Header Ads Widget

Responsive Advertisement

ನ‌ವೆಂಬರ್‌ 22ರಂದು ಭುವನಗಿರಿ ಗ್ರಾಮ ಜೇನುಕಲ್ಲು ಬೆಟ್ಟದ ಶ್ರೀ ಉದ್ಭವ ಕಾಡು ಬಸವಣ್ಣ ದೇವಾಲಯ ಉದ್ಘಾಟನೆ

ನ‌ವೆಂಬರ್‌ 22ರಂದು ಭುವನಗಿರಿ ಗ್ರಾಮ ಜೇನುಕಲ್ಲು ಬೆಟ್ಟದ ಶ್ರೀ ಉದ್ಭವ ಕಾಡು ಬಸವಣ್ಣ ದೇವಾಲಯ ಉದ್ಘಾಟನೆ


ಕೊಡಗು ಜಿಲ್ಲೆಯ ಕುಶಾಲನಗರ ತಾಲ್ಲೂಕಿನ ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಣಿವೆ ಬಳಿಯಿರುವ ಸೀಗೆಹೊಸೂರು, ಭುವನಗಿರಿ ಗ್ರಾಮ ಜೇನುಕಲ್ಲು ಬೆಟ್ಟದ ತಪ್ಪಲಿನಲ್ಲಿರುವ  ಶ್ರೀ ಉದ್ಭವ ಕಾಡು ಬಸವಣ್ಣ ದೇವಾಲಯದ ಉದ್ಘಾಟನೆ ಇದೇ ನವೆಂಬರ್‌ 22ರ ಸೋಮವಾರದಂದು ನೇರವೇರಲಿದೆ ಎಂದು ದೇವಾಲಯದ ಅಧ್ಯಕ್ಷರಾದ ಶ್ರೀ ಕೆ.ಸಿ. ನಂಜುಂಡಸ್ವಾಮಿಯವರು ತಿಳಿಸಿದ್ದಾರೆ.


ಶ್ರೀ ಬಸವಣ್ಣನ ಭಕ್ತರುಗಳ ಆಶಯದಂತೆ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯವನ್ನು ಭಕ್ತಾಧಿಗಳ ಸಹಕಾರಗಳೊಂದಿಗೆ ಕೈಗೊಳ್ಳಲಾಗಿದ್ದು, ಈ ದೇವರ ಕಾರ್ಯದಲ್ಲಿ ಭುವನಗಿರಿ ಗ್ರಾಮ, ಸುತ್ತಲಿನ ಎಲ್ಲಾ ಗ್ರಾಮಸ್ಥರು  ಹಾಗೂ ನಾಡಿನ ಎಲ್ಲಾ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತಮ್ಮ ಶಕ್ತ್ಯಾನುಸಾರ ತನು-ಮನ-ಧನ ಸಹಾಯದ ಮೂಲಕ ಸಮಾಜದಲ್ಲಿ ಪರಸ್ಪರ ಸದ್ಭಾವನೆಯಿಂದ ಜೀವಿಸಲು ಸಂಕಲ್ಪ ಮಾಡಿ ತನ್ಮೂಲಕ ದೇವರ ಕೃಪೆಗೆ ಪಾತ್ರರಾಗಬೇಕಾಗಿ ದೇವಾಲಯದ ಆಡಳಿತ ಮಂಡಳಿ ವಿನಂತಿಸಿಕೊಂಡಿದೆ.


ಸ್ವಸ್ತಿ ಶ್ರೀ ವಿಜಯಾಭ್ಯುದಯ ಶಾಲಿವಾಹನ ಶಕ ವರ್ಷಂಗಳು 1943ನೇ ಶ್ರೀ ಪ್ಲವನಾಮ ಸಂವತ್ಸರ ದಕ್ಷಿಣಾಯಣ ಶರದ್‌ಋತು ಕಾರ್ತಿಕ ಮಾಸದ ದಿನಾಂಕ 22-11-2021ನೇ ಸೋಮವಾರ ಪ್ರಾತಃಕಾಲ 6.00 ಗಂಟೆಗೆ ಕಣಿವೆ ಶ್ರೀ ರಾಂಲಿಂಗೇಶ್ವರ ದೇವಸ್ಥಾನದ ಮುಂಭಾಗ ಶ್ರೀ ಕಾವೃಇ ನದಿಯಲ್ಲಿ ಸುಹಾಸಿನಿಯರಿಂದ ಗಂಗಾಪೂಜೆ, ವೀರಗಾಸೆ, ನಂದಿಧ್ವಜದೊಂದಿಗೆ ಭುವನಗಿರಿ ಹಾಗೂ ಸೀಗೆಹೊಸೂರು ರಸ್ತೆಗಳ ಮೂಲಕವಾಗಿ ಬೆಳ್ಳಿರಥದ ಮೆರವಣಿಗೆಯಲ್ಲಿ ಪರಮ ಪೂಜ್ಯ ಗುರುಗಳ ಸಾರೋಟು ಉತ್ಸವವು ನರವೇರಿ, ಶ್ರೀ ಕಾಡು ಬಸವಣ್ಣ ದೇವಸ್ಥಾನದಲ್ಲಿ ಶ್ರೀ ಮಹಾ ಗಣಪತಿ ಹೋಮ, ರುದ್ರ ಹೋಮ ನೆರವೇರಿ, ಪೂರ್ಣಾಹುತಿ, ಶ್ರೀ ಸ್ವಾಮಿಗೆ ಮಹಾರುದ್ರಾಭಿಷೇಕ, ಅಷಟೋತ್ತರ, ತೀರ್ಥಪ್ರಸಾದ, ಅನ್ನಸಂತರ್ಪಣೆಯನ್ನು ಆಯೋಜಿಸಲಾಗಿದೆ ಎಂದು ಶ್ರೀ ಉದ್ಭವ ಕಾಡು ಬಸವಣ್ಣ ದೇವಸ್ಥಾನದ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿ ತಿಳಿಸಿದೆ.


ಕಾರ್ಯಕ್ರಮದ ವಿವರಗಳು: 

ದಿನಾಂಕ: 22-11-2021

* ಬೆಳಿಗೆ 6.00 ಗಂಟೆಗೆ ಕಾವೇರಿ ನದಿಯಿಂದ ಬೆಳ್ಳಿ ರಥದ ಮೇರವಣಿಗೆಯಲ್ಲಿ ಕಳಶ ತರುವುದು.

* ಬೆಳಿಗೆ 9.30 ಗಂಟೆಗೆ ಶ್ರೀ ಮಾಹಗಣಪತಿ ಹೋಮ | ರುದ್ರ ಹೋಮ

* ಬೆಳಿಗೆ 11.00 ಗಂಟೆಗೆ ಮಹಾರುದ್ರಾಭಿಷೇಕ | ಅಷ್ಟೋತ್ತರ | ತೀರ್ಥ - ಪ್ರಸಾದ

* ಬೆಳಿಗೆ 11.30 ಗಂಟೆಗೆ ಸಭಾ ಕಾರ್ಯಕ್ರಮ: 

* ಆಶೀರ್ವಚನ: ಪರಮ ಪೂಜ್ಯ ಶ್ರೀ ಶ್ರೀ ಶ್ರೀ ನಟರಾಜ ಸ್ವಾಮಿಗಳು 

* ನಂತರ ದಾನಿಗಳಿಗೆ ಗೌರವ ಸಮರ್ಪಣೆ

* ಮಧ್ಯಾಹ್ನ 12.30 ಗಂಟೆಗೆ ಮಹಾ ಮಂಗಾಳಾರತಿ | ಅನ್ನ ಸಂತರ್ಪಣೆ



ದೇವಸ್ಥಾನದ ಚರಿತ್ರೆ:

ಭುವನಗಿರಿ ಗ್ರಾಮದ ಬಳಿ ಜೇನುಕಲ್ಲು ಬೆಟ್ಟದ ಪಕ್ಕದಲ್ಲಿ ಮರದ ಅಡಿಯಲ್ಲಿ ಪುರಾತನ ಕಾಲದಿಂದ ಉದ್ಭವಮೂರ್ತಿಯಾಗಿ ಶ್ರೀ ಬಸವಣ್ಣ ದೇವರು ಮೂಡಿದ್ದು, ಅದನ್ನು ಸುತ್ತಮುತ್ತಲಿನ ಗ್ರಾಮಸ್ಥರು ಪ್ರತಿವರ್ಷವೂ ಬಸವ ಜಯಂತಿಯ ದಿನ ಹಾಗೂ ಯಗಾದಿ ಹಬ್ಬದ ದಿನ ಪೂಜಾ ಕೈಂಕರ್ಯಗಳನ್ನು ನೆರವೇರಿಸುತ್ತಾ ಬಂದಿದ್ದಾರೆ. ನೂತನ ವರ್ಷಾರಂಭದ ದಿನದಂದು ಗ್ರಾಮಸ್ಥರು ಭೂಮಿಗೆ ಹೊನ್ನಾರು ಕಟ್ಟಿ ಉಳುಮೆ ಮಾಡಿ ಧವಸ ಧಾನ್ಯಾಗಳನ್ನು ಬೆಳಸಿ, ಬೆಳೆದ ಧಾನ್ಯಾದಿಗಳನ್ನು ದೇವರಿಗೆ ಅರ್ಪಿಸುತ್ತಾರೆ. ಗ್ರಾಮದ ಹಸುಗಳು ಕರುವಿಗೆ ಜನ್ಮ ನೀಡಿದ ಸಂದರ್ಭ ದೇವರಿಗೆ ಗಿಣ್ಣು ಸಮರ್ಪಿಸಿಕೊಂಡು ಬರುತ್ತಿದ್ದಾರೆ. ಈ ಎಲ್ಲಾ ಸಾಂಪ್ರದಾಯಿಕ ಪದ್ದತಿಗಳು ಇಂದಿಗೂ ಆಚರಣೆಯಲ್ಲಿದೆ.


ದೇವಾಲಯದ ವಿಳಾಸ:

ಶ್ರೀ ಉದ್ಭವ ಕಾಡು ಬಸವಣ್ಣ ದೇವಸ್ಥಾನ

ಸೀಗೆಹೊಸೂರು, ಜೇನುಕಲ್ಲು ಬೆಟ್ಟ, ಭುವನಗಿರಿ ಗ್ರಾಮ, ಕೂಡಿಗೆ ಗ್ರಾಮ ಪಂಚಾಯಿತಿ, ಕಣಿವೆ ಅಂಚೆ-571232, ಕುಶಾಲನಗರ ತಾಲ್ಲೂಕು. ಕೊಡಗು.

ಅಧ್ಯಕ್ಷರು:  ಶ್ರೀ ಕೆ.ಸಿ. ನಂಜುಂಡಸ್ವಾಮಿ, ಮೊ: 94480 72929

ಕಾರ್ಯದರ್ಶಿ: ಶ್ರೀ  ಹೆಚ್.ಎಂ. ಬಸವರಾಜು, ಮೊ: 96115 03082

ಆಡಳಿತ ಮಂಡಳಿ ಹಾಗೂ ಗ್ರಾಮಸ್ಥರು.

Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,