Header Ads Widget

Responsive Advertisement

ಪಯಸ್ವಿನಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ಉಚಿತ ಇ-ಶ್ರಮ್ ನೋಂದಣಿ

ಪಯಸ್ವಿನಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ಉಚಿತ ಇ-ಶ್ರಮ್ ನೋಂದಣಿ


ಅಸಂಘಟಿತ ವಲಯದಲ್ಲಿ ದುಡಿಯುವ ವರ್ಗಗಳನ್ನು ಕೇಂದ್ರ ಸರ್ಕಾರದ ಇ-ಶ್ರಮ್ ಯೋಜನೆಯಡಿಯಲ್ಲಿ ಉಚಿತವಾಗಿ ನೋಂದಣಿ ಮಾಡುವ ಅಭಿಯಾನ ತಾ.11.12.2021ರಂದು ಸಹಕಾರ ಸಂಘದ ಚೆಂಬು ಮತ್ತು ಸಂಪಾಜೆ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಜ್ಯೋತಿ ಬೆಳಗುವ ಮೂಲಕ  ಉದ್ಘಾಟಿಸಿ ಮಾತನಾಡಿದ ಸಂಘದ ಅಧ್ಯಕ್ಷರಾದ ಶ್ರೀ ಅನಂತ್ ಊರುಬೈಲು ರವರು,ಕೃಷಿ ಕೂಲಿ ಕಾರ್ಮಿಕ ವರ್ಗದವರೆಲ್ಲರೂ ಇ-ಶ್ರಮ್ ಮೂಲಕ ಪ್ರದಾನ ಮಂತ್ರಿಗಳ ವಿಮಾ ಸೌಲಭ್ಯ, ಸಾಮಾಜಿಕ ಭದ್ರತಾ ಯೋಜನೆ, ವಿಶೇಷ ಸಂದರ್ಭದಲ್ಲಿ ಘೋಷಣೆಯಾಗಬಹುದಾದ ಪ್ಯಾಕೇಜ್ ಮುಂತಾದ ಸೌಲಭ್ಯಗಳನ್ನು ಪಡೆಯಲು ಹೆಚ್ಚಿನ ಸಂಖ್ಯೆಯಲ್ಲಿ ನೋಂದಣಿ ಮಾಡಿಕೊಳ್ಳಲು ಕರೆ ನೀಡಿದರು.

ಸಂಘದ ಉಪಾಧ್ಯಕ್ಷ ರಾಜಾರಾಮ ಕಳಗಿ ಸ್ವಾಗತಿಸಿ,ಸ್ಪಾಟ್ ಕಂಪ್ಯೂಟರ್ ಮುಖ್ಯಸ್ಥ ಕಿಶೋರ್ ಕುಮಾರ್  ವಂದಿಸಿದರು.ಈ ಸಂದರ್ಭದಲ್ಲಿ ಸಂಸ್ಥೆಯ ಸಿಇಒ ,ಆಡಳಿತ ಮಂಡಳಿ ನಿರ್ದೇಶಕರು, ಸಿಬ್ಬಂದಿ, ಫಲಾನುಭವಿಗಳು ಉಪಸ್ಥಿತರಿದ್ದರು.

ಕಲ್ಲುಗುಂಡಿ ಸ್ಪಾಟ್ ಕಂಪ್ಯೂಟರ್ ಸಂಸ್ಥೆ ಇ-ಶ್ರಮ್ ನೋಂದಣಿ ಕಾರ್ಯ ನಿರ್ವಹಿಸಿದರು.

Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,