Header Ads Widget

ಸರ್ಚ್ ಕೂರ್ಗ್ ಮೀಡಿಯ

ಸಿದ್ಧಾಪುರದಲ್ಲಿ ಕುಟ್ಟಪ್ಪ ಬಲಿದಾನ್ ದಿವಸ್‌ನ ಪ್ರಯುಕ್ತ ಶಾಂತಿಪೂಜೆ

ಸಿದ್ಧಾಪುರದಲ್ಲಿ ಕುಟ್ಟಪ್ಪ ಬಲಿದಾನ್ ದಿವಸ್‌ನ ಪ್ರಯುಕ್ತ ಶಾಂತಿಪೂಜೆ


ಸಿದ್ಧಾಪುರ ನ.10: ಸಿದ್ಧಾಪುರ ನಗರದಲ್ಲಿ ಬಿಗಿ ಪೋಲಿಸ್ ಬಂದೋಬಸ್ತ್ ನಡುವೆಯೂ, ಸಿದ್ಧಾಪುರ ಅಯ್ಯಪ್ಪ ದೇವಾಲಯದಲ್ಲಿ ವರ್ಷಂಪ್ರತಿ ವಿವಿಧ ಹಿಂದೂ ಸಂಘಟನೆಗಳ ವತಿಯಿಂದ ನಡೆಸುವ ಕುಟ್ಟಪ್ಪ ಬಲಿದಾನ್ ದಿವಸ್ ನ ಶಾಂತಿಪೂಜೆ ಇಂದು ಬೆಳಗ್ಗೆ ವಿವಿಧ ಹಿಂದೂ ಸಂಘಟನೆ ಕಾರ್ಯಕರ್ತರು, ಪಕ್ಷದ ಕಾರ್ಯಕರ್ತರ ಸಮ್ಮುಖದಲ್ಲಿ ನಡೆಯಿತು.

ಕಾರ್ಯಕರ್ತರು ಭಾರತಮಾತೆಗೆ ಜೈಕಾರ ಹಾಕಿದ ಸಂಧರ್ಭದಲ್ಲಿ ಪೋಲೀಸರು ಮಡಿಕೇರಿಯಿಂದ ಸರ್ಕಲ್ ಇನ್ಸ್ಪೆಕ್ಟರ್ ಮತ್ತು ಪೋಲಿಸ್ ತುಕಡಿ ಆಗಮಿಸುತ್ತಿದ್ದು ಅರೆಸ್ಟ್ ಮಾಡುತ್ತೇವೆ ಅಂಥ ಹೇಳಿದಾಗ ವಿರಾಜಪೇಟೆ ತಾಲ್ಲೂಕು ಬಜರಂಗದಳದ ಮಾಜಿ ಸಹಸಂಚಾಲಕ ಹಾಗೂ ಬಿಜೆಪಿ ಸಿದ್ಧಾಪುರ ಶಕ್ತಿ ಕೇಂದ್ರದ ಹಾಲಿ ಅಧ್ಯಕ್ಷರೂ ಆದ ಪ್ರವೀಣ್ ಸಿದ್ಧಾಪುರ ಮತ್ತು ಪೋಲಿಸರಿಗೆ ಮಾತಿನ ಚಕಮಕಿ ನಡೆಯಿತು. ನಂತರ ಶಾಂತಿಯುತವಾಗಿ ಪೂಜೆ ಸಲ್ಲಿಸಿ ಕಾರ್ಯಕರ್ತರು ದೇವಾಲಯದಿಂದ ನಿರ್ಗಮಿಸಿದರು.

Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,