹಕ್ಕುಗಳು, ಮಕ್ಕಳ ರಕ್ಷಣೆ ಮತ್ತು ಪೋಷಣೆ, ಮಕ್ಕಳ ರಕ್ಷಣೆಗೆ ಇರುವ ವಿವಿಧ ಇಲಾಖೆಗಳ ಕಾನೂನು ಕಾಯಿದೆಗಳ ಬಗ್ಗೆ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವ ಮೂಲಕ ಅಧಿಕ ಸಂಖ್ಯೆಯಲ್ಲಿ ಮಕ್ಕಳ ಹಕ್ಕುಗಳ ರಕ್ಷಣೆಗೆ ಸ್ವಯಂ ಸೇವಕರನ್ನು ಗುರುತಿಸುವ ಅಭಿಯಾನವಾಗಿದೆ.  

ಈ ಕಾರ್ಯಕ್ರಮವು ಒಂದು ವಾರ ಜರುಗಲಿದ್ದು, ಇದರ ಭಾಗವಾಗಿ ಸಹಾಯದ ಅಗತ್ಯವಿರುವ ಪ್ರತಿ ಮಗುವಿಗೆ ಅಗತ್ಯವಿರುವ ಆಪ್ತ ಸ್ನೇಹಿತರನ್ನು ಕಲ್ಪಿಸುವ ಹಾಗೂ ದೇಶದ ನಾಗರಿಕರನ್ನು ಮಕ್ಕಳ ರಕ್ಷಣೆಯಲ್ಲಿ ಜವಾಬ್ದಾರಿಯುತವಾದ ಮಧ್ಯಸ್ಥಗಾರರನ್ನಾಗಿ ಮಾಡುವ ಉತ್ತಮವಾದ ಸಮಾಜಮುಖಿ ಉದ್ದೇಶವನ್ನು ಹೊಂದಿರುವ ಅಭಿಯಾನವಾಗಿದೆ. ಇಂತಹ ಅಭಿಯಾನದಿಂದ ಸಾರ್ವಜನಿಕರಲ್ಲಿ ಮಕ್ಕಳ ಹಕ್ಕುಗಳು, ಮಕ್ಕಳ ರಕ್ಷಣೆ ಮತ್ತು ಪೋಷಣೆ ಕುರಿತು ಜಾಗೃತಿಗೊಳಿಸುವುದಲ್ಲದೆ ಜವಾಬ್ದಾರಿಯುತ ನಾಗರಿಕರನ್ನಾಗಿ ಮಾಡುವ ನಿಟ್ಟಿನಲ್ಲಿ ಅರಿವು ಮೂಡಿಸಲಾಗುತ್ತದೆ.

Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,