Header Ads Widget

Responsive Advertisement

ಕೊಡಗು ಜಿಲ್ಲೆಯಲ್ಲಿ ‘ಗ್ರಾಮ ಒನ್’ ಯೋಜನೆ ಅನುಷ್ಠಾನ


ಕೊಡಗು ಜಿಲ್ಲೆಯಲ್ಲಿ ‘ಗ್ರಾಮ ಒನ್’ ಯೋಜನೆ ಅನುಷ್ಠಾನ


ಮಡಿಕೇರಿ ನ.10: ಗ್ರಾಮ ಒನ್” ಯೋಜನೆಯನ್ನು ರಾಜ್ಯದ 12 ಜಿಲ್ಲೆಗಳಲ್ಲಿ ಅನುಷ್ಠಾನ ಮಾಡುವ ಸಂಬಂಧ ವಿದ್ಯುನ್ಮಾನ ನಾಗರಿಕ ಸೇವಾ ವಿತರಣಾ ನಿರ್ದೇಶನಾಲಯ ತಯಾರಿ ನಡೆಸಿದೆ.

     ಆ ದಿಸೆಯಲ್ಲಿ ಕೊಡಗು, ಉಡುಪಿ, ಹಾವೇರಿ, ಬಳ್ಳಾರಿ, ಬೆಳಗಾವಿ, ತುಮಕೂರು, ಶಿವಮೊಗ್ಗ ಕೊಪ್ಪಳ, ದಾವಣಗೆರೆ, ಚಿಕ್ಕಮಗಳೂರು, ಬೀದರ್ ಮತ್ತು ವಿಜಯಪುರ ಜಿಲ್ಲೆಗಳ ಆಯ್ದ ಗ್ರಾಮಗಳಲ್ಲಿ ಪ್ರಾಂಚೈಂಸಿ ಆಧಾರದಲ್ಲಿ ಸೇವಾ ಕೇಂದ್ರ ಆರಂಭಿಸಲು ಉದ್ದೇಶಿಸಲಾಗಿದೆ. 

      ನಗರ ಪ್ರದೇಶಗಳಲ್ಲಿ ಜನರಿಗೆ ಸೇವೆ ನೀಡುತ್ತಿರುವ ಕರ್ನಾಟಕ ಒನ್ಸ್, ಬೆಂಗಳೂರು ಒನ್ ಮಾದರಿಯಲ್ಲಿ “ಗ್ರಾಮ ಒನ್” ಮೂಲಕ ಹಳ್ಳಿಗರಿಗೂ ಸೇವೆ ನೀಡಬೇಕೆಂಬ ಯೋಜನೆ ರೂಪಿಸಿದ್ದರು. ಪ್ರಾಯೋಗಿಕವಾಗಿ ಗ್ರಾಮಾಂತರ ಪ್ರದೇಶದಲ್ಲಿ ಸೇವೆ ಆರಂಭಿಸುವ ಕಾರ್ಯ ನಡೆದಿತ್ತು. ಈ ಬಗ್ಗೆ ಮಾಹಿತಿ ನೀಡಿರುವ ಅಧಿಕಾರಿಗಳು ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಸೇವಾಸಿಂಧು ಯೋಜನೆಯಡಿಯಲ್ಲಿ ಸುಮಾರು 750 ಕ್ಕೂ ಹೆಚ್ಚು ನಾಗರಿಕ ಸೇವೆಗಳನ್ನು ಪಡೆಯಲು “ಗ್ರಾಮ ಒನ್' ಕೇಂದ್ರಗಳಲ್ಲಿ ಅರ್ಜಿಗಳನ್ನು ಸ್ವೀಕರಿಸಲಾಗುವುದು ಎಂದು ವಿವರಿಸಿದ್ದಾರೆ. 

     ವಾರದ ಎಲ್ಲಾ ದಿನ ಬೆಳಗ್ಗೆ 8 ರಿಂದ ರಾತ್ರಿ 8 ರವರೆಗೆ ಕೇಂದ್ರಗಳು ಕಾರ್ಯನಿರ್ವಹಿಸಲಿವೆ. ಇದೀಗ 12 ಜಿಲ್ಲೆಗಳ ಆಯ್ದ ಗ್ರಾಮಗಳಲ್ಲಿ ಸಮಗ್ರ ನಾಗರಿಕ ಸೇವಾ ಕೇಂದ್ರ “ಗ್ರಾಮ ಒನ್” ಆರಂಭಿಸಲು ಉದ್ದೇಶಿಸಿದ್ದು ಪ್ರಾಂಚೈಂಸಿಗಳನ್ನು ಆಹ್ವಾನಿಸಲಾಗಿದೆ.

     ಆಸಕ್ತರು ನವೆಂಬರ್, 11  ರೊಳಗೆ ನೀಡಿದ ಲಿಂಕ್‍ನ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗೆ ಕುಮಾರಿ ಪ್ರಿಯಾಂಕ ಕೆ.ಎಸ್., ಜಿಲ್ಲಾ ಪ್ರಾಜೆಕ್ಟ್ ಮಾನೇಜರ್, ಜಿಲ್ಲಾಧಿಕಾರಿ ಅವರ ಕಚೇರಿ ಇವರನ್ನು ಸಂಪರ್ಕಿಸಬಹುದು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ರಾಜು ಮೊಗವೀರ ಅವರು ತಿಳಿಸಿದ್ದಾರೆ.

Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,