Header Ads Widget

Responsive Advertisement

ದಲಿತ ಸಂಘರ್ಷ ಸಮಿತಿಯಿಂದ ಪೌರ ಕಾರ್ಮಿಕರಿಗೆ ಸನ್ಮಾನ ಕಾರ್ಯಕ್ರಮ

ದಲಿತ ಸಂಘರ್ಷ ಸಮಿತಿಯಿಂದ ಪೌರ ಕಾರ್ಮಿಕರಿಗೆ ಸನ್ಮಾನ ಕಾರ್ಯಕ್ರಮ


ಗೋಣಿಕೊಪ್ಪಲು: ದಲಿತ ಸಂಘರ್ಷ ಸಮಿತಿ ವತಿಯಿಂದ ಗೋಣಿಕೊಪ್ಪಲು ಪೌರ ಕಾರ್ಮಿಕರಿಗೆ ಸನ್ಮಾನ ಕಾರ್ಯಕ್ರಮವು ಗೋಣಿಕೊಪ್ಪಲುವಿನ ಆರ್ ಎಂ ಸಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಯಿತು. 

ಡಾಕ್ಟರ್ ಬಿ.ಆರ್. ಅಂಬೇಡ್ಕರ್ ರವರ ಭಾವಚಿತ್ರಕೆ ಹೂ ಮಾಲೆ ಹಾಕುವ ಮೂಲಕ  ಗೌರವ ಸಲ್ಲಿಸಿ ಅಥಿತಿಗಳಿಂದ  ಕಾರ್ಯಕ್ರಮ ಉದ್ಘಾಟನೆ ಮಾಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ರೈತ ಸಂಘದ ಜಿಲ್ಲಾಧ್ಯಕ್ಷ ಮನು ಸೋಮಯ್ಯ ಪೌರ ಕಾರ್ಮಿಕರಿಗೆ ಸರ್ಕಾರ ರಾಜ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಬೇಕು. ಅವರ ನೋವುಗಳಿಗೆ ಸರ್ಕಾರ ಸ್ಪಂದಿಸಬೇಕು ಆದರೆ ಈ ಕೆಲಸವನ್ನು  ದಲಿತ ಸಂಘರ್ಷ ಸಮಿತಿ ಮಾಡುತ್ತಾ ಇರುವುದು ಬಹಳ ಸಂತೋಷವಾಯಿತು ಎಂದು ಮನು ಸೋಮಯ್ಯ ಅಭಿಪ್ರಾಯ ವ್ಯಕ್ತಪಡಿಸಿದ್ದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚೈತ್ರ ಮಾತನಾಡಿ ಪೌರ ಕಾರ್ಮಿಕರರನ್ನು ಸಮಾಜ ಗೌರವದಿಂದ ನೋಡಬೇಕು. ನಗರವನ್ನು ಸ್ವಚ್ಛ ಗೊಳಿಸುತಿರುವ ಪೌರ ಕಾರ್ಮಿಕರುಗಳ ಮೂಲಭೂತ ಸೌಕರ್ಯವನ್ನು ಗ್ರಾಮ ಪಂಚಾಯಿತಿ ಹಂತ ಹಂತವಾಗಿ ಸರಿ ಪಡಿಸುತ್ತಾ ಇದೆ. ಪೌರ ಕಾರ್ಮಿಕರ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಅವರನ್ನು ಸಮಾಜ ಮುಖ್ಯ ವಾಹಿನಿಗೆ ತರಲು ನಾವೆಲ್ಲರೂ ಶ್ರಮಿಸೋಣ ಎಂದು ಅಭಿಪ್ರಾಯಪಟ್ಟರು.

ನಾಡಿನ ಬೀದಿ ಬೀದಿಗಳಲ್ಲಿ ಸೂರ್ಯೋದಯಕ್ಕಿಂತ ಮುನ್ನ ಪೊರಕೆ ಹಿಡಿದು ಚಳಿ ಗಾಳಿ ಮಳೆಯನ್ನು ಮತ್ತು ತಮ್ಮ ಆರೋಗ್ಯವನ್ನು ಲೆಕ್ಕಿಸದೆ ನಾಡಿನ ಹಿತಕ್ಕಾಗಿ ಆರೋಗ್ಯಕ್ಕಾಗಿ ನಗರದ ಕಸವನ್ನು ಗುಡಿಸಿ ತೆಗೆದು ನಗರವನ್ನು ಸ್ವಚ್ಛಗೊಳಿಸಿ ಸುಂದರವಾಗಿ ಕಾಣಲು ಶ್ರಮವಹಿಸಿ ದುಡಿಯುವ ಪೌರ ಕಾರ್ಮಿಕರ ಅಮೋಘ ತ್ಯಾಗದ ಸೇವೆಯನ್ನು ಪ್ರಶಂಶಿಸುವುದು ನಮ್ಮಲ್ಲೆರ ಕರ್ತವ್ಯವಾಗಿದೆ ಅವರ ಸೇವೆಯನ್ನು ಸಮಾಜ ಗುರುತಿಸಿ ಅವರ ಕಷ್ಟ ಸುಖಗಳಿಗೆ ಸ್ಪಂದಿಸುವೆ ಎಂದು ಜಿಲ್ಲಾ ಸಂಚಾಲಕರಾದ ಪರಶುರಾಮ ರವರು ನುಡಿದರು.

ದಲಿತ ಸಂಘರ್ಷ ಸಮಿತಿ ಎಂದೂ ಪೌರ ಕಾರ್ಮಿಕರ ಕಷ್ಟ ಸುಖಗಳಿಗೆ ಭಾಗಿಯಾಗುತ್ತ ಅವರ ಸಮಸ್ಯೆಗ ಪರ ಹೋರಾಟ ಮಾಡುತ್ತಲೇ ಬಂದಿದೆ. ಇನ್ನು ಮುಂದೆಯೂ ನಿರಂತರವಾಗಿ ಅವರ ಪರ ಹೋರಾಟಕ್ಕೆ ಬದ್ಧರಾಗಿದ್ದೇವೆ ಎಂದು ರಾಜ್ಯ ಪೌರ ಕಾರ್ಮಿಕರ ಅಧ್ಯಕ್ಷ ರಾಜುರವರು ಅಭಿಪ್ರಾಯ ವ್ಯಕ್ತಪಡಿಸಿದರು. 

ನಂತರ ಅಥಿತಿಗಳಿಂದ ಪೌರ ಕಾರ್ಮಿಕರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕರಾದ ಪರಶುರಾಮುರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ರೈತ ಸಂಘದ ಜಿಲ್ಲಾಧ್ಯಕ್ಷರಾದ ಮನು ಸೋಮಯ್ಯ ಹಾಗೂ ಗೋಣಿಕೊಪ್ಪಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚೈತ್ರ ಕರ್ನಾಟಕದ ರಾಜ್ಯ ಪೌರ ಕಾರ್ಮಿಕರ ಸಂಘದ ಅಧ್ಯಕ್ಷ ರಾಜು ರವರುಗಳು ಭಾಗವಹಿದರು.

ಕಾರ್ಯಕ್ರಮದಲ್ಲಿ ವಿಭಾಗೀಯ ಅಧ್ಯಕ್ಷರಾದ ಕೃಷ್ಣಪ್ಪ ದಲಿತ ಸಂಘರ್ಷ ಸಮಿತಿ ಪ್ರಮುಖರಾದ ಗೋವಿಂದಪ್ಪ ವಕೀಲರಾದ  ಪ್ರದೀಪ್ ಹರೀಶ್  ಶಿವು ಮುರುಘಾ ವಿಜಿ ಹಾಗೂ ಜಿಲ್ಲಾ ಸಮಿತಿಯ ಪ್ರಮುಖರು ಭಾಗವಹಿಸಿದರು. 

ಕಾರ್ಯಕ್ರಮವನ್ನು ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸಿಂಗಿ ಸತೀಶ್ ರವರು ನಿರೂಪಣೆ ಮಾಡಿದರು ದಲಿತ ಸಂಘರ್ಷ ಸಮಿತಿ ನಾಯಕರಾದ ಮಹದೇವ ರವರು ಸ್ವಾಗತಿಸಿದರು.

✍️ವರದಿ: ಶರಫುದ್ದೀನ್ ಗೋಣಿಕೊಪ್ಪಲು

Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,