Header Ads Widget

ಸರ್ಚ್ ಕೂರ್ಗ್ ಮೀಡಿಯ

ನೇಪಾಳದ ಸೇನಾ ಮುಖ್ಯಸ್ಥರಿಗೆ ಭಾರತೀಯ ಸೇನೆಯ ಗೌರವ ಜನರಲ್‌ ಹುದ್ದೆ ಪ್ರದಾನ

ನೇಪಾಳದ ಸೇನಾ ಮುಖ್ಯಸ್ಥರಿಗೆ ಭಾರತೀಯ ಸೇನೆಯ ಗೌರವ ಜನರಲ್‌ ಹುದ್ದೆ ಪ್ರದಾನ


ನೇಪಾಳದ ಸೇನಾ ಮುಖ್ಯಸ್ಥರಿಗೆ ಭಾರತವು ಭಾರತೀಯ ಸೇನೆಯ ಗೌರವ ಜನರಲ್‌ ಹುದ್ದೆಯನ್ನು ಪ್ರದಾನಿಸುವ ಮೂಲಕ ಗೌರವಿಸಿದೆ.

ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಇಂದು ರಾಷ್ಟ್ರಪತಿ ಭವನದಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ನೇಪಾಳ ಸೇನಾ ಮುಖ್ಯಸ್ಥ ಪ್ರಭು ರಾಮ್ ಶರ್ಮಾ ಅವರಿಗೆ ಭಾರತೀಯ ಸೇನೆಯ ಜನರಲ್ ಹುದ್ದೆಯನ್ನು ನೀಡಿ ಗೌರವಿಸಿದರು.

ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಮನೋಜ್ ನರವಾಣೆ ಅವರಿಗೆ ನೇಪಾಳದ ಅಧ್ಯಕ್ಷ ಬಿದ್ಯಾ ದೇವಿ ಭಂಡಾರಿ ಅವರು ನವೆಂಬರ್ 2020 ರಲ್ಲಿ ನೇಪಾಳ ಸೇನೆಯ ಗೌರವ ಜನರಲ್ ಪದವಿಯನ್ನು ಪ್ರದಾನಿಸಿ ಗೌರವಿಸಿದ್ದರು. ಅದರಂತೆ ಭಾರತ ಅಲ್ಲಿನ ಸೇನಾ ಮುಖ್ಯಸ್ಥರಿಗೆ ಗೌರವ ಜನರಲ್‌ ಹುದ್ದೆಯನ್ನು ಪ್ರದಾನಿಸಿ ಗೌರವಿಸಿದೆ.

ನೇಪಾಳ ಮತ್ತು ಭಾರತ ಅತ್ಯುತ್ತಮ ಬಾಂಧವ್ಯವನ್ನು ಹೊಂದಿದ್ದು, ಇದರ ದ್ಯೋತಕವಾಗಿ ಗೌರವ ಜನರಲ್‌ ಹುದ್ದೆಯನ್ನು ಪ್ರದಾನ ಮಾಡಲಾಗಿದೆ.

ಜನರಲ್ ಪ್ರಭು ರಾಮ್ ಶರ್ಮಾ ನಿನ್ನೆಯಿಂದ ಮೂರು ದಿನಗಳ ಅಧಿಕೃತ ಭೇಟಿಗಾಗಿ ಭಾರತದಲ್ಲಿದ್ದಾರೆ. ಅವರು ನಿನ್ನೆ ವಾಯುಸೇನೆ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ವಿ ಆರ್ ಚೌಧರಿ ಅವರನ್ನು ಭೇಟಿ ಮಾಡಿದರು. ಅವರು ಭಾರತದಲ್ಲಿ ಹಲವಾರು ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ.

Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,