ಕಾವೇರಿ ಜಲಮೂಲ ಸಂರಕ್ಷಣಾ ಹೋರಾಟ ವೇದಿಕೆ ಅಸ್ತಿತ್ವಕ್ಕೆ
ಕಾವೇರಿ ಜಲ ಮೂಲ ಸಂರಕ್ಷಣಾ ಹೋರಾಟ ಸಮಿತಿ ಅಧ್ಯಕ್ಷರಾಗಿ ಪುಳಿಂಜನ ಟಿ.ಪೂವಯ್ಯ ಆಯ್ಕೆ.ಉಪಾಧ್ಯಕ್ಷೆಯಾಗಿ ಸಮಾಜ ಸೇವಕಿ ಪಡಿಕಲ್ ಕುಸುಮಾವತಿ,ಪ್ರಧಾನ ಕಾರ್ಯದರ್ಶಿ ಯಾಗಿ ನಾರಾಯಣ ಸ್ವಾಮಿ ನಾಯ್ಡು,ಖಜಾಂಚಿಯಾಗಿ tax officer ಸಲ್ಮಾ ಆಯ್ಕೆ.ಮತ್ತಷ್ಟು ಪದಾಧಿಕಾರಿಗಳ ಆಯ್ಕೆ ಮುಂದಿನ ಸಭೆಯಲ್ಲಿ ಮಾಡಲಾಗುವದು.
ಗೋಣಿಕೊಪ್ಪಲಿನ ಸಿಲ್ವರ್ ಸ್ಕೈ ಸಭಾಂಗಣದಲ್ಲಿ ಜರುಗಿದ ಸಭೆಯಲ್ಲಿ ಕೈಕೇರಿಯ ಜಮ್ಮಡ ಮೋಹನ್, ಹೊಸೂರುವಿನ ತುಷಾರ್ ಕುಲಕರ್ಣಿ, ಪಂಚಮಿ, ಹೆಚ್.ಎನ್.ಮಂಜುಳಾ, ಬೆಂಗಳೂರು ವಿಜಿಲೆನ್ಸ್ ಸ್ಕ್ವಾಡ್ ನ ಬಾದುಮಂಡ ಉಮೇಶ್, ಪತ್ರಕರ್ತರಾದ ಜೆ.ಸೋಮಣ್ಣ, ಖಾಲಿದ್, ಹೆಚ್.ಕೆ.ಜಗದೀಶ್, ಶಕುಂತಲಾ, ಪ್ರೌಢಶಾಲಾ ವಿಜ್ಞಾನ ಶಿಕ್ಷಕ ಕ್ರಷ್ಣ ಚೈತನ್ಯ, ರಾಮಯ್ಯ, ರಾಜಕುಮಾರ್ ಮುಂತಾದವರು ಉಪಸ್ಥಿತರಿದ್ದರು.
ಗೌರವ ಸಲಹೆಗಾರ ಟಿ.ಎಲ್.ಶ್ರೀನಿವಾಸ್ ಪ್ರಾಸ್ತಾವಿಕ ಮಾತನಾಡಿದರು. ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಕೆ.ಬಿ.ಗಿರೀಶ್ ಗಣಪತಿ, ಹೊಸೂರು ಗ್ರಾ.ಪಂ.ಮಾಜಿ ಅಧ್ಯಕ್ಷ ಕೊಲ್ಲೀರ ಗೋಪಿ ಚಿಣ್ಣಪ್ಪ,ಕೊಡಗು ಕ್ಲಾತ್ ಸೆಂಟರ್ ನ ಬೋಸ್ ಮತ್ತಿತರರು ನೂತನ ರಾಜಕೀಯ ರಹಿತ ಸಂಘಟನೆಗೆ ಶುಭಾಶಯ ಕೋರಿದ್ದಾರೆ.
ನಮ್ಮ ಪತ್ರಿಕೋದ್ಯಮವನ್ನು ಬೆಂಬಲಿಸಿ
"ಸರ್ಚ್ ಕೂರ್ಗ್ ಮೀಡಿಯಾ"ದ ಜೀವನಾಡಿಯಾಗಿರುವ ಪ್ರತಿಯೊಬ್ಬ ಓದುಗರಿಗೆ ಪ್ರೀತಿಯ ಧನ್ಯವಾದಗಳು. ನಿಮ್ಮಂತಹ ಓದುಗರಿಂದಲೇ ಗ್ರಾಮೀಣ ಮತ್ತು ಕೃಷಿ ಪತ್ರಿಕೋದ್ಯಮವನ್ನು ಮುಂದೆ ಸಾಗಿಸಲು ನಮಗೆ ಸ್ಫೂರ್ತಿ ಸಿಗುತ್ತದೆ. ಗುಣಮಟ್ಟದ ಗ್ರಾಮೀಣ ಮತ್ತು ಕೃಷಿ ಪತ್ರಿಕೋದ್ಯಮವನ್ನು ಬೆಳೆಸಲು ಮತ್ತು ಗ್ರಾಮೀಣ ಕೊಡಗಿನ ಪ್ರತಿಯೊಂದು ಮೂಲೆಯ ರೈತರು ಮತ್ತು ಜನರಲ್ಲಿಗೆ ತಲುಪಿಸಲು ನಿಮ್ಮಂತಹ ಓದುಗರ ಬೆಂಬಲ ನಮಗೆ ಸದಾ ಬೇಕು. ನಿಮ್ಮ ಪ್ರತಿಯೊಂದು ಕೊಡುಗೆಯೂ ದೊಡ್ಡದಾದರೂ ಸಣ್ಣದಾದರೂ ನಮ್ಮ ಭವಿಷ್ಯಕ್ಕಾಗಿ ಮೌಲ್ಯಯುತವಾಗಿರುತ್ತದೆ.
ನಿಮ್ಮ ಉದಾರ ಕೊಡುಗೆಯನ್ನು ಈ ಸಂಖ್ಯೆಗೆ Google Pay ಮಾಡಿ: 98440 95648https://play.google.com/store/apps/details?id=com.searchcoorg.user.searchcoorg&hl=en_IN&gl=US
Search Coorg Media
Coorg's Largest Online Media Network