Header Ads Widget

ಸರ್ಚ್ ಕೂರ್ಗ್ ಮೀಡಿಯ

ಜಿಲ್ಲೆಯ ಇಬ್ಬರು ಪತ್ರಕರ್ತರಿಗೆ ‘ಮಾಧ್ಯಮ ರತ್ನ’ ಪ್ರಶಸ್ತಿ; ಮೈಸೂರಿನಲ್ಲಿ ಡಿ.೨೫ ರಂದು ಪ್ರಧಾನ

ಜಿಲ್ಲೆಯ ಇಬ್ಬರು ಪತ್ರಕರ್ತರಿಗೆ ‘ಮಾಧ್ಯಮ ರತ್ನ’ ಪ್ರಶಸ್ತಿ; ಮೈಸೂರಿನಲ್ಲಿ ಡಿ.೨೫ ರಂದು ಪ್ರಧಾನ


ಮುದ್ರಣ ಮಾಧ್ಯಮದಲ್ಲಿ ಗೋಣಿಕೊಪ್ಪಲಿನ ಟಿ.ಎಲ್.ಶ್ರೀನಿವಾಸ್ ಹಾಗೂ ದ್ರಶ್ಯ ಮಾಧ್ಯಮದಲ್ಲಿ ಕೊಡಗು ಜಿಲ್ಲಾ ಟಿ.ವಿ.೯ ವರದಿಗಾರ ಗೋಪಾಲ್ ಸೋಮಯ್ಯ ೨೦೨೧ ರ ‘ಮಾಧ್ಯಮ ರತ್ನ’ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಬೆಂಗಳೂರಿನ ಶಿಕ್ಷಣ ಜ್ಞಾನ ಪತ್ರಿಕೆ ಸಂಪಾದಕ ಎಸ್.ವಿ.ನಾಗರಾಜು ಮತ್ತು ತಂಡ ಹಾಗೂ ಮೈಸೂರಿನ ‘ಲಯನ್ಸ್ ಕ್ಲಬ್ ಆಫ್ ಮೈಸೂರು ಮಿಲೇನಿಯಂ’ ತಂಡ ವಿವಿಧ ಕ್ಷೇತ್ರಗಳಲ್ಲಿನ ಸಾಧಕರನ್ನು ಆಯ್ಕೆ ಮಾಡಿದ್ದು, ಕೊಡಗು ಜಿಲ್ಲೆಯ ಇಬ್ಬರು ಪತ್ರಕರ್ತರಿಗೆ ಈ ಹಿಂದಿನ ಸಾಧನೆಯನ್ನು ಗುರುತಿಸಿ ಆಯ್ಕೆ ಮಾಡಲಾಗಿದೆ.

ಮಾಧ್ಯಮ ರತ್ನ ಪ್ರಶಸ್ತಿಗೆ ಒಟ್ಟು ೬ ಮಂದಿಯನ್ನು ಆಯ್ಕೆ ಮಾಡಲಾಗಿದ್ದು, ಮೈಸೂರು ಪತ್ರಕರ್ತರ ಸಂಘದ ಅಧ್ಯಕ್ಷ ರವಿಕುಮಾರ್, ಮೈಸೂರು ವರದಿಗಾರ ಪ್ರಸನ್ನ, ಮೀಡಿಯಾ ಟಿ.ವಿ.ಮತ್ತು ಮಂಡ್ಯ      ೧೦ಟಿ.ವಿ.ವರದಿಗಾರ ಆರ್.ಮಧುಸೂದನ್, ಹೊಸದುರ್ಗ ರಾಘು ಅವರೂ ‘ಮಾಧ್ಯಮ ರತ್ನ’ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಟಿ.ಎ‌ಲ್. ಶ್ರೀನಿವಾಸ್‌ಗೆ ೪ನೇ ರಾಜ್ಯ ಪ್ರಶಸ್ತಿ ಗರಿ 

ಗೋಣಿಕೊಪ್ಪಲಿನ ಹಿರಿಯ ಪತ್ರಕರ್ತ ಟಿ.ಎಲ್.ಶ್ರೀನಿವಾಸ್ ಇವರು ಕಳೆದ ೩೩ ವರ್ಷದಿಂದ ವಿವಿಧ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ್ದು, ೨೦೧೧ ರಲ್ಲಿ ಪ್ರತಿಷ್ಠಿತ ‘ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ’ಯನ್ನು ಅಂದಿನ ಮುಖ್ಯಮಂತ್ರಿ ಡಿ.ಸದಾನಂದ ಗೌಡ ಅವರಿಂದ ‘ಕನ್ನಡ ಪ್ರಭ’ದ ವರದಿಗಾಗಿ ಸ್ವೀಕರಿಸಿದ್ದರು.

೨೦೨೧ ರಲ್ಲಿ ಇವರ ಪತ್ರಿಕಾ ಮತ್ತು ಸಮಾಜ ಸೇವೆ ಗುರುತಿಸಿ ಮೂರು ಪ್ರಶಸ್ತಿಯನ್ನು ಗಳಿಸಿದ್ದಾರೆ. ತುಮಕೂರುವಿನ ಗುರುಕುಲ ಕಲಾ ಪ್ರತಿಷ್ಠಾನದ ರಾಜ್ಯ ಘಟಕದ ಮೂಲಕ ಹುಲಿಯೂರು ದುರ್ಗದಲ್ಲಿ ೧೩/೦೩/೨೦೨೧ ರಲ್ಲಿ ‘ಕರ್ನಾಟಕ ಸೇವಾ ಮಾಣಿಕ್ಯ’ ಪ್ರಶಸ್ತಿ, ಬೆಂಗಳೂರು ಶೇಷಾದ್ರಿಪುರಂ ಸದ್ಗುರು ಶ್ರೀ ಯೋಗಿ ನಾರೇಯಣ ಸೇವಾ ಟೃಸ್ಟ್ ಮೂಲಕ ತಾ.೧೬/೦೫/೨೦೨೧ ರಂದು ‘ಯೋಗಿ ಸೇವಾ ರತ್ನ-೨೦೨೧’ ಪ್ರಶಸ್ತಿ ಹಾಗೂ ಇದೀಗ ಮೈಸೂರಿನ ಶಿಕ್ಷಕರ ಸದನ,ಸಿದ್ದಾರ್ಥ ನಗರದಲ್ಲಿ ತಾ.೨೫ ರಂದು ಜರುಗುವ ಕಾರ್ಯಕ್ರಮದಲ್ಲಿ ‘ಶಿಕ್ಷಣ ಜ್ಞಾನ ಪತ್ರಿಕೆ’ ೧೯ ನೇ ವರ್ಷದ ವಾರ್ಷಿಕೋತ್ಸವ ಸಮಾರಂಭದಲ್ಲಿ ‘ಮಾಧ್ಯಮ ರತ್ನ’ ಪ್ರಶಸ್ತಿ ನೀಡಿ ಗೌರವಿಸಲಿದೆ.

೧೨/೦೬/೨೦೧೧ ರಂದು ‘ಶಕ್ತಿ ದಿನ ಪತ್ರಿಕೆ’ಯಲ್ಲಿ ಪ್ರಕಟಿತ ‘ಕಾಡಿನ ಮಕ್ಕಳ ಕಣ್ಣೀರು’ ಲೇಖನಕ್ಕೆ ಕೊಡಗು ಜಿಲ್ಲಾ ಪತ್ರಕರ್ತರ ಸಂಘದ ‘ಮಾನವೀಯ ವರದಿ ಪ್ರಶಸ್ತಿ’ ಯನ್ನೂ ಸ್ವೀಕರಿಸಿದ್ದರು. ಕೊಡಗಿನ ಶಕ್ತಿ,ಪ್ರಜಾವಾಣಿ,ಕನ್ನಡಪ್ರಭ ಇತ್ಯಾದಿ ಹಲವು ಪತ್ರಿಕೆಗಳಲ್ಲಿ ದೀರ್ಘ ಕಾಲ ವರದಿಗಾರರಾಗಿ ಸೇವೆ ಸಲ್ಲಿಸಿರುವದನ್ನು ಸ್ಮರಿಸಬಹುದು.ಪ್ರಸ್ತುತ ಕಾಯಕ ಸಮಾಜಗಳ ಒಕ್ಕೂಟ, ಕೊಡಗು ಬಲಿಜ ಸಮಾಜ, ನ್ಯಾಷನಲ್ ಭಾರತ್ ಸೇವಕ್ ಸಮಾಜ್ ಜಿಲ್ಲಾಧ್ಯಕ್ಷರಾಗಿ, ಸುದ್ದಿ ಸಂಸ್ಥೆಯ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಗೋಣಿಕೊಪ್ಪಲಿನ ದಿ.ಲಕ್ಷ÷್ಮಣ್ ನಾಯ್ಡು-ದಿ ಪಂಕಜಮ್ಮ ಇವರ ಕಿರಿಯ ಪುತ್ರ.

ಗೋಪಾಲ್ ಸೋಮಯ್ಯ ಕಿರು ಪರಿಚಯ

ಕೊಡಗು ಜಿಲ್ಲಾ ಪತ್ರಕರ್ತರ ಸಂಘದಿAದ ಅತ್ಯುತ್ತಮ ತನಿಖಾ ವರದಿ, ಅತ್ಯುತ್ತಮ ಪರಿಣಾಮಕಾರಿ ವರದಿ,ಅತ್ಯುತ್ತಮ ವಿಡಿಯೋಗ್ರಾಫಿ, ಪರಿಸರ ಮತ್ತು ಅರಣ್ಯಗಾರಿಕೆ ವರದಿಗಾಗಿ ಗೋಪಾಲ್ ಸೋಮಯ್ಯ ಹಲವು ಪ್ರಶಸ್ತಿ ಪಡೆದಿದ್ದಾರೆ.

ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯಿಂದ ‘ಕೊದಿ ಮೋವ’ ಕೊಡವ ಭಾಷಾ ಕಿರು ಚಿತ್ರ ಸ್ಪರ್ಧೆ( ನಿರ್ದೇಶನ)ಯಲ್ಲಿ ಪ್ರಥಮ,ಕೊಡಗಿನ ಸ್ವಾತಂತ್ರ÷್ಯ ಹೋರಾಟಗಾರರು ಸಾಕ್ಷ÷್ಯ ಚಿತ್ರಕ್ಕೆ ದ್ವಿತೀಯ ಹಾಗೂ ಸಮರ್ಥ ಕನ್ನಡಿಗರು ಸಂಸ್ಥೆಯಿAದ ಸಾಧಕ ಪತ್ರಕರ್ತರ ವಿಭಾಗದಲ್ಲಿ ಗೌರವಕ್ಕೆ ಪಾತ್ರರಾಗಿದ್ದಾರೆ.

ಮಡಿಕೇರಿ ತಾಲ್ಲೂಕು ಮರಗೋಡು ಗ್ರಾಮದ ಸುಬೇದಾರ್ ಐಮಂಡ ಸೋಮಯ್ಯ-ಚೋಂದಮ್ಮ ದಂಪತಿ ಪುತ್ರ ಐಮಂಡ ಗೋಪಾಲ್ ಸೋಮಯ್ಯ ಇವರು ಮಂಗಳೂರು ವಿವಿ ರಾಜ್ಯಶಾಸ್ತçದಲ್ಲಿ ಎಂ.ಎ., ಸಂಹವನ ಮತ್ತು ಪತ್ರಿಕೋದ್ಯಮದಲ್ಲಿ ಎಂ.ಎ. ಮಾಡಿದ್ದು, ದೃಶ್ಯ ಮಾಧ್ಯಮದಲ್ಲಿ ೧೮ ವರ್ಷ ಸೇವೆ ಸಲ್ಲಿಸಿದ್ದಾರೆ.ಈ ಟಿ.ವಿ.ಕನ್ನಡ, ಝೀ ಕನ್ನಡ, ಸುವರ್ಣ ನ್ಯೂಸ್,ಸಮಯ ನ್ಯೂಸ್‌ನಲ್ಲಿ ಬುಲ್ಲೆಟಿನ್ ಪ್ರೊಡ್ಯೂಸರ್, ಇನ್ಪುಟ್ ಮುಖ್ಯಸ್ಥ, ಕ್ರೀಡಾ ವಿಭಾಗದ ಮುಖ್ಯಸ್ಥರಾಗಿ ೧೨ ವರ್ಷ ಸೇವೆ,ಬಿಟಿವಿ ಹಾಗೂ ಕಳೆದ ಒಂದು ವರ್ಷದಿಂದ ಕೊಡಗು ಟಿ.ವಿ.೯ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಇನ್ನೂ ಮೂರು ಪ್ರಶಸ್ತಿ

ಶಿಕ್ಷಣ ಜ್ಞಾನ ಪತ್ರಿಕೆ ಮತ್ತು ಮೈಸೂರು ಲಯನ್ಸ್ ಕ್ಲಬ್ ಸಂಯುಕ್ತ ಆಶ್ರಯದಲ್ಲಿ ಜಿಲ್ಲೆಯ ‘ಅತ್ಯುತ್ತಮ ಶಾಲಾ ಶೈಕ್ಷಣಿಕ ಮತ್ತು ಸಂಘ ಸಂಸ್ಥೆ’ ಪ್ರಶಸ್ತಿಗೆ ಮಾದಾಪುರ ಡಿ.ಚೆನ್ನಮ್ಮ ಪ.ಪೂ.ಕಾಲೇಜು ಆಯ್ಕೆಯಾಗಿದೆ. ಕೂಡಿಗೆ ‘ಡಯಟ್’ನ ಉಪ ನಿರ್ದೇಶಕರಾದ ಸುರೇಶ್ ಕೆ.ವಿ. ಅವರನ್ನು ‘ಶೈಕ್ಷಣಿಕ ಅಡಳಿತ ಸೇವಾ ರತ್ನ’ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಗೋಣಿಕೊಪ್ಪಲು ಸಮೀಪ ಅತ್ತೂರುವಿನ ಸುರೇಶ್ ರೈ ಅವರು ‘ಸಮಾಜ ಸೇವಾ ರತ್ನ’ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

Search Coorg app update ( Kodagu Coorg Search Coorg Media ) ಸರ್ಚ್ ಕೂರ್ಗ್ ಆ್ಯಪ್‌ನ ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು ಕೊಡಗಿನ ಸಮಗ್ರ ಸುದ್ದಿ - ಮಾಹಿತಿಯನ್ನು ಪಡೆಯಲು ತಕ್ಷಣವೇ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಿ ,