Header Ads Widget

ಸರ್ಚ್ ಕೂರ್ಗ್ ಮೀಡಿಯ

ಶ್ರವಣ ಉಚಿತ ಶಿಬಿರ; ಶ್ರವಣ ಯಂತ್ರ ವಿತರಣೆ

ಶ್ರವಣ ಉಚಿತ ಶಿಬಿರ; ಶ್ರವಣ ಯಂತ್ರ ವಿತರಣೆ


ಮಡಿಕೇರಿ ಡಿ.23: ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಕಿವಿ, ಮೂಗು ಮತ್ತು ಗಂಟಲು ವಿಭಾಗ, ಹಾಗೂ  ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯ ಬಾಹ್ಯ ಸೇವಾ ಕೇಂದ್ರದ ವತಿಯಿಂದ ಉಚಿತ ಶ್ರವಣ ಶಿಬಿರ ಕಾರ್ಯಕ್ರಮ ನಡೆಯಿತು. 

     ಕಾರ್ಯಕ್ರಮದಲ್ಲಿ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಡೀನ್ ಹಾಗೂ ನಿರ್ದೇಶಕರಾದ ಡಾ.ಕೆ.ಬಿ.ಕಾರ್ಯಪ್ಪ, ಜಿಲ್ಲಾ ಶಸ್ತ್ರಚಿಕಿತ್ಸಕರು ಮತ್ತು ಪ್ರಾಂಶುಪಾಲರಾದ ಡಾ.ವಿಶಾಲ್ ಕುಮಾರ್, ವೈದ್ಯಕೀಯ ಅಧೀಕ್ಷಕರಾದ ಡಾ.ಮಂಜುನಾಥ್, ಸ್ಥಾನೀಯ ವೈದ್ಯಾಧಿಕಾರಿ ಡಾ.ಎನ್.ವಿ.ರೂಪೇಶ್ ಗೋಪಾಲ್, ಕಿವಿ ಮೂಗು ಮತ್ತು ಗಂಟಲು ವಿಭಾಗದ ಮುಖ್ಯಸ್ಥರು ಮತ್ತು ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ ಸಂಯೋಜಕರಾದ ಡಾ.ಶ್ವೇತ ಅವರ ಉಪಸ್ಥಿತಿಯಲ್ಲಿ ಜರುಗಿತು. 

      ಈ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ಉಚಿತವಾಗಿ ಶ್ರವಣ ಯಂತ್ರವನ್ನು ವಿತರಿಸಲಾಯಿತು ಹಾಗೂ ಅಲ್ಲಿ ಉಪಸ್ಥಿತರಿದ್ದ ಜನರಿಗೆ ಕಿವಿಯ ರಕ್ಷಣೆ ಹಾಗೂ ಶ್ರವಣಯಂತ್ರದ ಉಪಯೋಗದ ಬಗ್ಗೆ ತಿಳಿಸಲಾಯಿತು. 

      ಕಳೆದ ಎರಡು ವರ್ಷಗಳಿಂದ, ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ ಅವರ ಸಹಯೋಗದಲ್ಲಿ ಕಿವಿ ಮೂಗು ಮತ್ತು ಗಂಟಲು ವಿಭಾಗ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಗುಣಮಟ್ಟದ ಶ್ರವಣ ಯಂತ್ರವನ್ನು ಉಚಿತವಾಗಿ ವಿತರಿಸಲಾಗುತ್ತಿದೆ.  

       ಆಸ್ಪತ್ರೆಯಲ್ಲಿ ಕಿವಿಯ ತೊಂದರೆಗಳನ್ನು ಪರಿಶೀಲಿಸಲು ಸುಸಜ್ಜಿತವಾದ ಆಧುನಿಕ ಯಂತ್ರ ಉಪಕರಣಗಳು ಲಭ್ಯವಿದ್ದು, ಕೊಡಗಿನ ಜನವಾಸಿಗಳು ಕಿವಿಯ ತೊಂದರೆಗೆ ಕಿವಿ, ಮೂಗು ಮತ್ತು ಗಂಟಲು ವಿಭಾಗಕ್ಕೆ ಭೇಟಿ ಕೊಟ್ಟು ಈ ಸೌಲಭ್ಯ ಪಡೆದುಕೊಳ್ಳಬಹುದು. ಶ್ರವಣ ಯಂತ್ರದ ಅವಶ್ಯಕತೆ ಇರುವವರು ಬಿಪಿಎಲ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಅನ್ನು ಆಸ್ಪತ್ರೆಗೆ ಭೇಟಿಕೊಡುವಾಗ ಜೊತೆಗೆ ತೆಗೆದೆಕೊಂಡು ಬಂದು ಅಗತ್ಯ ಸೌಲಭ್ಯವನ್ನು ಪಡೆದುಕೊಳ್ಳುವಂತೆ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ನಿರ್ದೇಶಕರು ಹಾಗೂ ಡೀನ್ ಅವರು ತಿಳಿಸಿದ್ದಾರೆ.

Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,