Header Ads Widget

Responsive Advertisement

ಕಾಫಿ ಬೆಳೆಗಾರರು ಮಣ್ಣು ಪರೀಕ್ಷೆ ಮಾಡಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಕರಾಗುವಂತೆ ಕಾಫಿ ಮಂಡಳಿ ಕೋರಿಕೆ

ಕಾಫಿ ಬೆಳೆಗಾರರು ಮಣ್ಣು ಪರೀಕ್ಷೆ ಮಾಡಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಕರಾಗುವಂತೆ ಕಾಫಿ ಮಂಡಳಿ ಕೋರಿಕೆ


ಮಡಿಕೇರಿ: ಹಿಂದಿನ ವರ್ಷಗಳು ದಕ್ಷಿಣ ಕೊಡಗು ಎಲ್ಲಾ ಭಾಗಗಳಲ್ಲಿ ವಾಡಿಕೆ ಮಳೆಗಿಂತಲೂ ಹೆಚ್ಚಿನ ಮಳೆಯಾದ ಪರಿಣಾಮ ಮಣ್ಣಿನಲ್ಲಿನ ಖನಿಜ ಮತ್ತು ಲವಣಾಂಶಗಳಲ್ಲಿ ಕೊರತೆ ಕಂಡುಬರುವ ಸಾಧ್ಯತೆ ಇದೆ. ಮಣ್ಣಿನ ರಸಸಾರದಲ್ಲಿ ವ್ಯತ್ಯಯ ಉಂಟಾಗಿ ನಾವು ನೀಡುವ ಗೊಬ್ಬರವನ್ನು ಗಿಡಗಳು ಸಮರ್ಪಕವಾಗಿ ಉಪಯೋಗಿಸಿಕೊಳ್ಳಲಾಗದೆ ಕಾಫಿ ಇಳುವರಿಯಲ್ಲಿ ವ್ಯತ್ಯಯವಾಗುವುದರ ಜೊತೆಗೆ ವರ್ಷವಿಡೀ ಕೈಗೊಳ್ಳುವ ಎಲ್ಲಾ ಕೃಷಿ ಚಟುವಟಿಕೆಗಳು ವ್ಯರ್ಥವಾಗುತ್ತವೆ. 

ಈ ನಿಟ್ಟಿನಲ್ಲಿ ಕಾಫಿ ಬೆಳೆಗಾರರು ಮಣ್ಣು ಪರೀಕ್ಷೆಯ ಮಹತ್ವ ತಿಳಿದು, ವೈಜ್ಞಾನಿಕವಾಗಿ ಪರೀಕ್ಷಾಧಾರದ ಮೇಲೆ ನೀಡುವ ಫಲಿತಾಂಶವನ್ನಾಧರಿಸಿ ತಮ್ಮ ತೋಟಗಳಿಗೆ ಸುಣ್ಣ ಮತ್ತು ಗೊಬ್ಬರವನ್ನು ನೀಡುವುದು ಅತೀ ಅವಶ್ಯಕವಾಗಿದೆ. ಈಗಾಗಲೇ ರೊಬಾಸ್ಟ್ ಕಾಫಿಯ ಕೊಯ್ಲು ಪ್ರಾರಂಭವಾಗಿದ್ದು, ಕೊಯ್ಲಿನ ನಂತರ ಎಲ್ಲಾ ಕಾಫಿ ಬೆಳೆಗಾರರು ಮಣ್ಣು ಪರೀಕ್ಷೆ ಮಾಡಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಕರಾಗುವಂತೆ ಕಾಫಿ ಮಂಡಳಿ ತಿಳಿಸಿದೆ. 

ಮಣ್ಣು ಪರೀಕ್ಷೆಗೆ ಮಣ್ಣಿನ ಮಾದರಿಯನ್ನು ತೆಗೆಯುವ ವಿಧಾನದ ಬಗ್ಗೆ ಮತ್ತು ಹೆಚ್ಚಿನ ಮಾಹಿತಿಗೆ ಕಾಫಿ ಮಂಡಳಿ, ಗೋಣಿಕೊಪ್ಪಲು ಸಂಪರ್ಕಿಸಬಹುದು ಎಂದು ಗೋಣಿಕೊಪ್ಪಲು ಕಾಫಿ ಮಂಡಳಿಯ ಉಪ ನಿರ್ದೇಶಕರು ಕೋರಿದ್ದಾರೆ.

Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,