Header Ads Widget

ಸರ್ಚ್ ಕೂರ್ಗ್ ಮೀಡಿಯ

“ಕುಟುಂಬ 2021” ಕ್ರಿಕೆಟ್ ಕಪ್ ಮುಡಿಗೇರಿಸಿಕೊಂಡ ಪರ್ಲಕೋಟಿ ತಂಡ; ಕುಡೆಕಲ್ಲು ರನ್ನರ್ಸ್

“ಕುಟುಂಬ 2021” ಕ್ರಿಕೆಟ್ ಕಪ್ ಮುಡಿಗೇರಿಸಿಕೊಂಡ ಪರ್ಲಕೋಟಿ ತಂಡ; ಕುಡೆಕಲ್ಲು ರನ್ನರ್ಸ್

(ಪರ್ಲಕೋಟಿ ತಂಡ)

(ಕುಡೆಕಲ್ಲು ತಂಡ)

ಕೊಡಗು ಗೌಡ ಯುವ ವೇದಿಕೆ ವತಿಯಿಂದ ಆಯೋಜಿಸಲಾಗಿರುವ ಗೌಡ ಜನಾಂಗದ ನಡುವಿನ ಕುಟುಂಬ-2021 ಕ್ರಿಕೆಟ್ ಪಂದ್ಯಾವಳಿಯ ಕುಟುಂಬಗಳ ನಡುವಿನ “ಕುಟುಂಬ 2021” ಕ್ರಿಕೆಟ್ ಕಪ್ ಪರ್ಲಕೋಟಿ ತಂಡ ಮುಡಿಗೇರಿಸಿಕೊಂಡಿದೆ.

ಸೆಮಿಫೈನಲ್ ಪ್ರವೇಶ ಮಾಡಿದ್ದ ಪರ್ಲಕೋಟಿ ದಂಬೇಕೋಡಿ ನಡುವೆ ನಡೆದ ಪಂದ್ಯಾವಳಿಯಲ್ಲಿ ಪರ್ಲಕೋಟಿ ತಂಡ ಫೈನಲ್ ಪ್ರವೇಶಿಸಿದರೆ, ಕುಡೆಕಲ್ಲು ಮತ್ತು ಉಳುವಾರು ನಡುವಿನ ಪಂದ್ಯಾವಳಿಯಲ್ಲಿ ಕುಡೆಕಲ್ಲು ತಂಡ ಫೈನಲ್ ಪ್ರವೇಶಿಸಿದ್ದವು. ಇದರಲ್ಲಿ ಉಳುವಾರನ ತಂಡ ನಿರ್ಧಿಷ್ಟ 6 ಓವರ್ ನಲ್ಲಿ ಏಳು ವಿಕೇಟ್ ಕಳೆದುಕೊಂಡು 49 ಗಳಿಸಿದರೆ, ಕುಡೆಕಲ್ಲು ತಂಡ 5.2 ಓವರ್ ನಲ್ಲಿ 52/2 ಗಳಿಸಿ ಫೈನಲ್ ತಲುಪಿದರೆ. ಪರ್ಲಕೋಟಿತಂಡ 6 ಓವರ್ ನಲ್ಲಿ 4 ವಿಕೆಟ್ ಕಳೆದುಕೊಂಡು 61 ಗಳಿಸಿದರೆ ದಂಬೆಕೋಡಿ ತಂಡ ನಿಗದಿತ 56 ರನ್ ಗಳಿಸ ಫೈನಲ್ ಪಂದ್ಯ ವಂಚಿತರಾದರು. ಅಂತಿಮವಾಗಿ ಪರ್ಲಕೋಟಿ ತಂಡ 6 ಓವರ್ ನಲ್ಲಿ ಒಂದು ವಿಕೆಟ್ ಕಳೆದು 81 ರನ್ ಗಳಿಸಿದರೆ, ಕುಡೆಕಲ್ಲು ತಂಡ 63/3 ಗೆ ತೃಪ್ತಿ ಪಡೆದುಕೊಳ್ಳಬೇಕಾಯಿತು.

Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,